ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರ ಲಸಿಕೆ ಅಪಾಯಕಾರಿ ಎಂಬ ಆರೋಗ್ಯ ಸಂಸ್ಥೆ ಎಚ್ಚರಿಕೆ ಕಡೆಗಣಿಸಿದ ಥಾಯ್ಲೆಂಡ್‌

Last Updated 13 ಜುಲೈ 2021, 12:29 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ‘ಕೋವಿಡ್‌ನ ಎರಡು ವಿಭಿನ್ನ ಲಸಿಕೆಗಳ ಮಿಶ್ರ ಡೋಸ್‌ ನೀಡುವುದನ್ನು ಸಮರ್ಥಿಸಿಕೊಳ್ಳಲು ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಅದು ಅಪಾಯಕಾರಿ ಪ್ರವೃತ್ತಿ,’ ಎಂಬ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಗಳನ್ನು ಥಾಯ್ಲೆಂಡ್‌ ಕಡೆಗಣಿಸಿದೆ. ಅಲ್ಲದೆ, ಮಿಶ್ರ ಡೋಸ್‌ ನೀಡುವುವದನ್ನು ಮಂಗಳವಾರ ಸಮರ್ಥಿಸಿಕೊಂಡಿದೆ.

ಕೊರೊನಾ ವೈರಸ್‌ನ ಡೆಲ್ಟಾ ತಳಿಯ ಕಾರಣದಿಂದಾಗಿ ಥಾಯ್ಲೆಂಡ್‌ನಲ್ಲಿ ಪ್ರಕರಣಗಳು ಹೆಚ್ಚಾಗಿವೆ. ಸಾವು ಪ್ರಕರಣಗಳು ತೀವ್ರವಾಗಿ ಏರುತ್ತಿದೆ. ಆರೋಗ್ಯ ವ್ಯವಸ್ಥೆ ದುರ್ಬಲವಾಗುತ್ತಿದೆ. ಹೊಸ ಅಲೆಯನ್ನು ಎದುರಿಸಲು ಥಾಯ್ಲೆಂಡ್‌ ಹೆಣಗಾಡುತ್ತಿದೆ.

12 ವಾರಗಳ ಬದಲಾಗಿ ಆರು ವಾರಗಳಲ್ಲೇ ‘ಬೂಸ್ಟರ್’ನ (ಹೆಚ್ಚುವರಿ ಡೋಸ್‌) ಪರಿಣಾಮವನ್ನು ಪಡೆಯಲು ಚೀನಾದ ಸಿನೋವಾಕ್‌ನ ಮೊದಲ ಡೋಸ್‌ ನಂತರ ಅಸ್ಟ್ರಾಜೆನೆಕಾದ ಲಸಿಕೆಯನ್ನು ಎರಡನೇ ಡೋಸ್‌ನಲ್ಲಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಷ್ಕ್ರಿಯಗೊಂಡ ವೈರಸ್‌ ಮೂಲಕ ಅಭಿವೃದ್ಧಿಪಡಿಸಲಾದ ಲಸಿಕೆ (ಸಿನೋವಾಕ್‌) ಮತ್ತು ವೈರಸ್‌ ಅನ್ನು ರೂಪಾಂತರಿಸಿ ಅಭಿವೃದ್ಧಿಪಡಿಸಲಾದ ಲಸಿಕೆ (ಅಸ್ಟ್ರಾಜೆನೆಕಾದ ಕೋವಿಶೀಲ್ಡ್‌)ಯನ್ನು ಸಂಯೋಜಿಸಿ ನೀಡುವುದರಿಂದ ಇದು ಸಾಧ್ಯ ಎಂದು ಥಾಯ್ಲೆಂಡ್‌ನ ಮುಖ್ಯ ವೈರಾಣು ತಜ್ಞ ಯೊಂಗ್‌ ಪೂವೊರವಾನ್‌ ತಿಳಿಸಿದ್ದಾರೆ.

'ರೋಗವು ವೇಗವಾಗಿ ಹರಡುತ್ತಿರುವ ಸಾಂಕ್ರಾಮಿಕ ಕಾಲದಲ್ಲಿ ಎರಡನೇ ಡೋಸ್‌ ನೀಡಲು ನಾವು 12 ವಾರಗಳವರೆಗೆ ಕಾಯಲು ಸಾಧ್ಯವಿಲ್ಲ‘ ಎಂದು ಅವರು ಹೇಳಿದರು.

‘ಆದರೆ, ಭವಿಷ್ಯದಲ್ಲಿ ಉತ್ತಮವಾದ, ಸುಧಾರಿತ ಲಸಿಕೆಗಳು ಲಭ್ಯವಾಗದೇ, ಪರಿಸ್ಥಿತಿಯನ್ನು ನಿರ್ವಹಿಸಲು ನಾವು ಉತ್ತಮ ಮಾರ್ಗವನ್ನು ಕಂಡುಕೊಳ್ಳುತ್ತೇವೆ," ಎಂದೂ ಅವರು ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್, ‘ಮಿಶ್ರ ಲಸಿಕೆ ತಂತ್ರವನ್ನು ‘ಅಪಾಯಕಾರಿ ಪ್ರವೃತ್ತಿ’ ಎಂದು ಕರೆದ ಮರುದಿನವೇ ಥಾಯ್ಲೆಂಡ್‌ ಈ ಅಭಿಪ್ರಾಯ ನೀಡಿದೆ.

ಥಾಯ್ಲೆಂಡ್‌ನಲ್ಲಿ 3,53,700ಕ್ಕೂ ಹೆಚ್ಚು ಕೊರೊನಾ ವೈರಸ್‌ ಪ್ರಕರಣಗಳು ವರದಿಯಾಗಿದ್ದು, 2,847 ಸಾವುಗಳು ಸಂಭವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT