ಸಲಿಂಗ ವಿವಾಹದ ಮಾನ್ಯತೆ ರಕ್ಷಿಸುವ ಮಸೂದೆ ಅಂಗೀಕರಿಸಿದ ಅಮೆರಿಕದ ಸೆನೆಟ್

ವಾಷಿಂಗ್ಟನ್: ಸಲಿಂಗ ವಿವಾಹದ ಫೆಡರಲ್ ಮಾನ್ಯತೆಯನ್ನು ರಕ್ಷಿಸುವ ಮಸೂದೆಯನ್ನು ಅಮೆರಿಕದ ಸೆನೆಟ್ ಮಂಗಳವಾರ ಅಂಗೀಕರಿಸಿದೆ.
ಅಮೆರಿಕದಲ್ಲಿ 2015ರಲ್ಲೇ ಸಲಿಂಗ ವಿವಾಹವನ್ನು ರಾಷ್ಟ್ರವ್ಯಾಪಿ ಕಾನೂನುಬದ್ಧಗೊಳಿಸಲಾಗಿದ್ದು, ಇದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಮಸೂದೆ ಜಾರಿ ಮಾಡಲಾಗಿದೆ.
‘ಇಂದು ಒಂದು ದೊಡ್ಡ ಸಮಾನತೆಯ ಎಡೆಗೆ ಮಹತ್ವದ ಹೆಜ್ಜೆ ಇಡಲಾಗಿದೆ’ಎಂದು ಸೆನೆಟ್ ನಾಯಕ ಚುಕ್ ಶೂಮರ್ ಹೇಳಿದ್ದಾರೆ.
‘ಈ ಮಸೂದೆ ಅಂಗೀಕರಿಸುವ ಮೂಲಕ ಅಮೆರಿಕದ ಎಲ್ಲ ನಾಗರಿಕರ ಧ್ವನಿಯನ್ನು ಆಲಿಸಬೇಕು ಎಂಬ ಸಂದೇಶ ನೀಡಿದೆ. ನೀವು ಯಾರೇ ಆಗಿರಲಿ. ಯಾರನ್ನೇ ಪ್ರೀತಿಸುತ್ತಿರಲಿ. ಕಾನೂನಿನ ಅಡಿಯಲ್ಲಿ ನೀವು ಘನತೆ ಮತ್ತು ಸಮಾನತೆಗೆ ಅರ್ಹರು’ ಎಂದು ಅವರು ಹೇಳಿದ್ದಾರೆ.
ಮಸೂದೆಯ ಪರ 61 ಮತಗಳು ಮತ್ತು ವಿರುದ್ಧವಾಗಿ 36 ಮತಗಳು ಬಿದ್ದಿದ್ದವು. ಡೆಮಾಕ್ರಟಿಕ್ನ 49 ಮತ್ತು ರಿಪಬ್ಲಿಕ್ ಪಕ್ಷದ 12 ಮಂದಿ ಮಸೂದೆ ಪರ ಮತ ಹಾಕಿದ್ದರು. ಡೆಮಾಕ್ರಟಿಕ್ ಪಕ್ಷದ ಒಬ್ಬರು ಮತ್ತು ರಿಪಬ್ಲಿಕ್ ಪಕ್ಷದ ಇಬ್ಬರು ಸಭೆಗೆ ಗೈರಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.