ಜೆರುಸಲೇಂ: ಸುಪ್ರೀಂ ಕೋರ್ಟ್ ಮೇಲೆ ಸಂಸದರಿಗೆ ಹೆಚ್ಚಿನ ನಿಯಂತ್ರಣ ಹೊಂದಲು ಅವಕಾಶ ನೀಡುವ ಸರ್ಕಾರದ ವಿವಾದಾತ್ಮಕ ನ್ಯಾಯಾಂಗ ಸುಧಾರಣಾ ಯೋಜನೆ ವಿರುದ್ಧ ಇಸ್ರೇಲ್‌ನ ಸಾವಿರಾರು ಮಂದಿ ಸೋಮವಾರ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು.
ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಕೈಗೊಂಡ ನಿರ್ಧಾರಗಳಿಗೆ ಶಾಸನಸಭೆಯಲ್ಲಿ ಪ್ರಾಥಮಿಕ ಮತದಾನ ಮೂಲಕ ಅನುಮೋದನೆ ಪಡೆಯುವ ಯತ್ನದಲ್ಲಿದೆ. ಇನ್ನೊಂದಡೆ ಈ ತೀರ್ಮಾನಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇಸ್ರೇಲ್ ಸಂಸತ್ತಿನ ಹೊರಗೆ ಸಾವಿರಾರು ಜನರು ಜಮಾವಣೆಗೊಂಡು, ಇಸ್ರೇಲ್ ಧ್ವಜಗಳನ್ನು ಬೀಸುತ್ತಾ, ‘ಇಸ್ರೇಲ್‌ನ ಪ್ರಜಾಪ್ರಭುತ್ವ ಉಳಿಸಿ’ ಮತ್ತು ‘ಇಡೀ ಜಗತ್ತು ನೋಡುತ್ತಿದೆ’ ಎಂಬ ಫಲಕ ಪ್ರದರ್ಶಿಸಿದರು.
ಸುಧಾರಣಾ ಯೋಜನೆಗೆ ಸಂಬಂಧಿಸಿ ಭಾನುವಾರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಅಧ್ಯಕ್ಷ ಐಸಾಕ್ ಹೆರ್ಜೋಗ್, ಇಸ್ರೇಲ್ ‘ಕಾನೂನು ಮತ್ತು ಸಾಮಾಜಿಕ ಅಧಃಪತನದ ಅಂಚಿನಲ್ಲಿದೆ’ ಎಂದು ಎಚ್ಚರಿಸಿದರು.
ಚುನಾಯಿತ ಪ್ರತಿನಿಧಿಗಳು ಮತ್ತು ರಾಷ್ಟ್ರದ ಉನ್ನತ ನ್ಯಾಯಾಲಯದ ನಡುವಿನ ಅಧಿಕಾರ ಅಸಮತೋಲನವನ್ನು ಸರಿಪಡಿಸಲು ಸುಧಾರಣೆಗಳು ಅವಶ್ಯಕ ಎಂದು ನೆತನ್ಯಾಹು ಮತ್ತು ಮಿತ್ರಪಕ್ಷಗಳು ಹೇಳುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.