ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣೆಯಾಗಿದ್ದ 3 ವರ್ಷದ ಮಗು 3 ದಿನಗಳ ನಂತರ ಕಾಡಿನಲ್ಲಿ ಪತ್ತೆ

Last Updated 7 ಸೆಪ್ಟೆಂಬರ್ 2021, 9:37 IST
ಅಕ್ಷರ ಗಾತ್ರ

ಸಿಡ್ನಿ: ಮನೆಯಿಂದ ತಪ್ಪಿಸಿಕೊಂಡಿದ್ದ ಮೂರು ವರ್ಷದ ಮಗುವನ್ನು ಮೂರು ದಿನಗಳ ನಂತರ ಪತ್ತೆ ಹಚ್ಚುವಲ್ಲಿ ಆಸ್ಟ್ರೇಲಿಯಾದ ತುರ್ತು ಸೇವೆಗಳ ತಂಡ ಸೋಮವಾರ ಯಶಸ್ವಿಯಾಗಿದೆ. ದಟ್ಟ ಕಾಡಿನಲ್ಲಿ ಮಗು ಪತ್ತೆಯಾಗಿದ್ದು, ಎಲ್ಲರಲ್ಲೂ ಆಶ್ಚರ್ಯ ಮೂಡಿದೆ.

ಸಿಡ್ನಿಯಿಂದ 150 ಕಿ.ಮೀ ದೂರದ ವಾಯುವ್ಯ ಪ್ರಾಂತ್ಯದಹಂಟರ್‌ ಎಂಬಲ್ಲಿಈ ಘಟನೆ ನಡೆದಿದೆ. ಆ್ಯಂಟನಿ ಎಜೆ ಎಲ್‌ಫಾಲಾಕ್‌ ಎಂಬ ಹೆಸರಿನ ಮಗು ಮೂರು ದಿನಗಳ ಹಿಂದೆ ನಾಪತ್ತೆಯಾಗಿತ್ತು. ತುರ್ತು ಸೇವೆಗಳ ತಂಡವು ಮಗುವಿಗಾಗಿ ತೀವ್ರ ಶೋಧ ನಡೆಸಿತ್ತು.

ರಕ್ಷಣಾ ಕಾರ್ಯಾಚರಣೆಯ ವಿಡಿಯೊವನ್ನು ಆಸ್ಟ್ರೇಲಿಯಾದ ತುರ್ತು ಸೇವೆ ವಿಭಾಗ ಬಿಡುಗಡೆ ಮಾಡಿದೆ. ಕಾಡಿನಲ್ಲಿ ಹತಾಶ ಸ್ಥಿತಿಯಲ್ಲಿ ಪತ್ತೆಯಾಗಿರುವ ಮಗು, ಬೊಗಸೆಯಲ್ಲಿ ನೀರೆತ್ತಿ ಕುಡಿಯುತ್ತಿರುವುದು ‌ವಿಡಿಯೊದಲ್ಲಿದೆ.

ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಹದ ಮೇಲೆ ತರಚುಗಾಯಗಳು, ಬಿದ್ದಾಗ ಆದ ಏಟುಗಳು ಕಾಣಿಸಿವೆ.

ರಕ್ಷಣಾ ಕಾರ್ಯಾಚರಣೆಯ ನಂತರ ಮಾತನಾಡಿರುವ ಮಗುವಿನ ತಂದೆ, ಎಲ್‌ಫಾಲಾಕ್, ಇದೊಂದು ಪವಾಢ ಎಂದು ಹೇಳಿದ್ದಾರೆ.

ಮಗು ಹೇಗೆ ತಪ್ಪಿಸಿಕೊಂಡಿತು ಎಂಬುದರ ಬಗ್ಗೆ ಸ್ಪಷ್ಟಕಾರಣಗಳು ತಿಳಿದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT