ಶನಿವಾರ, ಏಪ್ರಿಲ್ 1, 2023
29 °C

ಯುರೋಪ್‌ನಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚಳ ತೀವ್ರ ಆತಂಕಕಾರಿ: ಡಬ್ಲ್ಯುಎಚ್‌ಒ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕೋಪನ್‌ಹೆಗನ್‌: ಯುರೋಪ್‌ನಲ್ಲಿ ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿರುವುದು ತೀವ್ರ ಆತಂಕ ಸೃಷ್ಟಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್‌ ಮುಖ್ಯಸ್ಥ ಹೇಳಿದ್ದಾರೆ.

ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಹ್ಯಾನ್ಸ್‌ ಕ್ಲೂ, ‘ಯುರೋಪ್‌ನ 53 ದೇಶಗಳಲ್ಲಿ ಪ್ರಸ್ತುತ ಕೋವಿಡ್‌ನ ಪ್ರಸರಣದ ವೇಗವು ತೀವ್ರ ಆತಂಕಕಾರಿಯಾಗಿದೆ’ ಎಂದು ಹೇಳಿದರು.

‘ದಾಖಲೆ ಮಟ್ಟದಲ್ಲಿ ಕೋವಿಡ್‌ ಪ್ರಕರಣಗಳು ಏರುತ್ತಿವೆ. ಕೊರೊನಾ ವೈರಸ್‌ನ ರೂಪಾಂತರ ಮಾದರಿಯಾದ ಡೆಲ್ಟಾದಿಂದ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ’ ಎಂದು ಕ್ಲೂ ತಿಳಿಸಿದ್ದಾರೆ.

ಫೆಬ್ರುವರಿ ವೇಳೆಗೆ ಯುರೋಪ್‌ನಲ್ಲಿ ಐದು ಲಕ್ಷ ಮಂದಿ ಕೋವಿಡ್ -19ಗೆ ಬಲಿಯಾಗಬಹುದು ಎಂದೂ ಅವರು ಅಂದಾಜಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು