ಶುಕ್ರವಾರ, ಮೇ 27, 2022
23 °C

ವಾಗ್ದಂಡನೆ ಅಸಾಂವಿಧಾನಿಕ: ಟ್ರಂಪ್‌ ಪರ ವಕೀಲರ ಪ್ರತಿಪಾದನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಡೊನಾಲ್ಡ್‌ ಟ್ರಂಪ್‌ ಅವರು ಈಗ ಅಮೆರಿಕದ ಅಧ್ಯಕ್ಷರಲ್ಲ. ಹೀಗಾಗಿ ಅವರ ವಿರುದ್ಧ ಮಂಡಿಸಲಾಗುವ ವಾಗ್ದಂಡನೆ ನಿರ್ಣಯವೇ ಅಸಾಂವಿಧಾನಿಕ. ಈ ನಿರ್ಣಯವನ್ನು ವಜಾ ಮಾಡಬೇಕು ಎಂದು ಟ್ರಂಪ್‌ ಪರ ವಕೀಲರು ಹೇಳಿದ್ದಾರೆ.

ಈ ವಾಗ್ದಂಡನೆ ನಿರ್ಣಯವನ್ನು ಫೆ. 8ರಂದು ಸೆನೆಟ್‌ನಲ್ಲಿ ಮಂಡಿಸಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ 80 ಪುಟಗಳ ವಿವರಗಳನ್ನು ಡೆಮಾಕ್ರಟಿಕ್‌ ಸಂಸದರು ಬಿಡುಗಡೆ ಮಾಡಿದ್ದಾರೆ. ಇನ್ನು ಮುಂದೆ ಟ್ರಂಪ್‌ ಅವರು ಆಡಳಿತದ ಯಾವುದೇ ಹುದ್ದೆಗೆ ಏರದಂತೆ ನಿಷೇಧ ಹೇರುವ ಪ್ರಸ್ತಾವವನ್ನು ಸಹ ಈ ನಿರ್ಣಯ ಒಳಗೊಂಡಿದೆ.

100 ಸದಸ್ಯ ಬಲದ ಸೆನೆಟ್‌ನಲ್ಲಿ ಡೆಮಾಕ್ರಟಿಕ್‌ ಸದಸ್ಯರ ಸಂಖ್ಯೆ 50. ಟ್ರಂಪ್‌ ವಿರುದ್ಧದ ವಾಗ್ದಂಡನೆ ಯಶಸ್ವಿಯಾಗಬೇಕಾದರೆ 17 ಜನ ರಿಪಬ್ಲಿಕನ್‌ ಸಂಸದರ ಬೆಂಬಲ ಅಗತ್ಯ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು