ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ ಹೆಮ್ಮೆ ಇದೆ: ಟ್ರಂಪ್ ವಿದಾಯ ಭಾಷಣ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದಾಯದ ಭಾಷಣ
Last Updated 20 ಜನವರಿ 2021, 9:25 IST
ಅಕ್ಷರ ಗಾತ್ರ

ವಾಷಿಂಗ್ಟನ್‌: 'ನೂತನ ಆಡಳಿತಕ್ಕೆ ಶುಭವಾಗಲಿ. ಅಮೆರಿಕ ರಾಷ್ಟ್ರವನ್ನು ಸುರಕ್ಷಿತ ಮತ್ತು ಸಮೃದ್ಧವಾಗಿಡುವ ಮೂಲಕ ಯಶಸ್ವಿಯಾಗಿ ಆಡಳಿತ ನಡೆಸುವಂತಾಲಿ' ಎಂದು ಪ್ರಾರ್ಥಿಸುವುದಾಗಿ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.

ಮೊದಲೇ ಚಿತ್ರೀಕರಿಸಿರುವ ಡೊನಾಲ್ಡ್‌ ಟ್ರಂಪ್ ಅವರ ವಿದಾಯ ಭಾಷಣದ ವಿಡಿಯೊವನ್ನು ಶ್ವೇತಭವನ ಮಂಗಳವಾರ ಬಿಡುಗಡೆ ಮಾಡಿದೆ.

‘ಹರಿದು ಹಂಚಿ ಹೋಗಿರುವ ರಾಷ್ಟ್ರದ ಮೌಲ್ಯಗಳನ್ನು ಅಮೆರಿಕನ್ನರು ಒಟ್ಟುಗೂಡಿಸಬೇಕು. ಭಿನ್ನಾಭಿಪ್ರಾಯ, ದ್ವೇಷವನ್ನು ಮೀರಿ, ಎಲ್ಲರೂ ಒಗ್ಗಟ್ಟಿನಿಂದ ನಿಗಿದಿತ ಗುರಿ ತಲುಪಲು ಪ್ರಯತ್ನಿಸಬೇಕು ಎಂದು ಟ್ರಂಪ್ ಕರೆ ನೀಡಿದ್ದಾರೆ. ಈ ಭಾಷಣದಲ್ಲಿ ಎಲ್ಲೂ ಜೋ ಬೈಡನ್ ಬಗ್ಗೆ ಪ್ರಸ್ತಾಪಿಸಿಲ್ಲ.

ಈ ತಿಂಗಳ ಆರಂಭದಲ್ಲಿ ಕ್ಯಾಪಿಟಲ್‌ನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿದ್ದಾರೆ. ಆ ದಾಳಿ ಅಮೆರಿಕನ್ನರಲ್ಲಿ ದಿಗ್ಭ್ರಮೆ ಮೂಡಿಸಿದೆ. ಇಂಥ ರಾಜಕೀಯ ದಾಳಿಯನ್ನು ನಾನೂ ಎಂದೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

‘ನನ್ನ ಆಡಳಿತದ ಅವಧಿಯಲ್ಲಿ ಅಮೆರಿಕವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಿದ್ದೇನೆ. ಅದಕ್ಕಾಗಿ ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ. ಇಂಥ ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸುವುದಕ್ಕಾಗಿ ನೀವು ನನ್ನನ್ನು ಆಯ್ಕೆ ಮಾಡಿದ್ದಿರಿ. ನಾನು ಅದರಂತೆ ನಡೆದುಕೊಂಡಿದ್ದೇನೆ. ನಿಮ್ಮ ಅಗತ್ಯಗಳನ್ನು ಪೂರೈಸುವುದು ನನ್ನ ಮೊದಲ ಮತ್ತು ಕೊನೆಯ ಆದ್ಯತೆಯಾಗಿತ್ತು‘ ಎಂದು ಹೇಳಿದರು.

‘ಅಮೆರಿಕದ 45ನೇ ಅಧ್ಯಕ್ಷನಾಗಿ ನನ್ನ ಅವಧಿಯನ್ನು ಪೂರ್ಣಗೊಳಿಸಿದ್ದೇನೆ. ತನ್ನ ಅಧಿಕಾರವಧಿಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ನನಗೆ ಹೆಮ್ಮೆ ಇದೆ. ಹಾಗಾಗಿ ಅಷ್ಟೇ ಖುಷಿಯಿಂದ ನಿರ್ಗಮಿಸುತ್ತಿದ್ದೇನೆ‘ ಎಂದು ಹೇಳಿದ್ದಾರೆ.

ಈ ಅವಧಿಯಲ್ಲಿ ನಾನು ಮಾಡಿರುವ ಕೆಲಸಗಳು, ಸಾಧಿಸಿರುವ ಕಾರ್ಯಗಳ ಬಗ್ಗೆ ನಿಜವಾಗಿಯೂ ಹೆಮ್ಮೆ ಇದೆ. ಯಾವ ಉದ್ದೇಶದಿಂದ ಈ ಜವಾಬ್ದಾರಿ ವಹಿಸಿಕೊಂಡಿದ್ದೆನೋ, ಅದಕ್ಕಿಂತ ಹೆಚ್ಚಿನ ಗುರಿ ಸಾಧಿಸಿದ್ದೇನೆ‘ ಎಂದು ಟ್ರಂಪ್ ವಿವರಿಸಿದರು.

ಅಮೆರಿಕದ ಅಧ್ಯಕ್ಷನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನಗೆ ಬಹುದೊಡ್ಡ ಗೌರವ ಎಂದು ಹೇಳಿದ್ದಾರೆ.

ತಮ್ಮ ಆಡಳಿತದ ಅವಧಿಯಲ್ಲಿನ ಜ. 20, 2017 ರಿಂದ ಜ.20ರ ವರೆಗಿನ 2021ವರೆಗೆ ನಡೆದ ಕೆಲವು ಪ್ರಮುಖ ಘಟನೆಗಳನ್ನು ತಮ್ಮ ವಿದಾಯ ಭಾಷಣದಲ್ಲಿ ಟ್ರಂಪ್ ನೆನಪಿಸಿಕೊಂಡಿದ್ದಾರೆ.

‘ನಮ್ಮ ಮಿತ್ರ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಮತ್ತೆ ಪುನಶ್ಚೇತನಗೊಳಿಸಿದ್ದೇನೆ. ಹಿಂದೆಂದಿಗಿಂತಲೂ ಹೆಚ್ಚು ಚೀನಾದ ಉಪಟಳವನ್ನು ನಿಯಂತ್ರಿಸಿದ ತೃಪ್ತಿ ಇದೆ. ಯಾವುದೇ ಯುದ್ಧ ಮತ್ತು ರಕ್ತಪಾತ, ಹಿಂಸಾಚಾರಕ್ಕೆ ಅವಕಾಶ ನೀಡದೇ ಅಧಿಕಾರ ಪೂರೈಸಿದ ಸಮಾಧಾನ, ಹೆಮ್ಮೆ ನನಗಿದೆ‘ ಎಂದು ಟ್ರಂಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT