ಶುಕ್ರವಾರ, ಜನವರಿ 27, 2023
27 °C

ಹೂಸ್ಟನ್‌: ಈಜಲು ತೆರಳಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೂಸ್ಟನ್‌ (ಪಿಟಿಐ): ವಾರಾಂತ್ಯದ ರಜೆಯಲ್ಲಿ, ಮಿಸೌರಿ ರಾಜ್ಯದ ಒಝಾರ್ಕ್‌ ಸರೋವರದಲ್ಲಿ ಈಜಲು ತೆರಳಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

‘ತೆಲಂಗಾಣ ರಾಜ್ಯದವರಾದ ಉತ್ತೇಜ್‌ ಕುಂಟ (24) ಮತ್ತು ಶಿವ ಕೆಲ್ಲಿಗಾರಿ (25) ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಘಟನೆಯು ಶನಿವಾರ ನಡೆದಿದೆ. ಉತ್ತೇಜ್‌ ಅವರು ಮೊದಲಿಗೆ ಸರೋವರದಲ್ಲಿ ಈಜಲು ತೆರಳಿದರು. ಕೆಲ ಹೊತ್ತಿನಲ್ಲಿ ಮುಳುಗಲು ಆರಂಭಿಸಿದರು. ಸ್ನೇಹಿತನನ್ನು ಕಾಪಾಡಲು ಸರೋವರಕ್ಕೆ ಧುಮುಕಿದ ಶಿವ ಕೂಡ ಮುಳುಗಿದರು. ಉತ್ತೇಜ್‌ ಅವರ ಮೃತದೇಹವು ಎರಡು ಗಂಟೆಗಳ ಒಳಗಾಗಿಯೇ ಸಿಕ್ಕಿತು. ಆದರೆ, ಶಿವ ಅವರ ಮೃತದೇಹವು ಭಾನುವಾರ ದೊರಕಿತು’ ಎಂದು ಮಾಹಿತಿ ನೀಡಿದರು.

ಮೃತದೇಹಗಳನ್ನು ಭಾರತಕ್ಕೆ ವಾಪಾಸು ತರಿಸಿಕೊಳ್ಳಲು ಕುಟುಂಬದವರಿಗೆ ಬೇಕಾದ ಅಗತ್ಯ ಸಹಾಯವನ್ನು ಮಾಡುವಂತೆ ತೆಲಂಗಾಣ ಸಚಿವ ಕೆ.ಟಿ. ರಾಮರಾವ್‌ ಅವರು ತಮ್ಮ ಕಾರ್ಯಕರ್ತರಿಗೆ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು