ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಅಧ್ಯಕ್ಷರ ಜೊತೆ ಚರ್ಚಿಸದ ಹೊರತು ಕದನ ವಿರಾಮ ಸಾಧ್ಯವಿಲ್ಲ: ಝೆಲೆನ್‌ಸ್ಕಿ

Last Updated 22 ಮಾರ್ಚ್ 2022, 2:16 IST
ಅಕ್ಷರ ಗಾತ್ರ

ಯುದ್ಧಗೊನೆಗಾಣಿಸಲು ರಷ್ಯಾ ಮತ್ತು ಉಕ್ರೇನ್ ನಡುವೆ ಸೋಮವಾರ ನಡೆದ 5ನೇ ಸುತ್ತಿನ ನಿರ್ಣಾಯಕ ಶಾಂತಿಮಾತುಕತೆಯೂ ಫಲಿಸಿಲ್ಲ. ಹೀಗಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ನೇರವಾಗಿ ಭೇಟಿಯಾಗದ ಹೊರತು ತನ್ನ ದೇಶದಲ್ಲಿ ಯುದ್ಧವನ್ನು ಕೊನೆಗಾಣಿಸಲು ಈ ರೀತಿಯ ಮಾತುಕತೆಗಳಿಂದ ಸಾಧ್ಯವಿಲ್ಲ ಎಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.

'ನಾವು ರಷ್ಯಾ ಅಧ್ಯಕ್ಷರೊಂದಿಗೆ ಸಭೆ ನಡೆಸುವವರೆಗೆ, ಯುದ್ಧವನ್ನು ನಿಲ್ಲಿಸಲು ಅವರು ಏನು ಮಾಡುತ್ತಿದ್ದಾರೆ ಮತ್ತು ರಾಜಿ ಮಾಡಿಕೊಳ್ಳಲು ನಾವು ಒಪ್ಪಲಿಲ್ಲವಾದರೆ ಅವರು ಮುಂದೆ ಯಾವ ಹಾದಿ ಹಿಡಿಯುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಜವಾಗಿಯೂ ಸಾಧ್ಯವಿಲ್ಲ ಎಂಬುದನ್ನು ನಾನು ನಂಬುತ್ತೇನೆ ಎಂದು ಇಂಟರ್‌ಫ್ಯಾಕ್ಸ್ ಉಕ್ರೇನ್ ಉಲ್ಲೇಖಿಸಿರುವ ಸಂದರ್ಶನದಲ್ಲಿ ಝೆಲೆನ್‌ಸ್ಕಿ ಹೇಳಿದ್ದಾರೆ.

ಯುರೋಪಿಯನ್ ಪಬ್ಲಿಕ್ ಟೆಲಿವಿಷನ್ ನೆಟ್‌ವರ್ಕ್‌ಗಳಲ್ಲಿ ಸಂದರ್ಶನ ನೀಡಿದ ಝೆಲೆನ್‌ಸ್ಕಿ, ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಿತ ಪ್ರದೇಶಗಳಲ್ಲಿ ಏನು ಮಾಡಬೇಕೆಂದು ಇಂತಹ ಸಭೆಯಲ್ಲಿ ನಿರ್ಧರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

'ರಷ್ಯಾ ಆಕ್ರಮಿತ ಪ್ರದೇಶಗಳ ಸಮಸ್ಯೆಯನ್ನು ಪ್ರಸ್ತಾಪಿಸಲು ನಾನು ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಸಭೆಗೆ ಸಿದ್ಧನಿದ್ದೇನೆ. ಆದರೆ, ಅವರಿಲ್ಲದ ಇಂತಹ ಸಭೆಯಲ್ಲಿ ಪರಿಹಾರ ಲಭ್ಯವಾಗುವುದಿಲ್ಲ ಎಂಬುದು ನನಗೆ ಖಾತರಿಯಾಗಿದೆ' ಎಂದು ಹೇಳಿದ್ದಾರೆ.

ರಷ್ಯಾ ಫೆ.24ರಿಂದ ಉಕ್ರೇನ್ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದು, ಈವರೆಗೂ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಸಾವಿರಾರು ಮಂದಿ ತಮ್ಮ ದೇಶ ತೊರೆದು ಪಕ್ಕದ ದೇಶಗಳಿಗೆ ವಲಸೆ ಹೋಗಿದ್ದಾರೆ. ಮುಂಬರುವ ದಿನಗಳಲ್ಲಿ ಉಕ್ರೇನ್‌ನಿಂದ ವಲಸೆ ಬರುವವರ ಸಂಖ್ಯೆ 1 ಕೋಟಿಗೂ ಅಧಿಕವಾಗಲಿದೆ ಎಂದು ಜರ್ಮನಿ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT