ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಶಸ್ತ್ರತ್ಯಾಗ ಮಾಡಲು ಸಾಧ್ಯವೇ ಇಲ್ಲ: ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ

Last Updated 26 ಫೆಬ್ರುವರಿ 2022, 12:33 IST
ಅಕ್ಷರ ಗಾತ್ರ

ಕೀವ್‌: ಉಕ್ರೇನ್‌ ಸೈನ್ಯ ನಿಶ್ಯಸ್ತ್ರಗೊಳ್ಳಲಿದೆ ಮತ್ತು ಸೇನೆಯನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂಬ ವರದಿಗಳನ್ನು ಉಕ್ರೇನ್‌ನ ಅಧ್ಯಕ್ಷ ವ್ಲಾಡಿಮಿರ್‌ ಝೆಲೆನ್‌ಸ್ಕಿ ಶನಿವಾರ ನಿರಾಕರಿಸಿದ್ದಾರೆ.

‘ನಾವು ಶಸ್ತ್ರ ತ್ಯಾಗ ಮಾಡುವುದಿಲ್ಲ. ನಮ್ಮ ಸೈನ್ಯ ಮತ್ತು ನಮ್ಮ ದೇಶದ ಮೇಲೆ ನಾವು ವಿಶ್ವಾಸವಿಟ್ಟಿದ್ದೇವೆ. ನಾವು ಅದನ್ನು ರಕ್ಷಿಸುತ್ತೇವೆ. ಕೀವ್ ಅನ್ನು ಬಿಟ್ಟುಕೊಡುವ ಮಾತೇ ಇಲ್ಲ’ ಎಂದು ಎಂದು ಝೆಲೆನ್‌ಸ್ಕಿ ತಿಳಿಸಿದರು.

ರಾಜಧಾನಿ ಕೀವ್‌ ನಗರದ ಮೇಲಿನ ರಷ್ಯಾ ಪಡೆಗಳ ಶೆಲ್ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 35 ನಿವಾಸಿಗಳು ಗಾಯಗೊಂಡಿದ್ದಾರೆ ಎಂದು ಕೀವ್ ಮೇಯರ್ ವಿಟಾಲಿ ಕ್ಲಿಟ್ಸ್‌ಕೊ ತಿಳಿಸಿದ್ದಾರೆ.


ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಮಕ್ಕಳು ಸೇರಿದಂತೆ 198 ಉಕ್ರೇನ್‌ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಆರೋಗ್ಯ ಸಚಿವ ವಿಕ್ಟರ್ ಲಿಯಾಶ್ಕೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT