ಭಾನುವಾರ, ಜೂನ್ 13, 2021
22 °C

ಕೋವಿಡ್: ‘ಜಾಗತಿಕ ಕಾರ್ಯಪಡೆ’ ಸಮಿತಿಗೆ ಮೂವರು ಭಾರತೀಯ ಸಿಇಒಗಳು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಕೋವಿಡ್‌ ವಿರುದ್ಧದ ಭಾರತದ ಹೋರಾಟಕ್ಕೆ ನೆರವಾಗಲು ಸಂಪನ್ಮೂಲಗಳನ್ನು ಕ್ರೋಡೀಕರಿಸಲು ರಚಿಸಲಾಗಿರುವ ಜಾಗತಿಕ ಕಾರ್ಯಪಡೆಯ ಸಮಿತಿಗೆ ಗೂಗಲ್‌ನ ಸುಂದರ್ ಪಿಚೈ, ಡೆಲಾಯ್ಟ್‌ನ ಪುನೀತ್ ರೆಂಜನ್ ಮತ್ತು ಅಡೋಬ್‌ನ ಶಂತನು ನಾರಾಯಣ್ ಅವರು ಸೇರ್ಪಡೆಗೊಂಡಿದ್ದಾರೆ.

ಮೂವರು ಭಾರತೀಯ-ಅಮೆರಿಕನ್ ಸಿಇಒಗಳ ಹೆಸರನ್ನು ಗುರುವಾರ ಕಾರ್ಯಕಾರಿ ಸಮಿತಿಯ ಪಟ್ಟಿಗೆ ಸೇರಿಸಲಾಗಿದೆ.

ಭಾರತದಲ್ಲಿನ ಕೋವಿಡ್ ಬಿಕ್ಕಟ್ಟಿನಲ್ಲಿ ನೆರವಾಗಲು ಅಮೆರಿಕದ ಕಂಪನಿಗಳ ನೆರವನ್ನು ಸಂಘಟಿಸುವಲ್ಲಿ ಈ ಮೂವರು ಸಿಇಒಗಳು ಸಕ್ರಿಯರಾಗಿದ್ದಾರೆ.

ಬಿಲ್ & ಮೆಲಿಂದಾ ಗೇಟ್ಸ್ ಫೌಂಡೇಶನ್ ಸಿಇಒ ಮಾರ್ಕ್ ಸುಜ್ಮಾನ್, ಬಿಸಿನೆಸ್ ರೌಂಡ್‌ಟೇಬಲ್ ಅಧ್ಯಕ್ಷ ಮತ್ತು ಸಿಇಒ ಜೋಶುವಾ ಬೋಲ್ಟನ್ ಮತ್ತು ಯುಎಸ್ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಮತ್ತು ಸಿಇಒ ಸುಸೇನ್ ಕ್ಲಾರ್ಕ್ ಈ ಪಟ್ಟಿಗೆ ಸೇರ್ಪಡೆಗೊಂಡ ಇತರ ಸಿಇಓಗಳು.

ಇದು ಅಮೆರಿಕದ ಚೇಂಬರ್ ಆಫ್ ಕಾಮರ್ಸ್ ಸಂಯೋಜಿಸಿರುವ ಹೊಸದಾಗಿ ರೂಪುಗೊಂಡ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಟಾಸ್ಕ್ ಫೋರ್ಸ್ ಆಗಿದೆ. ಇದಕ್ಕೆ ಬಿಸಿನೆಸ್ ರೌಂಡ್‌ಟೇಬಲ್ ಬೆಂಬಲ ಸೂಚಿಸಿದೆ.

ಭಾರತದಲ್ಲಿನ ಕೋವಿಡ್-19 ಉಲ್ಬಣವನ್ನು ಪರಿಹರಿಸುವ ನಿಟ್ಟಿನಲ್ಲಿ ನೆರವು ನೀಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲು ಈ ಕಾರ್ಯಪಡೆಯು ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಮತ್ತು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂನೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಅಮೆರಿಕದ ಕಾರ್ಪೊರೇಟ್ ವಲಯವು ಈವರೆಗೆ ಭಾರತಕ್ಕಾಗಿ 25 ಸಾವಿರಕ್ಕೂ ಹೆಚ್ಚು ಆಮ್ಲಜನಕ ಕಾನ್ಸನ್ಟ್ರೇಟರ್‌ಗಳನ್ನು ಒದಗಿಸುವ ಬದ್ಧತೆ ಪ್ರದರ್ಶಿಸಿದೆ. ಡೆಲಾಯ್ಟ್ ಒದಗಿಸಿದ ಮೊದಲ 1,000 ಆಮ್ಲಜನಕ ಕಾನ್ಸನ್ಟ್ರೇಟರ್‌ಗಳು ಫೆಡ್ಎಕ್ಸ್‌ನ ನೆರವಿನೊಂದಿಗೆ ಏಪ್ರಿಲ್ 25 ರಂದು ಭಾರತಕ್ಕೆ ಬಂದಿವೆ.

ಈ ಕಾನ್ಸನ್ಟ್ರೇಟರ್‌ಗಳನ್ನು ತುರ್ತು ಬಳಕೆಗಾಗಿ ನಿಗದಿತ ಆರೋಗ್ಯ ಕೇಂದ್ರಗಳಿಗೆ ರವಾನಿಸಲಾಗಿದೆ.

ವೆಂಟಿಲೇಟರ್‌ಗಳ ಮೊದಲ ಕಂತು ಈ ವಾರದ ಆರಂಭದಲ್ಲಿ ಭಾರತಕ್ಕೆ ಬಂದಿಳಿದಿದೆ. ಎಲ್ಲಾ 1,000 ವೆಂಟಿಲೇಟರ್‌ಗಳು ಜೂನ್ 3 ರೊಳಗೆ ಭಾರತವನ್ನು ತಲುಪುವ ನಿರೀಕ್ಷೆಯಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು