ಬುಧವಾರ, ನವೆಂಬರ್ 25, 2020
24 °C

Covid-19 World Updates: ತಿಂಗಳ ಆರಂಭದಲ್ಲೇ 10 ಲಕ್ಷಕ್ಕೂ ಹೆಚ್ಚು ಪ್ರಕರಣ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದಲ್ಲಿ ನವೆಂಬರ್‌ ತಿಂಗಳ ಆರಂಭದಲ್ಲೇ 10 ಲಕ್ಷಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಇಲಿನಾಯ್‌ನಲ್ಲಿ 12,000 ಮತ್ತು ವಿಸ್ಕಾನ್ಸಿನ್‌ನಲ್ಲಿ 7,000 ಹೊಸ ಪ್ರಕರಣಗಳು ಸೇರಿದಂತೆ ಅಮೆರಿಕದ ಹಲವು ರಾಜ್ಯಗಳಲ್ಲಿ ಮಂಗಳವಾರ ಅತಿ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ  ಸೋಂಕಿನ ವಿರುದ್ಧ ಹೋರಾಡಲು ಏಕತೆ ಮತ್ತು ಸಹಕಾರವನ್ನು ನೀಡಬೇಕೆಂದು ಜನರಲ್ಲಿ ಕೋರಲು ಇಲ್ಲಿನ ಗವರ್ನರ್‌ ನಿರ್ಧರಿಸಿದ್ದಾರೆ.

ಅಮೆರಿಕದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ ಏರುತ್ತಿದೆ. ಇಂಡಿಯಾನದಲ್ಲಿ ಮಂಗಳವಾರ 63 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಇಡೀ ವಿಶ್ವದಾದ್ಯಂತ ಸೋಂಕಿತರ ಸಂಖ್ಯೆಯು ಏರಿಕೆಯಾಗಿದ್ದು, ಈವರೆಗೆ 5,18,35,949 ಜನರಿಗೆ ಸೋಂಕು ತಗುಲಿದೆ. ಒಟ್ಟಾರೆ 12,79,963 ಜನರು ಮೃತಪಟ್ಟಿದ್ದು, 3,64,07,888 ಜನರು ಗುಣಮುಖರಾಗಿದ್ದಾರೆ. 1,41,48,098 ಸಕ್ರಿಯ ಪ್ರಕರಣಗಳಿವೆ.

ಇನ್ನುಳಿದಂತೆ ಕೊರೊನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 86,36,011 ಜನರಿಗೆ ಸೋಂಕು ತಗುಲಿದ್ದು, 4,94,613 ಸಕ್ರಿಯ ಪ್ರಕರಣಗಳಿವೆ. ಈವರೆಗೆ 1,27,615 ಜನರು ಮೃತಪಟ್ಟಿದ್ದಾರೆ. 

ಬ್ರೆಜಿಲ್‌ನಲ್ಲಿ 57,01,283, ಫ್ರಾನ್ಸ್‌ನಲ್ಲಿ 18,29,659, ರಷ್ಯಾದಲ್ಲಿ 18,17,109 ಮತ್ತು ಸ್ಪೇನ್‌ನಲ್ಲಿ 14,43,997 ಜನರಿಗೆ ಸೋಂಕು ತಗುಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು