ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಭಾರತ ನಿರ್ಮಾಣದಲ್ಲಿ ಅಮೆರಿಕ ಪ್ರಮುಖ ಪಾಲುದಾರ: ತರಂಜಿತ್‌ ಸಿಂಗ್‌ ಸಂಧು

Last Updated 16 ಆಗಸ್ಟ್ 2022, 13:47 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ಮುಂದಿನ 25 ವರ್ಷಗಳಲ್ಲಿ ಭಾರತದ ಪ್ರಯಾಣದಲ್ಲಿ ಅಮೆರಿಕ ಪ್ರಮುಖ ಪಾಲುದಾರನಾಗಲಿದ್ದು, ಅದು ಸಮೃದ್ಧಿಯ ಹೊಸ ಉತ್ತುಂಗಕ್ಕೆ ಏರಲು ಹಾತೊರೆಯುತ್ತಿದೆ. ದ್ವಿಪಕ್ಷೀಯ ಬಾಂಧವ್ಯವು ಉಭಯ ದೇಶಗಳಿಗೆ ಹಾಗೂ ಪ್ರಪಂಚಕ್ಕೆ ಅತ್ಯಂತ ಪರಿಣಾಮಕಾರಿಯಾಗಿದೆ’ ಎಂದು ಇಲ್ಲಿನ ಭಾರತೀಯ ರಾಯಭಾರಿ ತರಂಜಿತ್‌ ಸಿಂಗ್‌ ಸಂಧು ಹೇಳಿದ್ದಾರೆ.

ಸೋಮವಾರ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಇಂಡಿಯಾ ಹೌಸ್‌ನಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಸಿದ ನಂತರರಾಯಭಾರ ಕಚೇರಿ ಸಿಬ್ಬಂದಿ ಮತ್ತು ಭಾರತೀಯ ವಲಸಿಗರ ಸದಸ್ಯರ ಸಮ್ಮುಖದಲ್ಲಿ ತರಂಜಿತ್‌ ಮಾತನಾಡಿದರು.

‘ಭಾರತವು ಸಕಾರಾತ್ಮಕ ದಾಪುಗಾಲುಗಳನ್ನು ಹಾಕುತ್ತಿದ್ದು, ಭವಿಷ್ಯದ ಪೀಳಿಗೆಯ ಆಕಾಂಕ್ಷೆಗಳನ್ನು ಪೂರೈಸಲು ನಾವು ಹೆಚ್ಚಿನ ಕೆಲಸವನ್ನು ಮಾಡಬೇಕಾಗಿದೆ.ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿದಂತೆ, ಮುಂದಿನ 25 ವರ್ಷಗಳ ಪ್ರಯಾಣವು ನವಭಾರತದ ಸೃಷ್ಟಿಯನ್ನು ಸೂಚಿಸುತ್ತದೆ.ಸಮೃದ್ಧಿಯ ಹೊಸ ಉತ್ತುಂಗಕ್ಕೆ ಏರುವುದು ಈ 'ಅಮೃತ ಕಾಲ'ದ ಗುರಿಯಾಗಿದೆ’ ‌ಎಂದು ಸಂಧು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT