ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

B.1.617.1 ಮತ್ತು B.1.617.2 ಕೊರೊನಾ ತಳಿಗೆ 'ಕಪ್ಪಾ', 'ಡೆಲ್ಟಾ' ಎಂದ WHO

Last Updated 1 ಜೂನ್ 2021, 3:07 IST
ಅಕ್ಷರ ಗಾತ್ರ

ಜಿನಿವಾ: ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕೋವಿಡ್-19 ರ B.1.617.1 ಮತ್ತು B.1.617.2 ರೂಪಾಂತರಗಳಿಗೆ ಗ್ರೀಕ್ ಅಕ್ಷರಗಳನ್ನು ಬಳಸಿಕೊಂಡು ಕ್ರಮವಾಗಿ 'ಕಪ್ಪಾ'(kappa) ಮತ್ತು 'ಡೆಲ್ಟಾ' (delta) ಎಂದು ಹೆಸರಿಸಲಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ಘೋಷಿಸಿದೆ.

ಸಾರ್ಸ್ ಕೋವ್2 ಹೆಸರನ್ನು ಅನ್ನು ಬಳಸಲು ಅನುಕೂಲವಾಗಲು ಮತ್ತು ಸದ್ಯ ಇರುವ ವೈಜ್ಞಾನಿಕ ಹೆಸರಿಗೆ ರೀಪ್ಲೆಸ್ ಮಾಡದೆ ಹೊಸ ಲೇಬಲ್ ಹಾಕುತ್ತಿದ್ದೇವೆ. ಇದು ಸಾರ್ವಜನಿಕ ಚರ್ಚೆಯಲ್ಲಿ ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ಡಬ್ಲ್ಯುಎಚ್‌ಒನ ಕೋವಿಡ್ -19 ವಿಷಯಗಳ ತಾಂತ್ರಿಕ ವಿಭಾಗದಮುಖ್ಯಸ್ಥೆ ಡಾ ಮಾರಿಯಾ ವ್ಯಾನ್ ಕೆರ್ಖೋವ್ ಸೋಮವಾರ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಕಂಡುಬಂದ ಕೋವಿಡ್–19ರ B.1.617.1ರೂಪಾಂತರವನ್ನು 'ಕಪ್ಪಾ' ಎಂದು ಹೆಸರಿಸಿದರೆ, B1.617.2 ರೂಪಾಂತರಕ್ಕೆ 'ಡೆಲ್ಟಾ' ಎಂದು ಕರೆಯಲಾಗಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ ತಿಳಿಸಿದೆ.

ಬಿ .1.617 ರೂಪಾಂತರವನ್ನು ‘ಇಂಡಿಯನ್ ವೆರಿಯಂಟ್’ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುತ್ತಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಆರೋಗ್ಯ ಇಲಾಖೆಯು, ವಿಶ್ವ ಆರೋಗ್ಯ ಸಂಸ್ಥೆಯಿಂದ ಈ ರೂಪಾಂತರಕ್ಕೆ ‘ಭಾರತದ ರೂಪಾಂತರ’ಎಂಬ ಹೆಸರು ನೀಡಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ ಸುಮಾರು ಮೂರು ವಾರಗಳ ನಂತರ ಡಬ್ಲ್ಯುಎಚ್‌ಒನ ಈ ನಿರ್ಧಾರ ಹೊರಬಿದ್ದಿದೆ.

ವಿಶ್ವದಾದ್ಯಂತ ಕಳವಳಕಾರಿಯಾಗಿರುವ B.1.617 ರೂಪಾಂತರಿತ ವೈರಸ್‌ಗೆ ಯಾವುದೇ ಆಧಾರವಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ‘ಭಾರತೀಯ ರೂಪಾಂತರ’ ಎಂದು ಬಳಸುತ್ತಿದ್ದ ಬಗ್ಗೆ ಮೇ 12 ರಂದು, ಕೇಂದ್ರ ಆರೋಗ್ಯ ಸಚಿವಾಲಯವು ಆಕ್ಷೇಪ ವ್ಯಕ್ತಪಡಿಸಿತ್ತು. ಕೆಲ ಮಾಧ್ಯಮಗಳಲ್ಲೂ ಬಂದ ಈ ಕುರಿತ ವರದಿಯನ್ನು ಅಲ್ಲಗಳೆದಿತ್ತು.

B.1.617.1 ಮತ್ತು B.1.617.2 ರೂಪಾಂತರಗಳಿಗೆ ಗ್ರೀಕ್ ವರ್ಣಮಾಲೆಯ ಅಕ್ಷರಗಳನ್ನು ಬಳಸಿ ಲೇಬಲ್ ಮಾಡಲು ಡಬ್ಲ್ಯುಎಚ್‌ಒನ ತಜ್ಞರ ಗುಂಪು ಶಿಫಾರಸು ಮಾಡಿದೆ. ಅಂದರೆ, ಆಲ್ಫಾ, ಬೀಟಾ, ಗಾಮಾ ರೀತಿಯ ಹೆಸರುಗಳು ವೈಜ್ಞಾನಿಕ ಕ್ಷೇತ್ರದವರಲ್ಲದ ಜನರಿಗೆ ಚರ್ಚಿಸಲು ಸುಲಭ ಮತ್ತು ಹೆಚ್ಚು ಪ್ರಾಯೋಗಿಕವಾಗಿರುತ್ತದೆ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT