ಸೋಮವಾರ, ಮಾರ್ಚ್ 27, 2023
28 °C

ಜಾಂಬಿಯಾ: ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಚಿಲೆಮಾ ಭರ್ಜರಿ ಜಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲುಸಾಕಾ: ಜಾಂಬಿಯಾದದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಉದ್ಯಮಿ ಹಾಗೂ ವಿರೋಧಪಕ್ಷದ ನಾಯಕ ಹಕೈಂಡೆ ಹಿಚಿಲೆಮಾ ಅವರು ಸೋಮವಾರ ಭರ್ಜರಿ ಜಯ ಗಳಿಸಿದ್ದಾರೆ.

ಜಾಂಬಿಯಾದ ಅಧ್ಯಕ್ಷ ಎಡ್ಗರ್ ಲುಂಗು ಅವರ ವಿರುದ್ಧ ಹಿಚಿಲೆಮಾ ಅವರು 28,10,757 ಮತಗಳಿಂದ ವಿಜಯ ಸಾಧಿಸಿದ್ದಾರೆ. ಲುಂಗು ಅವರು 18,14,201 ಮತ ಗಳಿಸಿದ್ದಾರೆ. ಹಿಚಿಲೆಮಾ ಅವರು ಜಾಂಬಿಯಾದ ಮುಂದಿನ ಅಧ್ಯಕ್ಷ ಎಂದು ಚುನಾವಣಾ ಆಯೋಗವು ಘೋಷಿಸಿದೆ.

‘ಬದಲಾವಣೆಗಾಗಿ ನಾವು ಮತ ಚಲಾಯಿಸಿದ್ದೇವೆ. ಉಬುಂಟು (ಮಾನವೀಯತೆ) ಮನೋಭಾವವನ್ನು ಪ್ರೀತಿಸಲು ಮತ್ತು ಸಾಮರಸ್ಯದಿಂದ ಬದುಕಲು ಒಪ್ಪಿಕೊಳ್ಳೋಣ’ ಎಂದು ಹಿಚಿಲೆಮಾ ಟ್ವೀಟ್ ಮಾಡಿದ್ದಾರೆ.

ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಹಿಚಿಲೆಮಾ ಅವರ ಸಾವಿರಾರು ಬೆಂಬಲಿಗರು ಲುಸಾಕಾದ ಬೀದಿಗಳಲ್ಲಿ  ಹಾಡು, ನೃತ್ಯದ ಮೂಲಕ ವಿಜಯೋತ್ಸವ ಆಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು