ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾ ಸೇನೆ ಹಿಂದಕ್ಕೆ; ಯುದ್ಧ ಕೊನೆಗೊಳ್ಳುವುದರ ಆರಂಭ– ಝೆಲೆನ್‌ಸ್ಕಿ

Last Updated 14 ನವೆಂಬರ್ 2022, 13:47 IST
ಅಕ್ಷರ ಗಾತ್ರ

ಕೆರ್ಸಾನ್‌ (ಉಕ್ರೇನ್‌) (ಎಪಿ): ಕೆರ್ಸಾನ್‌ನನ್ನು ರಷ್ಯಾದಿಂದ ಹಿಂಪಡೆದುಕೊಳ್ಳುವುದು ‘ಯುದ್ಧದ ಕೊನೆಗೊಳ್ಳುವಿಕೆಯ ಆರಂಭ‘ ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಸೋಮವಾರ ಇಲ್ಲಿ ಸೈನಿಕರನ್ನು ಭೇಟಿ ಮಾಡಿ ತಿಳಿಸಿದ್ದಾರೆ.

ಕೆರ್ಸಾನ್‌ನ ವಿಮೋಚನೆಕಳೆದ ಒಂಒತ್ತು ತಿಂಗಳಿನಲ್ಲಿ ಉಕ್ರೇನ್‌ನ ಅತಿದೊಡ್ಡ ಜಯವಾಗಿದೆ. ಉಕ್ರೇನ್‌ನ ಸೈನ್ಯ ತುಂಬಾ ಬಲಶಾಲಿಯಾಗಿದ್ದು, ರಷ್ಯಾ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗುತ್ತಿದೆ ಎಂದುಝೆಲೆನ್‌ಸ್ಕಿ ತಿಳಿಸಿದ್ದಾರೆ.

ಉಕ್ರೇನ್‌ ಸೇನೆಯು ತನ್ನ ಪ್ರತಿದಾಳಿಯಿಂದ ಉಕ್ರೇನ್‌ನ ಪ್ರಮುಖ ಪ್ರದೇಶಗಳಾದ ಕೀವ್‌ನ ಉತ್ತರ ಭಾಗ, ಹಾರ್ಕಿವ್‌ ಮತ್ತು ಕೆರ್ಸಾನ್‌ ಹಾಗೂ ನೆರೆಹೊರೆಯ ವಸಾಹತುಗಳನ್ನು ಹಿಂಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT