ಸೋಮವಾರ, ಜುಲೈ 4, 2022
21 °C

ಉಕ್ರೇನ್‌ನಲ್ಲಿ ‘ನೋ ಫ್ಲೈ ಜೋನ್‌’ ರಚನೆ ಮಾಡಲು ವಿದೇಶಗಳಿಗೆ ಝೆಲೆನ್‌ಸ್ಕಿ ಒತ್ತಾಯ

ಎಪಿ Updated:

ಅಕ್ಷರ ಗಾತ್ರ : | |

ಕೀವ್‌: ಉಕ್ರೇನ್ ವಾಯುಪ್ರದೇಶದಲ್ಲಿ ‘ನೋ ಫ್ಲೈ ಜೋನ್‌’ (ಹಾರಾಟ-ನಿಷೇಧ ವಲಯ) ರಚಿಸುವಂತೆ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ವಿದೇಶಗಳಿಗೆ ಭಾನುವಾರ ಮತ್ತೆ ಆಗ್ರಹಿಸಿದ್ದಾರೆ.

ಹಾರಾಟ-ನಿಷೇಧ ವಲಯವನ್ನು ರಚಿಸಬೇಕಿದ್ದರೆ, ವಿದೇಶಿ ಮಿಲಿಟರಿ ನೇರವಾಗಿ ಯುದ್ಧದಲ್ಲಿ ಭಾಗವಹಿಸುವ ಪ್ರಮೇಯ ಉದ್ಭವವಾಗಿ, ಭವಿಷ್ಯದಲ್ಲಿ ಭಾರಿ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಅಮೆರಿಕ ಮತ್ತು ಅನೇಕ ಪಾಶ್ಚಾತ್ಯ ರಾಷ್ಟ್ರಗಳು ಉಕ್ರೇನ್‌ಗೆ ಸೇನೆಯನ್ನು ರವಾನಿಸದೇ, ಶಸ್ತ್ರಾಸ್ತ್ರವನ್ನು ಮಾತ್ರ ಪೂರೈಕೆ ಮಾಡುತ್ತಿವೆ.

"ನಮ್ಮ ವಾಯು ಪ್ರದೇಶದಲ್ಲಿ ಹಾರಾಟ ನಿಷೇಧ ವಲಯ ರಚಿಸುವಷ್ಟು ಈ ಜಗತ್ತು ಶಕ್ತವಾಗಿದೆ’ ಎಂದು ಝೆಲೆನ್‌ಸ್ಕಿ ಭಾನುವಾರ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಹಾರಾಟ ನಿಷೇಧ ವಲಯ ರಚಿಸಬೇಕೆಂಬ ಝೆಲೆನ್‌ಸ್ಕಿ ಬೇಡಿಕೆಯನ್ನು ನ್ಯಾಟೊ ಈಗಾಗಲೇ ತಳ್ಳಿಹಾಕಿದೆ.

ಹಾರಾಟ ನಿಷೇಧ ವಲಯ ರಚನೆಗೊಂಡರೆ, ಉಕ್ರೇನ್‌ ವಾಯು ಪ್ರದೇಶ ಪ್ರವೇಶಿಸುವ ಎಲ್ಲಾ ಅನಧಿಕೃತ ವಿಮಾನಗಳನ್ನು ಹೊಡೆದುರುಳಿಸಲಾಗುತ್ತದೆ.

ಉಕ್ರೇನ್‌ ಪರವಾಗಿ ಯಾವುದೇ ರಾಷ್ಟ್ರ ಹಾರಾಟ ನಿಷೇಧ ವಲಯ ರಚಿಸಿದರೆ, ಆ ರಾಷ್ಟ್ರ ಯುದ್ಧರಂಗಕ್ಕೆ ಪ್ರವೇಶ ಮಾಡಿದೆ ಎಂದು ರಷ್ಯಾ ಭಾವಿಸುತ್ತದೆ ಎಂದು ವ್ಲಾಡಿಮಿರ್‌ ಪುಟಿನ್‌ ಶನಿವಾರ ಎಚ್ಚರಿಕೆ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು