ಮಂಡ್ಯ ತೋಟಗಾರಿಕೆ ಇಲಾಖೆ ವತಿಯಿಂದ ಜೂನ್ 8ರಿಂದ ತೆಂಗಿನ ಸಸಿ ಮಾರಾಟ
ಮಂಡ್ಯ: ತೋಟಗಾರಿಕೆ ಇಲಾಖೆಯ ವತಿಯಿಂದ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಜೂನ್ 8 ರಿಂದ ತೆಂಗಿನ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ.
ಜೂನ್ 5 ರೊಳಗೆ ರೈತರು ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಪ್ರತಿ ಗಿಡಕ್ಕೆ ₹70 ನಿಗದಿ ಮಾಡಲಾಗಿದ್ದು, ಒಬ್ಬರಿಗೆ 40 ಗಿಡಗಳನ್ನು ನೀಡಲಾಗುವುದು. ಖರೀದಿ ಸಮಯದಲ್ಲಿ ಪಹಣಿ ಮತ್ತು ಆಧಾರ್ ಕಾರ್ಡ್‍ಗಳನ್ನು ಜೆರಾಕ್ಸ್ ಕಡ್ಡಾಯವಾಗಿ ಕೊಡಬೇಕು.
ಮಲ್ಲಸಂದ್ರ ಕಾವಲ್ ತೋಟಗಾರಿಕೆ ಕ್ಷೇತ್ರ (ಪುಟ್ಟಸ್ವಾಮಿ–9945631214), ನಾಯಕನಹಳ್ಳಿ ತೋಟಗಾರಿಕೆ ಕ್ಷೇತ್ರ (ದಿನೇಶ್–7337788286), ಪೂರಿಗಾಲಿ ತೋಟಗಾರಿಕೆ ಕ್ಷೇತ್ರ (ಜ್ಯೋತಿ–8951426433), ಜವರನಹಳ್ಳಿ ತೋಟಗಾರಿಕೆ ಕ್ಷೇತ್ರ (ಮಂಜುನಾಥ–7090226653), ಮಂಡ್ಯ ತೋಟಗಾರಿಕೆ ಕ್ಷೇತ್ರ (ಪುಟ್ಟಸ್ವಾಮಿ–9538228585), ಗಾಮನಹಳ್ಳಿ ತೋಟಗಾರಿಕೆ ಕ್ಷೇತ್ರ (ದುಂಡಮ್ಮ–9483303421), ಮುರುಕನಹಳ್ಳಿ ತೋಟಗಾರಿಕೆ ಕ್ಷೇತ್ರ (ದೇವರಾಜು–9901581638), ಹಳೆಬೀಡು ತೋಟಗಾರಿಕೆ ಕ್ಷೇತ್ರ (ದೇವೇಂದ್ರ–9845237919), ಪುರ ತೋಟಗಾರಿಕೆ ಕ್ಷೇತ್ರ (ವೈ.ಡಿ.ಕೃಷ್ಣ–9902624930), ದುದ್ದ ತೋಟಗಾರಿಕೆ ಕ್ಷೇತ್ರ (ಗೋವಿಂದಯ್ಯ–9980655071), ಶ್ರೀರಂಗಪಟ್ಟಣ ಕಚೇರಿ ಸಸ್ಯಗಾರ (ಸರಸ್ವತಿ–7619470626), ಮಳವಳ್ಳಿ ಕಚೇರಿ ಸಸ್ಯಗಾರ (ವಿಜಯಲಕ್ಷ್ಮೀ–7795483147) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.