ಬಾಳ್ ಬ್ಯಾಸ್ರ ಆಗೇತಿ ಬಿಡ್ರೀ. ಏನ್ ಮಂದಿ ರೀ! ನಾವೆಲ್ಲಾ ಏನು ಹಗಲೆಲ್ಲಾ ಸೆಂಚುರಿ ಹೊಡಿಯೋದಕ್ಕ ಆಕ್ಕೈತೇನ್ರೀ? ಅದೂ ಡಬಲ್ ಸೆಂಚುರಿಯನ್ನ ಜೀವನದಾಗ್ ಯಾವಾಗ್ಲಾದ್ರೊಮ್ಮೆ ಹೊಡಿಯೋಕೆ ಛಾನ್ಸ್ ಸಿಗ್ತೇತಿ. ಅದಕ್ಕ ನಮ್ಮನ್ನೇನು ಫೇಸ್ಬುಕ್, ವಾಟ್ಸ್ಯಾಪು, ಅದೂ ಇದೂ ಸುಡುಗಾಡು ಸುಂಟರಗಟ್ಟಿ ಮಾಧ್ಯಮದೊಳಗ ಟ್ರೋಲ್ ಮಾಡಿದ್ದೇ ಮಾಡಿದ್ದು. ಮೀಮ್ಸ್ ತೂರಿದ್ದೇ ತೂರಿದ್ದು. ಜೋಕುಗಳಿಗಂತೂ ಲೆಕ್ಕವೇ ಇಲ್ಲ. ಅದೇ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೆಂಚುರಿ ಹೊಡುದ್ರೆ ಅದೇನು ಸಂಭ್ರಮ ಅಂತೀನಿ. ಪಟಾಕಿ ಹಚ್ಚೂದೇನು, ಅವ್ರನ್ನ ಆರಾಧಿಸೋದೇನು, ಎಲ್ಲದಕ್ಕೂ ಪಡ್ಕೊಂಡು ಬಂದಿರ್ಬೇಕು ಬಿಡ್ರಿ. ನಾವು ಡಕ್ ಔಟ್ ಆದಷ್ಟೂ ಕೆಳಕ್ಕೆ ರೇಟು ಬಿದ್ದಷ್ಟೂ ಮಂದೀಗೆ ಖುಷಿನೋ ಖುಷಿ. ಈಗ ನಾವು ಗಗನಕ್ಕ ಏರೀವಿ ನೋಡ್ರಿ, ನಮ್ಮನ್ನ ಕೊಳ್ಳಾಕ ಎಲ್ರೂ ಮುಖ ಹುಳ್ಳಗ್ ಮಾಡಾಕತ್ತಾರ.

ಮಂದಿ ಮೊದ್ಲು ಬರೀ ನಮ್ಮನ್ನ ಹೆಚ್ಚಬೇಕಾದ್ರೆ ಕಣ್ಣೀರು ಹಾಕ್ತಾ ಇದ್ರು. ಈಗ ಕೊಂಡ್ಕೋಬೇಕಾದ್ರೂ ಕಣ್ಣೀರು ಹಾಕಕತ್ತಾರ. ಯೂಟ್ಯೂಬಿನಾಗ ನಾವು ಇಲ್ದಂಗ್ ಅಡಗಿ ಹ್ಯಾಂಗ್ ಮಾಡ್ಬೋದು ಅನ್ನೂದನ್ನ ಹೆಣ್ಣುಮಕ್ಳು ಹೊಳ್ಳಾ ಮಳ್ಳ, ಹೊಳ್ಳಾ ಮಳ್ಳ ಹುಡುಕ್ಲಿಕತ್ತಾರ. ಕಾಯಿಪಲ್ಲೆ ಮಾರ್ಕೆಟ್ನಾಗ್ ಮೊದ್ಲು ನಮ್ಮನ್ನ ಆರಿಸ್ಕೊಳ್ರಿ ಅಂತಬುಟ್ಟೀನ ಮುಂದೆ ಇಡ್ತಿದ್ದೋರು, ಈಗ ಒಳಾಗ್ ಅಡಗಿಸಿ ಇಟ್ಕೊಂಡು, ಮಂದಿ ಕೇಳಿದ್ ಮ್ಯಾಗ್, ಬಂಗಾರದಂಗ ತೂಕ ಮಾಡಿ ಒಂದೀಟು ಹೆಚ್ಚು ಆದ್ರೂ ತಗ್ದು ಸರಿ ಮಾಡಿ ಕೊಡೋದನ್ನ ಮಂದಿ ಕಣ್ಕಣ್ಣು ಬಿಟ್ಕೊಂಡು ನೋಡ್ತಿರ್ತಾರ. ಹೋಟೆಲ್ಲಿನೊಳಗ ಆನಿಯನ್ ಪಕೋಡದಾಗ ನಾವು ಇರೋದೇ ಇಲ್ಲ, ಉತ್ತಪ್ಪದ ಮ್ಯಾಗ ನಾವು ಕಾಣದ್ಹಂಗ ಆಗೇವಿ, ಮನ್ಯಾಗ್ ಸೈತ ರೊಟ್ಟಿ, ಮುದ್ದಿ ಜೊತಿ ಅಲ್ಲೇ ಬುಟ್ಟೀನಾಗಿರೋ, ನಮ್ಮನ್ನ ಜಜ್ಕೊಂಡು ತಿನ್ನೋ ಪರಿಪಾಠ ಇರೋ ಗಂಡ್ಮಕ್ಳು, ಈಗ ಬುಟ್ಟಿಯೊಳಗ ಕೈ ಹಾಕೋದಕ್ಕ ಹೆದರಾಕತ್ತಾರ. ಒಗ್ಗರಣ್ಯಾಗ್ ತುತ್ತಿಗ್ ನಾಕು ನಮ್ಮ ತುಂಡು ಸಿಗೂ ಹಂಗ್ ಅಡುಗಿ ಮಾಡ್ತಿದ್ದ ಹೆಣ್ಣುಮಕ್ಳು, ಈಗ ನಾಕು ತುತ್ತಿಗ್ ಒಂದು ತುಂಡು ಸಿಗೋ ಹಂಗ ಅಡ್ಗಿಮಾಡುವಷ್ಟು ಶ್ಯಾಣೆ ಆಗ್ಯಾರ ಮತ್ತ. ಫೇಸ್ ಬುಕ್ನಾಗ ಈಗ ನಮ್ಮ ಐಟೆಮ್ಸ್ ಮಾಡಿ ತಕ್ಷಣಕ್ಕ ಅಪ್ಲೋಡ್ ಮಾಡೂದ್ರಾಗ್ ನಾ ಮುಂದು ತಾ ಮುಂದು ಅಂತ ಪೈಪೋಟಿ ಹಚ್ಯಾರ್ರೀ. ಮನ್ಯಾಗ ನಾವು ಖಾಲಿ ಆದಾಗ ಮಂದಿ ಬಂದ್ರ, ಮಕ್ಳನ್ನು ಬಾಜೂ ಮನ್ಯಾಗ್ ಒಂದೆರಡು ಉಳ್ಳಾಗಡ್ಡಿ ಇಸ್ಕೊಂಡು ಬಾರ್ಲೆ ಅನ್ನೂದಕ್ಕ ಅಂಜಿಕಿ ಬರೂ ಹಂಗ್ ಆಗೇತಿ.

ಏನ್ ಕೇಳ್ತೀರ್ರೀ! ಮೊನ್ನೆ ನಮ್ಮನ್ನು ಬೆಳೆದಿರೋ ರೈತನ ಹೊಲಕ್ಕ ಕನ್ನ ಹಾಕಿ ಒಂದೂವರಿ ಎಕ್ರೆಯೊಳಗ ಬೆಳಿದಿರೋ ಮಾಲನ್ನು ಕಳುವು ಮಾಡಿಬಿಟ್ರಂತ್ರೀ! ಪಾಪ ಕೈಗೆ ಬಂದ್ ತುತ್ತು ಬಾಯಿಗ್ ಬರ್ಲಿಲ್ಲಾ ಅಂತಾ ಮನಿ ಮಂದಿ ಎಲ್ಲಾ ಕಣ್ಣೀರ್ನಾಗ್ ಕೈತೊಳ್ಕೊಂತಿದ್ರು. ಮತ್ತೆಲ್ಲೋ ಒಂದು ಲೋಡ್ ಲಾರಿನಾಗ್ ನಮ್ಮೊರನ್ನ ಸಾಗ್ಸೋ ಮುಂದ ಕಳುವು ಮಾಡಿಬಿಟ್ರಂತ. ಮಜಾ ಅನ್ನಿಸ್ತು. ಒಮ್ಮೊಮ್ಮೆ ನಮ್ಮಿಂದ ಸರ್ಕಾರ ಬಿದ್ದು ಹೋದದ್ದೂ ಐತ್ರೀಪ. ನಮ್ಗೋಸ್ಕರ ಮಂದಿ ಬೀದಿ ಬೀದಿಗಿಳಿದು ಪ್ರತಿಭಟನೆ ಮಾಡೂದ್ ನೋಡಿದ್ರ ಬಾಳ ಹೆಮ್ಮೆ ಅನ್ನಿಸ್ತೈತಿ. ಅದ್ಕಾ ಈಗಿನ್ ಸರ್ಕಾರ ಈಜಿಪ್ತಿನಿಂದ, ಚೈನಾದಿಂದ ನಮ್ಮ ಮಂದೀನ ಕರ್ಸೂ ಹಂಗ್ ಆಗೇತಿ ನೋಡ್ರೀ. ಏನಾರ ಹೇಳ್ರಿ ಆ ಸಿವಾ ಎಲ್ರಿಗೂ ಒಂದು ಕಾಲ ಬರೂ ಹಂಗ್ ಮಾಡ್ತಾನಂತ್ರಿ. ಸದ್ಯಕ್ಕ ಉಳ್ಳಾಗಡ್ಡಿ ಉಳ್ಳವನೇ ಉಳ್ಳವ ಅನ್ನೂ ಹಂಗಾಗೇತಿ. ಅದಕ್ಕ ನಮಗ ಖುಷಿ ಆಗೇತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.