ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಎಡವುವ ಮುನ್ನ ಎಚ್ಚರ!

Last Updated 4 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಕೃತಿ: ಬಿಫೋರ್‌ ಯು ಫಾಲ್‌
ಲೇ: ಅಭಿಲಾಷ್‌ ಗೌಡ
ಪುಟಗಳು: 132
ಬೆಲೆ: ₹250
ಪ್ರ: ಸಹ್ಯಾದ್ರಿ ಪಬ್ಲಿಕೇಷನ್ಸ್‌ ಬೆಂಗಳೂರು
ಸಂ: 9916383383

ಬದುಕಿನಲ್ಲಿ ಭಾವನೆಗಳಿಗಿಂತ ವಾಸ್ತವದ ನೆಲೆಗಟ್ಟು ಎಷ್ಟು ಮುಖ್ಯ ಎಂಬುದರ ಕುರಿತು ಮಾತನಾಡಿದೆ ಈ ಕೃತಿ. ಹಣಕಾಸಿನ ಯೋಜನೆ ಬಾಲ್ಯದಿಂದ ಬದುಕಿನುದ್ದಕ್ಕೂ ಹೇಗಿರಬೇಕು ಎಂಬುದನ್ನು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಸ್ಟಾರ್ಟ್‌ ಅಪ್‌ ಪ್ರಯತ್ನಗಳೇಕೆ ವಿಫಲವಾಗುತ್ತವೆ ಎಂಬುದನ್ನೂ ವಿಶ್ಲೇಷಿಸಲಾಗಿದೆ. ವರ್ಣರಂಜಿತ ಯಶೋಗಾಥೆಗಳ ಹಿಂದಿನ ಸತ್ಯ–ಮಿಥ್ಯೆಗಳ ಬಗ್ಗೆಯೂ ಕೃತಿ ಮಾತನಾಡಿದೆ. ಮಗಳ ಮದುವೆಗೂ ಮುನ್ನ ಅಳಿಯನ ಸಾವಿನ ಬಗ್ಗೆ ಚಿಂತನೆ, ಮ್ಯೂಚುವಲ್‌ ಫಂಡ್‌ಗಳ ಪರಿಚಯ, ಸರ್ಕಾರಿ ಯೋಜನೆಗಳ ಮಾಹಿತಿ, ಪೊಲೀಸ್‌, ಕಾನೂನು ಪ್ರಕ್ರಿಯೆಗಳ ಸಂಕ್ಷಿಪ್ತ ವಿವರಗಳು ಆಸಕ್ತಿದಾಯಕವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT