ಗುರುವಾರ , ಮೇ 19, 2022
20 °C

ಪುಸ್ತಕ ವಿಮರ್ಶೆ: ಪ್ರಾಚೀನ ಕನ್ನಡದ ಕವಿ–ಕಾವ್ಯ ಮಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೌಲ್ಯಮಣಿಗಳ ಕವಿಕಾವ್ಯಮಾಲೆ
ಲೇ:
ತಾರಾಪ್ರಸಾದ್‌
ಪ್ರ: ಲಲಿತಕಲಾ ಕೇಂದ್ರ ಶಿವಮೊಗ್ಗ, 9972594646
ಪುಟಗಳು: 364
ಬೆಲೆ: 300

ಪ್ರಾಚೀನ ಕನ್ನಡ ಕವಿ–ಕಾವ್ಯಗಳ ಪರಿಚಯದ ಕೃತಿಯೇ ತಾರಾಪ್ರಸಾದ್‌ ಅವರ ‘ಮೌಲ್ಯಮಣಿಗಳ ಕವಿಕಾವ್ಯಮಾಲೆ’. ಈ ಕೃತಿಯಲ್ಲಿ ಒಟ್ಟಾರೆ 72 ಕವಿಗಳ ಪರಿಚಯವಿದೆ. ಅವರ ಪರಿಚಯದ ಜತೆ, ಜತೆಗೆ ಅವರ ಕಾವ್ಯಗಳಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಸಹ ಚಿಕ್ಕದಾಗಿ ಚರ್ಚಿಸಲಾಗಿದೆ. 15ನೇ ಶತಮಾನದವರೆಗಿನ ಕನ್ನಡದ ಮಹತ್ವದ ಕವಿಗಳು ಇಲ್ಲಿ ಸಂಗಮಿಸಿದ್ದಾರೆ. ಆ ಕಾಲಘಟ್ಟದ ಕವಿ–ಕಾವ್ಯಗಳ ಚರ್ಚೆ ಮಾಡುವ ಈ ಕೃತಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯತ್ನವನ್ನೂ ಮಾಡಿದೆ.

ಹಳೆಗನ್ನಡ ಸಾಹಿತ್ಯದ ಮಣಿಗಳನ್ನು ಒಂದು ಹಾರವಾಗಿ ಪೋಣಿಸುವ ಕೆಲಸ ಮಾಡಿರುವ ಶ್ರೀಮತಿಯವರು, ಸಾಹಿತ್ಯದ ಹಲವು ಮಹತ್ವದ ವಿಷಯಗಳನ್ನು ಚರ್ಚೆ ಮಾಡುತ್ತಾರೆ. ಅಧ್ಯಯನದ ದೃಷ್ಟಿಯಿಂದ ಕನ್ನಡದ ಸಾಹಿತ್ಯೋದಯ, ಪಂಪಪೂರ್ವಯುಗ, ಪಂಪಯುಗ, ಬಸವಯುಗ ಮತ್ತು ಕುಮಾರವ್ಯಾಸ ಯುಗ ಎಂದು ವಿಭಾಗ ಮಾಡಲಾಗಿದ್ದು, ಆಯಾ ಕಾಲಘಟ್ಟದ ಮಹತ್ವದ ಕವಿಗಳ ಕುರಿತು ಮಾಹಿತಿ ನೀಡಲಾಗಿದೆ. ಜನಪದ ಕಾವ್ಯದ ಸೆಳಕುಗಳು ಸಹ ಈ ಕೃತಿಯಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು