ಭಾನುವಾರ, ಫೆಬ್ರವರಿ 28, 2021
20 °C

ಪುಸ್ತಕ ವಿಮರ್ಶೆ: ಕಾಡುವ ಸ್ತ್ರೀ ಬದುಕಿನ ತಲ್ಲಣಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಸ್ಪಷ್ಟ ತಲ್ಲಣಗಳು

ಲೇ: ಟಿ.ಎಸ್‌. ಶ್ರವಣಕುಮಾರಿ

ಪ್ರ: ಮೈತ್ರಿ ಪ್ರಕಾಶನ

ಮೊ: 98867 23505

ಬ್ಯಾಂಕ್‌ ಕೆಲಸದಿಂದ ನಿವೃತ್ತರಾದ ಮೇಲೆ ಬರೆಯಲು ಆರಂಭಿಸಿದ ಟಿ.ಎಸ್‌. ಶ್ರವಣಕುಮಾರಿ ಅವರು ಸಾಹಿತ್ಯದ ಉದ್ಯಾನಕ್ಕೆ ಕಥೆ, ಲಲಿತ ಪ್ರಬಂಧದ ಕಾಲುದಾರಿ ಮೂಲಕ ಪ್ರವೇಶ ಪಡೆದವರು. ಮೈತ್ರಿ ಪ್ರಕಾಶನ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಬಹುಮಾನ ಪಡೆದು, ಇತ್ತೀಚೆಗಷ್ಟೆ ಹೊರಬಂದ ಅವರ ಕಥಾಸಂಕಲನವೇ ‘ಅಸ್ಪಷ್ಟ ತಲ್ಲಣಗಳು’. ಸಂಕಲನದ ಶೀರ್ಷಿಕೆಯಾದ ಈ ಕಥೆಯೂ ಸೇರಿ, ‘ಅವಳು ಮತ್ತು ಮಗಳು’, ‘ಕಾಮಿನಿಯೂ ಚಿಕನ್‌ ಬಿರ್ಯಾನಿಯೂ’, ‘ಜೀವನ್ಮುಖಿ’ ಕಥೆಗಳು ಗಮನ ಸೆಳೆಯುತ್ತವೆ. ಎಲ್ಲ ಕಥೆಗಳಲ್ಲಿ ಹೆಣ್ಣಿನ ಬದುಕಿನ ತಲ್ಲಣಗಳೇ ತುಂಬಿವೆ.

ಆಧುನಿಕ ಸ್ತ್ರೀಲೋಕದ ಸಂಕಟಗಳು ಸಹ ಇಲ್ಲಿನ ಕಥೆಗಳಲ್ಲಿ ಎದುರಾಗಿ ಕಾಡುತ್ತವೆ. ಉದ್ಯೋಗಸ್ಥ ಹೆಣ್ಣಿನ ತಳಮಳಗಳ ಆಪ್ತ ಚಿತ್ರಣವೂ ಢಾಳಾಗಿ ಕಾಣುತ್ತದೆ. ಕೌಟುಂಬಿಕ ಬಿಕ್ಕಟ್ಟುಗಳಲ್ಲಿ ಸಾಕಷ್ಟು ನೋವುಂಡರೂ ಅದನ್ನು ತಾನು ಮೌನವಾಗಿ ಸಹಿಸಿಕೊಳ್ಳಲು ಒಪ್ಪಲಾರೆ ಎಂಬ ಹೆಣ್ಣಿನ ಧ್ವನಿ ಗಟ್ಟಿಯಾಗಿ ಕೇಳುತ್ತದೆ. ಮುನ್ನುಡಿಯಲ್ಲಿ ಶ್ರೀಧರ ಬಳಗಾರ ಅವರು ಹೇಳುವಂತೆ, ‘ಕೌಟುಂಬಿಕ ಬಿಕ್ಕಟ್ಟುಗಳ ಚೌಕಟ್ಟಿನಾಚೆ ಜಿಗಿಯದ ಇಲ್ಲಿನ ಕಥೆಗಳು ಸ್ವಯಂಗೋಡೆಯನ್ನು ನಿರ್ಮಿಸಿಕೊಂಡಿರುವುದು ಒಂದು ಮಿತಿಯಾಗಿ ಪರಿಣಮಿಸಿದೆ’.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು