ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಗ್ರಾಮಗಳ ಚಹರೆ ಬದಲಾದ ಕಥನ

Last Updated 21 ಮೇ 2022, 19:31 IST
ಅಕ್ಷರ ಗಾತ್ರ

ಕೆಲಸದ ನೆಪದಲ್ಲಿ ಹಳ್ಳಿಯಿಂದ ನಗರಕ್ಕೆ ಬಂದು ನೆಲೆಸಿದವರಿಗೆ ಹುಟ್ಟೂರ ನೆನಪು ಕ್ಷಣಮಾತ್ರದಲ್ಲೇ ಸ್ಮೃತಿಪಟಲದಲ್ಲಿ ಬಾಲ್ಯ, ಯೌವ್ವನ ಕಾಲದ ನೆನಪುಗಳ ಬುತ್ತಿಬಿಚ್ಚಿಡುವ ಸವಿಗನಸು. ‘ಗ್ರಾಮ ಪಲ್ಲಟ’ವೂ ಇದೇ ರೀತಿಯ ಒಂದು ನೆನಪಬುತ್ತಿ. ಲೇಖಕ ತೈಲೂರು ವೆಂಕಟ ಕೃಷ್ಣ ಅವರ ಐದಾರು ದಶಕಗಳ ಗ್ರಾಮೀಣ ಬದುಕಿನ ಪಲ್ಲಟಗಳ ಮೆಲುಕು.

ಗಾಣದಿಂದ ತೈಲ ತೆಗೆಯುತ್ತಿದ್ದ ಗಾಣಿಗರು ಕಟ್ಟಿದ ಊರು, ಸಮೃದ್ಧಿಯ ಹಾಲು, ಮೊಸರಿನ ಊರಾದ ಕಾರಣ ‘ತೈಲೂರು’ ಸೃಷ್ಟಿಯಾಗಿ, ಅಲ್ಲಿನ ಕೃಷಿ, ಕೋಳಿರಾಯನ ಗುಡ್ಡ, ಅಲ್ಲಿನ ರಂಗನಟರು, ಊರಹಬ್ಬದಲ್ಲಿ ನಡೆಯುತ್ತಿದ್ದ ಪೌರಾಣಿಕ ನಾಟಕಗಳು, ಹನುಮಂತನ ಕಿರೀಟದ ಕಥೆ, ಕನಸು, ಊರಹಬ್ಬ, ಊರಿನ ಪರಿಸರ ಹಾಗೂ ಪಕ್ಷಿಗಳು ಹೀಗೆ ಐವತ್ತೊಂದು ಶೀರ್ಷಿಕೆಗಳಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯದ‘ಗ್ರಾಮ ಪಲ್ಲಟ’ವನ್ನು ತೆರೆದಿಟ್ಟಿದ್ದಾರೆ. ಲೇಖಕರ ನೆನಪಿನ ಶಕ್ತಿ ಪ್ರತೀ ಅಧ್ಯಾಯದಲ್ಲಿ ಉಲ್ಲೇಖಾರ್ಹ. ಶೀರ್ಷಿಕೆಯಡಿಯ ವಿಷಯವನ್ನು ವಿವರಿಸುತ್ತಲೇ ಮತ್ತೊಂದಿಷ್ಟು ನೆನಪನ್ನು ಕೆದಕಿ ಮತ್ತೆ ಮೂಲ ವಿಷಯಕ್ಕೆ ಮರಳುತ್ತಾರೆ.

ಪಲ್ಲಟ ಎಂಬ ಶೀರ್ಷಿಕೆಯಡಿಯ ಲೇಖನದಲ್ಲಿ ಹಳ್ಳಿಯಲ್ಲಿ ಇತ್ತೀಚೆಗೆ ಆಗಿರುವ ದಿಢೀರ್‌ ಬದಲಾವಣೆಗಳ ಬಗ್ಗೆ ಲೇಖಕರು ಉಲ್ಲೇಖಿಸಿದ್ದಾರೆ. ನಗರೀಕರಣದ ಆಕರ್ಷಣೆ, ತಂತ್ರಜ್ಞಾನದ ದುರ್ಬಳಕೆ, ನಾಟಿ ಹಸುಗಳ ಜಾಗಕ್ಕೆ ಬಂದ ವಿದೇಶಿ ತಳಿಗಳು ಹಾಗೂ ಇವುಗಳ ಉತ್ಪನ್ನಗಳಿಂದ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ.

ಕೃತಿ:ಗ್ರಾಮ ಪಲ್ಲಟ

ಲೇ: ತೈಲೂರು ವೆಂಕಟ ಕೃಷ್ಣ

ಪ್ರ: ಬಾನು ಪ್ರಕಾಶನ, ಮಂಡ್ಯ

ಸಂ: 9480255548

ಪುಟ: 240

ದರ: 220

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT