ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020: ಗಮನ ಸೆಳೆದ ಹೊತ್ತಿಗೆಗಳು

Last Updated 27 ಡಿಸೆಂಬರ್ 2020, 5:19 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""
""
""
""
""
""

ಈ ವರ್ಷ ನೀವು ಓದಿದ ಕೃತಿಗಳಲ್ಲಿ ಗಮನ ಸೆಳೆದಂಥವು ಯಾವುವು? ಈ ಪ್ರಶ್ನೆಯನ್ನು ನಾಡಿನ ವಿವಿಧ ಭಾಗಗಳ ಗಂಭೀರ ಓದುಗರ ಮುಂದಿಟ್ಟು ಎಲ್ಲರಿಂದಲೂ ತಲಾ ಹತ್ತು ಕೃತಿಗಳ ಪಟ್ಟಿಯನ್ನು ಪಡೆಯಿತು ‘ಭಾನುವಾರದ ಪುರವಣಿ’ (ಆ ಪಟ್ಟಿಗಳನ್ನು ಮುಂದಿನ ಪುಟದಲ್ಲಿ ಕೊಡಲಾಗಿದೆ). ಎಲ್ಲ ಪಟ್ಟಿಗಳಲ್ಲಿ ಹೆಚ್ಚಿನ ಸಲ ಕಾಣಿಸಿಕೊಂಡ ಕೃತಿಗಳ ಮಾಹಿತಿ ಇಲ್ಲಿದೆ. ಇವುಗಳು 2020ರಲ್ಲಿ ಗಮನಸೆಳೆದ ಮಹತ್ವದ ಕೃತಿಗಳಾಗಿವೆ...

***

ಕೃತಿ ಹೆಸರು;ಕೃತಿಕಾರರು;ಪ್ರಕಾಶನ ಸಂಸ್ಥೆ

ಬುದ್ಧಚರಣ (ಮಹಾಕಾವ್ಯ);ಎಚ್‌.ಎಸ್‌. ವೆಂಕಟೇಶಮೂರ್ತಿ;ಅಂಕಿತ

ಕಾಲಯಾತ್ರೆ (ಕಾದಂಬರಿ);ಕೃಷ್ಣಮೂರ್ತಿ ಹನೂರು;ಅಂಕಿತ

ನೀರಿಗೆ ಮೂಡಿದ ಆಕಾರ (ವಿಮರ್ಶೆ);ಎಚ್‌.ಎಸ್‌.ರಾಘವೇಂದ್ರರಾವ್;ಹಂಪಿ ವಿ.ವಿ.

ನಮ್ಮ ಅರಸು (ವ್ಯಕ್ತಿ ಚಿತ್ರಣ);ಬಸವರಾಜು ಮೇಗಲಕೇರಿ;ಪಲ್ಲವ

ಕಾಗೆ ಮುಟ್ಟಿದ ನೀರು (ಆತ್ಮಕಥೆ);ಪುರುಷೋತ್ತಮ ಬಿಳಿಮಲೆ;ಅಹರ್ನಿಶಿ

ಹಾಡು ಕಲಿಸಿದ ಹರ ( ಸಾಂಸ್ಕೃತಿಕ ಅಧ್ಯಯನ);ಸುರೇಶ ನಾಗಲಮಡಿಕೆ;ದೀಪಾಂಕರ

ನೆನಪಿನ ಹಕ್ಕಿಯ ಹಾರಲು ಬಿಟ್ಟು (ಆತ್ಮಕಥೆ);ಮೂಡ್ನಾಕೂಡು ಚಿನ್ನಸ್ವಾಮಿ;ಅಂಕಿತ

ಗೈರ ಸಮಜೂತಿ (ಕಾದಂಬರಿ);ರಾಘವೇಂದ್ರ ಪಾಟೀಲ;ಮನೋಹರ ಗ್ರಂಥಮಾಲಾ

ಕೆಂಪು ಮುಡಿಯ ಹೆಣ್ಣು (ಕಾದಂಬರಿ);ಮೂಲ: ಒರ್ಹಾನ್‌ ಪಮುಕ್‌, ಅನು: ಓ.ಎಲ್. ನಾಗಭೂಷಣ ಸ್ವಾಮಿ;ಅಭಿನವ

ಸ್ತ್ರೀವಾದ: ಅಂಚಿನಿಂದ ಕೇಂದ್ರದವರೆಗೆ;ಮೂಲ: ಬೆಲ್ ಹುಕ್ಸ್ ಅನು: ಎಚ್.ಎಸ್.ಶ್ರೀಮತಿ;ಸಂಗಾತ

ಹೊತ್ತು ಗೊತ್ತಿಲ್ಲದ ಕಥೆಗಳು (ಕತೆಗಳು);ಅಬ್ದುಲ್ ರಶೀದ್;ಅನುಗ್ರಹ

ಜಾತಿ ಬಂತು ಹೇಗೆ (ಜಾತಿವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ);ಜಿ.ಎನ್‌.ನಾಗರಾಜ್‌;ಬಹುರೂಪಿ

ಜನನಾಯಕ (ಕಾದಂಬರಿ);ಮೂಲ: ಚಿನುವ ಅಚಿಬೆ ಅನು:ವಿಕ್ರಂ ಚದುರಂಗ;ಚಿಂತನ ಚಿತ್ತಾರ

ಸಲ್ಮಾ ಮತ್ತು ಸುರಭಿ (ಕಥಾಸಂಕಲನ);ವೈದೇಹಿ;ಅಕ್ಷರ

ಜೀವರೇಶಿಮೆ (ಕಥಾ ಸಂಕಲನ);ಚೀಮನಹಳ್ಳಿ ರಮೇಶಬಾಬು;ಅನಿಮಾ

ಕನಸುಗಳು ಖಾಸಗಿ (ಕಥಾಸಂಕಲನ);ನರೇಂದ್ರ ಪೈ;ಮನೋಹರ ಗ್ರಂಥಮಾಲಾ

ಜೇನುಮಲೆಯ ಹೆಣ್ಣು (ಕವಿತೆ);ಸುಜಾತ ಎಚ್.ಆರ್.;ನಗುವನ ಕ್ರಿಯೇಶನ್ಸ್

ಮಂಜಿನ ಶಿವಾಲಯಕ್ಕೆ (ಕವಿತೆಗಳು);ಮೂಲ: ರೈನರ್ ಮರಿಯಾ ರಿಲ್ಕ್‌ ಅನು: ಹೆಚ್.ಎಸ್. ರಾಘವೇಂದ್ರ ರಾವ್;ಪಲ್ಲವ

ಪದಸೋಪಾನ (ಅಂಕಣ);ನರಹಳ್ಳಿ ಬಾಲಸುಬ್ರಹ್ಮಣ್ಯ;ಅಭಿನವ

ಪದ ಕುಸಿಯೆ ನೆಲವಿಲ್ಲ;ಮೂಲ: ನಿಯಾಜ್ ಫಾರೂಕಿ ಅನು: ಉಮಾಪತಿ;ಅಹರ್ನಿಶಿ

ದೇವುಡು ಲೋಕಕಥನ (ಸಮಗ್ರ ಲೇಖನಗಳ ಸಂಪುಟ);ಮಲ್ಲೇಪುರಂ ಜಿ.ವೆಂಕಟೇಶ;ಅನ್ನಪೂರ್ಣ

ಹಲ್ಲಾ ಬೋಲ್ (ಸಫ್ದರ್‌ ಹಾಶ್ಮಿ ಸಾವು ಮತ್ತು ಬದುಕು); ಮೂಲ: ಸುಧನ್ವ ದೇಶಪಾಂಡೆ ಅನು: ಎಂ.ಜಿ.ವೆಂಕಟೇಶ್;ಕ್ರಿಯಾ ಪುಸ್ತಕ

ಹಂಸ ಏಕಾಂಗಿ (ಕಾವ್ಯ);ಮೂಲ: ಕಬೀರ್, ಅನು. ಕೇಶವ ಮಳಗಿ;ಕಥನ

ಲೋಕ ವಿಮರ್ಶೆ (ವಿಮರ್ಶೆ);ರಾಜೇಂದ್ರ ಚೆನ್ನಿ;ಅಭಿರುಚಿ

ನೂರ್ ಇನಾಯತ್ ಖಾನ್;ಚಂದ್ರಶೇಖರ ಮಂಡೇಕೋಲು;ಅಹರ್ನಿಶಿ

***

ವರ್ಷದ ಸಾಹಿತ್ಯಯಾನದಲ್ಲಿ ಕಂಡದ್ದು ಉಂಡದ್ದು

ವರ್ಷಪೂರ್ತಿ ನಾವು ಓದಿದ ಪುಸ್ತಕಗಳು ಅವೆಷ್ಟೊ. ಆದರೆ, ಕೆಲವು ಕೃತಿಗಳಂತೂ ಮನದಲ್ಲಿ ಅಚ್ಚಳಿಯದೆ ಉಳಿದುಬಿಡುತ್ತವೆ. ಹೀಗೆ ‘ಎದೆಗೆ ಬಿದ್ದ ಅಕ್ಷರ’ಗಳು ಓದುಗರ ತಿಳಿವಳಿಕೆಯನ್ನು ವಿಸ್ತರಿಸುತ್ತವೆ. ಹೊಸ ಕಾಣ್ಕೆಯನ್ನೂ ನೀಡುತ್ತವೆ. ಕೋವಿಡ್‌ ಕಾಲದ ಕನ್ನಡ ಸಾಹಿತ್ಯದ ಅಂತಹ ಹೊಸ ಫಸಲಿನ ಜೊತೆಗಿನ 20 ಓದುಗರ ಪುಟ್ಟ ಅನುಸಂಧಾನ ಇಲ್ಲಿದೆ. ಅಂದಹಾಗೆ ಇದೇನು ರ‍್ಯಾಂಕಿಂಗ್‌ ಅಲ್ಲ. ಚರ್ಚಿತ ಪುಸ್ತಕಗಳ ಕಡೆಗಿನ ಒಂದು ಹೊರಳು ನೋಟವಷ್ಟೇ...​

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT