ಬುಧವಾರ, ಏಪ್ರಿಲ್ 21, 2021
23 °C

ನೆಲೆಮಾವುಮಠದ ಚರಿತ್ರೆಗೊಂದು ಆಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೆಲೆಮಾವುಮಠದ ಶ್ರೀಗುರುಪರಂಪರೆ
ಲೇ:
ಗಣೇಶ ಭಟ್ಟ ಹೋಬಳಿ
ಪ್ರ: ಮಹಾಬಲೇಶ್ವರ ಹೆಗಡೆ
ಮೊಬೈಲ್‌: 9482233924

***

ನಮ್ಮ ದೇಶದ ಸಂಸ್ಕೃತಿಯಲ್ಲಿ ಮಠಮಂದಿರಗಳ ಪಾತ್ರ ದೊಡ್ಡದು. ಅವು ನಮ್ಮ ಜನಜೀವನದ ಮೇಲೆ ಸಾವಿರಾರು ವರ್ಷಗಳಿಂದ ಪ್ರಭಾವವನ್ನು ಮೂಡಿಸುತ್ತ ಬಂದಿವೆ.

ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲೂ ಮಠಗಳನ್ನು ಸ್ಥಾಪಿಸಿ, ಅವುಗಳ ಮೂಲಕ ತಮ್ಮ ಸಿದ್ಧಾಂತದ ಪ್ರಸಾರ ನಿರಂತರವಾಗಿರುವಂಥ ವ್ಯವಸ್ಥೆಯನ್ನು ರೂಪಿಸಿದರು. ಈ ನಾಲ್ಕು ಮಠಗಳ ಜೊತೆಗೆ ಕಾಲಾನಂತರದಲ್ಲಿ ಹಲವು ಮಠಗಳು ಸ್ಥಾಪನೆಯಾದವು; ಅದ್ವೈತದ ಪ್ರಸಾರದಲ್ಲಿ ತೊಡಗಿಕೊಂಡವು. ಇಂಥ ಮಠಗಳಲ್ಲಿ ಒಂದು ನೆಲೆಮಾವುಮಠ.

ನೆಲೆಮಾವು ಮಠ ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ನೆಲೆಮಾವು ಎಂಬ ಊರಿನಲ್ಲಿದೆ. ಈ ಮಠ ಸ್ಥಾಪನೆಯಾಗಿ ಸುಮಾರು ಏಳುನೂರು ವರ್ಷಗಳಾಗಿವೆ; ಈ ಗುರುಪೀಠದಲ್ಲಿ ಇಪ್ಪತ್ತೈದು ಯತಿವರೇಣ್ಯರು ವಿರಾಜಮಾನರಾಗಿದ್ದಾರೆ. ಈ ಮಠದ ಇತಿಹಾಸ ಮತ್ತು ಗುರುಪರಂಪರೆಯ ಬಗ್ಗೆ ಗಣೇಶ ಭಟ್ಟ ಹೋಬಳಿ ಅವರ ಈ ಪುಸ್ತಕ ತುಂಬ ಮಾಹಿತಿಯನ್ನು ನೀಡುತ್ತದೆ. ಕೆಲವರು ಯತಿಗಳ ಬಗ್ಗೆಯೂ ಸಂಕ್ಷಿಪ್ತ ಜೀವನಚರಿತ್ರೆ ಇಲ್ಲಿದೆ; ಐತಿಹಾಸಿಕ ದಾಖಲೆಗಳೂ ಸಾಕಷ್ಟಿವೆ. ಜೊತೆಗೆ ದಕ್ಷಿಣಾಮೂರ್ತಿ ಸ್ತೋತ್ರ, ಲಕ್ಷ್ಮೀನರಸಿಂಹಪಂಚರತ್ನ, ಋಣಮೋಚನನೃಸಿಂಹ ಸ್ತೋತ್ರ, ದೇವೀ ಅಪರಾಧಕ್ಷಮಾಪಣ ಸ್ತೋತ್ರ, ಲಕ್ಷ್ಮೀನರಸಿಂಹಕರುಣಾರಸ ಸ್ತೋತ್ರಗಳ ಪ್ರತಿಪದಾರ್ಥ ಸಹಿತ ಅನುವಾದವನ್ನೂ ನೀಡಲಾಗಿದೆ. ಶಾಂಕರಪೀಠಗಳ ಬಗ್ಗೆ ಕುತೂಹಲಾಸಕ್ತಿ ಇರುವವರೆಲ್ಲರೂ ಗಮನಿಸಬೇಕಾದ ಕೃತಿಯಿದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು