‘ಕಾಯಕಕ್ಕೆ ಕಳೆಯಿತ್ತು, ಬದುಕಿಗೇ ಬೆಲೆಯಿತ್ತು’: ಸಿದ್ಧಯ್ಯ ಪುರಾಣಿಕರ ಕವನ

7

‘ಕಾಯಕಕ್ಕೆ ಕಳೆಯಿತ್ತು, ಬದುಕಿಗೇ ಬೆಲೆಯಿತ್ತು’: ಸಿದ್ಧಯ್ಯ ಪುರಾಣಿಕರ ಕವನ

Published:
Updated:

ಶಿವಕುಮಾರ ಸ್ವಾಮೀಜಿ ಬಗ್ಗೆ ಕವಿ ಡಾ.ಸಿದ್ಧಯ್ಯ ಪುರಾಣಿಕ ಅವರ ಕವನ ‘ಅಲ್ಪತನಕಳಿವಿಲ್ಲಿ’

–––

ಕವಿಸಯಮವೆನ್ನುವಿಯ ಸುರನದಿಯ? ಬಾ, ನೋಡು

ಸಿದ್ಧಗಂಗೆಯ ಯೋಗಿವರನ ನಡೆಯ|

ಕಲ್ಪನೆಯು ಎನ್ನುವಿಯ ಸುಧೆಯನ್ನು? ಬಾ, ಕೇಳು

ಶಿವಯೋಗಿ ಪುಂಗವನ ಸವಸಿರಿಯ ನುಡಿಯ|

ಸರ್ವಾಂಗ ಲಿಂಗಮಯ, ಮೈವೆತ್ತ ಕರುಣೆ ದಯ,

ಸರ್ವರನ್ನು ಪ್ರೀತಿಸುವ ದಿವ್ಯಹೃದಯ|

ಗುರಿಯು ಸಕಲರ ಉದಯ, ವರವು ಸರ್ವರಿಗಭಯ.

ಶ್ರೀಮಠವು ಎಲ್ಲರಿಗೆ ನಿತ್ಯಾಶ್ರಯ|

ಏನೆಂಬೆ ಶಿವಕುಮಾರನ ಮೋಡಿ, ಗಾರುಡವ?

ಬರಿಗೈಯೆ ಬೊಕ್ಕಸವು, ನಿಧಿ ನಿಧಾನ!

ಲಕ್ಷ ಕರ ತೆಗೆದರೂ ತುಂಬಿರುವ ಜೋಳಿಗೆಯು

ಕೈಕೊಳುತಲಿದೆ ಪಂಚಪರಷುಗಳ ನಮನ|

ಧರ್ಮದೇರಿಗೆ ಶರಣದರ್ಶನದ ಕಟ್ಟೆಯಿದೆ 

ಸಕಲ ಸದ್ಗತಿಯೆಂಬ ಸೋಪಾನವುಂಟು

ವಿದ್ಯೆಕಲೆಗಳ ಜಲದಿ ಅಧ್ಯಾತ್ಮದರವಿಂದ

ಶ್ರೀಮಠದ ಸರಸಿಯಲ್ಲಿ ಸೈಪು ನೂರೆಂಟು|

ಅಲ್ಪತನಕಳಿವಿಲ್ಲಿ| ಜಲ್ಪತನಕಡೆಯೆಲ್ಲಿ?

ಅತ್ಯುಚ್ಚ ಅನುಭಾವಿ ನೆಲೆಸಿರುವನಿಲ್ಲಿ

ಕಾಯಕಕ್ಕೆ ಕಳೆಯಿತ್ತು, ಬದುಕಿಗೇ ಬೆಲೆಯಿತ್ತು,

ನಾಡಿನಾಚೆಗು ಶಿವದ ಬೆಳಕು ಚೆಲ್ಲಿ|

–ಡಾ. ಸಿದ್ಧಯ್ಯ ಪುರಾಣಿಕ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !