ಬಿಗ್ಎಫ್ಎಂ (92.7) ಆಯೋಜಿಸಿದ್ದ ‘ಡಾಬರ್ ಹಂಟ್ ಬಿಗ್ ಗೋಲ್ಡನ್ ವಾಯ್ಸ್ ಜೂನಿಯರ್’ ಸ್ಪರ್ಧೆಯಲ್ಲಿ ಸೋನಲ್ ವಿಜೇತರಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕರಾದ ವಿ.ಹರಿಕೃಷ್ಣ ಮತ್ತು ಬಿ.ಜೆ.ಭರತ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಅಂತಿಮ ಸುತ್ತಿನಲ್ಲಿದ್ದ ಏಳು ಸ್ಪರ್ಧಿಗಳನ್ನು ಹಿಂದಿಕ್ಕಿ ಸೋನಾಲ್ ಗೆಲುವಿನ ನಗೆ ಬೀರಿದರು. ಅಂದಹಾಗೆ, ಸ್ಪರ್ಧೆಯಲ್ಲಿ ವಿಜೇತರಾದ ಸೋನಾಲ್ ಸಂಗೀತ ನಿರ್ದೇಶಕ ಬಿ.ಜೆ.ಭರತ್ ಜೊತೆ ಒಂದು ಮ್ಯೂಸಿಕ್ ಅಲ್ಬಂನಲ್ಲಿ ಹಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಗರುಡ ಮಾಲ್ನಲ್ಲಿ ಶುಕ್ರವಾರ ನಡೆದ ಅಂತಿಮ ಸ್ಪರ್ಧೆಯಲ್ಲಿ ಸೋನಲ್ ಅತ್ಯುತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರು ಹಾಗೂ ತೀರ್ಪುಗಾರರ ಮನಸ್ಸು ಗೆದ್ದರು. ‘ಡಾಬರ್ ಹಂಟ್ ಗೋಲ್ಡನ್ ವಾಯ್ಸ್ ಜೂನಿಯರ್ ಸ್ಪರ್ಧೆ ನನಗೆ ದೊಡ್ಡ ಅವಕಾಶ ನೀಡಿದೆ. ಹಾಡಬೇಕು ಎನ್ನುವ ನನ್ನ ಹಂಬಲಕ್ಕೆ ಇದು ವೇದಿಕೆ ಒದಗಿಸಿದೆ. ವಿವಿಧ ಶಾಲೆಗಳಿಂದ ಭಾಗವಹಿಸಿದ್ದ ನೂರಾರು ಸ್ಪರ್ಧಿಗಳನ್ನು ಹಿಂದಿಕ್ಕೆ ಗೆಲುವು ಸಾಧಿಸಿದ್ದು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಇಂಥದ್ದೊಂದು ಸುವರ್ಣಾವಕಾಶ ಕೊಟ್ಟ 92.7 ಬಿಗ್ಎಫ್ಎಂಗೆ ಧನ್ಯವಾದಗಳು’ ಎಂದರು ಸೋನಾಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.