ನಂಜನಗೂಡು: ರಾಜ್ಯ ಸರ್ಕಾರ ಪತ್ರ ಬರಹಗಾರರ ವೃತ್ತಿಯನ್ನು ಹತ್ತಿಕ್ಕುತ್ತಿರುವ ಧೋರಣೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ.15 ಹಾಗೂ 16ರಂದು ಲೇಖನಿ ಸ್ಥಗಿತಗೊಳಿಸಿ ಬೆಳಗಾವಿಯ ಸುವರ್ಣ ಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಪತ್ರ ಬರಹಗಾರರ ತಾಲೂಕು ಸಂಘದ ಅಧ್ಯಕ್ಷ ಪ್ರಕಾಶ್ ರಾಜೇ ಅರಸ್ ಹೇಳಿದರು.

ನಗರದ ತಾಲೂಕು ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಾದ್ಯಂತ ನೂರಾರು ವರ್ಷಗಳಿಂದ ಪತ್ರ ಬರಹಗಾರರ ವೃತ್ತಿಯನ್ನು ನಡೆಸುತ್ತಿರುವವರನ್ನು ಹತ್ತಿಕ್ಕುವವರ ವೃತ್ತಿಯನ್ನುರಾಜ್ಯ ಸರ್ಕಾರ ಮಾಡುತ್ತಿದೆ. ಈ ಹಿಂದೆ ಜಾರಿಗೆ ತರಲಾಗಿದ್ದ ಕಾವೇರಿ- 2 ತಂತ್ರಾಂಶದಲ್ಲಿ ಸಿಟಿಜನ್ ಲಾಗಿನ್ ಮೂಲಕ ಸಾರ್ವಜನಿಕರು ಅವರ ಆಸ್ತಿಗೆ ಸಂಬಂಧಿಸಿದ ಪತ್ರಗಳನ್ನು ಅವರೇ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು, ಆದರೆ ಈ ಅವಕಾಶವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳವಲ್ಲಿ ಅವರಿಗೆ ಕಂಪ್ಯೂಟರ್ ಜ್ಞಾನದ ಕೊರತೆಯಿದೆ ಎಂದರು.

ಡಿಟಿಪಿ ಹಾಗೂ ಸೈಬರ್ ಸೆಂಟರ್ನವರು ಈ ಅವಕಾಶವನ್ನು ದುರುಪಯೋಗ ಪಡಿಸಿಕೊಂಡು ಬೋರ್ಡ್ ಹಾಕಿಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಾ ಅವೈಜ್ಞಾನಿಕವಾಗಿ ಪತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತಮ್ಮ ಆಸ್ತಿಯ ಸಂಪೂರ್ಣ ವಿವರಗಳು ನಮೂದಾಗದೆ ವಂಚನೆಗೆ ಒಳಗಾಗುತ್ತಿದ್ದಾರೆ. ಅಧಿಕೃತ ಪತ್ರ ಬರಹಗಾರರಿಗೆ ಕೆಲಸಕ್ಕೆ ಕುಂದುಂಟಾಗಿದೆ, ಹೀಗಿರುವಾಗ ಸರ್ಕಾರ ಕಾವೇರಿ-3 ತಾಂತ್ರಾಂಶದಡಿಯಲ್ಲಿ ಫೇಸ್ಲೆಸ್ ಮತ್ತು ಪೇಪರ್ಲೆಸ್ ಎಂಬ ತಂತ್ರಾಂಶವನ್ನು ಜಾರಿಗೆ ತರಲು ಮುಂದಾಗಿದೆ. ಈ ತಂತ್ರಾಂಶ ಜಾರಿಗೆ ಬಂದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ಜೊತೆಗೆ, ಆಸ್ತಿಗೆ ಸಂಬಂಧಿಸಿದಂತೆ ಸುಳ್ಳು ಮತ್ತು ವಂಚನೆಯ ನೋಂದಣಿಗಳು ನಡೆಯಲಿವೆ ಎಂದರು.

ಸರ್ಕಾರದ ಈ ಕ್ರಮಗಳಿಂದ ಪತ್ರ ಬರಹಗಾರರ ವೃತ್ತಿಯೇ ನಾಶವಾಗಲಿದೆ, ಲಕ್ಷಾಂತರ ಪತ್ರ ಬರಹಗಾರರ ಕುಟುಂಬಗಳು ಬೀದಿಗೆ ಬೀಳಲಿವೆ. ಆದ್ದರಿಂದ ಸರ್ಕಾರ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ (ಡಿಡ್ ರೈಟರ್ ಲಾಗಿನ್) ನೀಡಬೇಕು, ನೋಂದಣಿಯಾಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರು ಅಥವಾ ವಕೀಲರ ಸಹಿ ಕಡ್ಡಾಯಗೊಳಿಸಬೇಕು. ರಾಜ್ಯದಾದ್ಯಂತ ಪತ್ರ ಬರಹಗಾರರಿಗೆ ಸರ್ಕಾರದ ಮಾನ್ಯತೆ ಇರುವ ಅಧಿಕೃತ ಗುರುತಿನ ಚೀಟಿಯನ್ನು ವಿತರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಪತ್ರ ಬರಹಗಾರರ ಒಕ್ಕೂಟದ ನೇತೃತ್ವದಲ್ಲಿರಾಜ್ಯ ವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ಡಿ. 15 ಹಾಗೂ 16 ರಂದು ನಗರದಲ್ಲಿ ಪತ್ರ ಬರಹಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು, ಬೆಳಗಾವಿ ಸುವರ್ಣಸೌಧ ಛಲೋ ಕಾರ್ಯಕ್ರಮವನ್ನು ಪಾಲ್ಗೊಳ್ಳಲಾಗುವುದು. ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ಎಸ್. ಬಸವರಾಜು, ಕೆ. ಶಶಿಧರ, ಬದನವಾಳು ಮಹದೇವಪ್ಪ, ಎಚ್.ಸಿ. ಲೋಕೇಶ್ ಕುಮಾರ್, ಹುಣಸನಾಳು ಸಿದ್ದರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.