ಕಾರವಾರ: ಅಂಕೋಲಾ ತಾಲ್ಲೂಕಿನ ಹಾರವಾಡಾ ಗ್ರಾಮದ ನೇತಾಜಿ ಸುಭಾಶಚಂದ್ರ ಬೋಸ್ ಸಂಯುಕ್ತ ಪ್ರಾಥಮಿಕ ಶಾಲೆಯಲ್ಲಿ ಸಿಂಡಿಕೇಟ್ ಬ್ಯಾಂಕ್ ಅವರ್ಸಾ ಶಾಖೆಯ ವತಿ ಯಿಂದ ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಹಲ್ಲಿನ ತಪಾಸಣಾ ಶಿಬಿರವನ್ನು ಈಚೆಗೆ ಎರ್ಪಡಸಲಾ ಗಿತ್ತು.

ಶಿಬಿರ ಉದ್ಘಾಟಿಸಿದ ಸಿಂಡಿಕೇಟ್ ಬ್ಯಾಂಕ್ನ ಕಾರವಾರ ಪ್ರಾದೇಶಿಕ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕ ಟಿ. ಮೋಹನ್ ರಾಜನ್, ಬ್ಯಾಂಕಿನ ಸಾಮಾಜಿಕ ಹಿತಾಸಕ್ತಿ ಜವಾಬ್ದಾರಿ ಕಾರ್ಯಕ್ರಮದ ಅಡಿ ಯಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಶಾಲೆಗಳ ವಿದಾರ್ಥಿಗಳ ಆರೋಗ್ಯ, ದಂತ ಹಾಗೂ ಕಣ್ಣಿನ ತಪಾಸಣಾ ಶಿಬಿರಗಳನ್ನು ಏರ್ಪಡಿಸ ಲಾಗುತ್ತಿದೆ ಎಂದರು.

ಶಾಲೆಗಳಿಗೆ ಬೇಕಾಗುವ ಪೀಠೋಪ ಕರಣಗಳನ್ನು ನೀಡುವುದು ಹಾಗೂ ಇನ್ನಿತರ ಸಾಮಾಜಿಕ ಹಿತಾಸಕ್ತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗುತ್ತಿದ್ದು ಈ ಕಾರ್ಯಕ್ರಮವನ್ನು ಹಾರ ವಾಡಾ ಗ್ರಾಮದಿಂದ ಪ್ರಾರಂಭಿಸಲಾ ಗಿದೆ ಎಂದರು. ಮುಂಬರುವ ದಿನ ಗಳಲ್ಲಿ ಜಿಲ್ಲೆಯಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ದಂತ ವೈದ್ಯ ಡಾ. ರವಿ ಎಂ. ಜಿ. ಮಾತನಾಡಿ, ಹಲ್ಲಿನ ಮಹತ್ವವನ್ನು ವಿವರಿಸಿದರು. ಹಲ್ಲಿನ ನಿರ್ಲಕ್ಷ್ಯದಿಂದ ಆಗುವ ಅಡ್ಡ ಪರಿಣಾಮಗಳನ್ನು ವಿವರಿಸಿದರು.

ಡಾ. ಅರ್ಚನಾ ನಾಯಕ, ಸಿಂಡಿಕೇಟ್ ಬ್ಯಾಂಕ್ನ ಕಾರವಾರ ಪ್ರಾದೇಶಿಕ ಕಾರ್ಯಾಲಯದ ಅಧಿ ಕಾರಿ ಜಯರಾಮ ಪ್ರಭು ಮಾತನಾಡಿ ದರು.ರಾಜಮ್ಮೋ ಗಾಂವಕರ, ಸವಿತಾ ನಾಯ್ಕ, ಕಾಂಚನಾ ಬಾಂದೇಕರ ಹಾಗೂ ಭಾರತಿ ಬಾಂದೇಕರ ಹಾಜರಿದ್ದರು.

ಸಿಂಡಿಕೇಟ್ ಬ್ಯಾಂಕ್ ಅವರ್ಸಾ ಶಾಖೆಯ ವ್ಯವಸ್ಥಾಪಕ ಎಮ್. ಪಿ. ಕಾಮತ್ ಸ್ವಾಗತಿಸಿದರು. ಶಾಲೆಯ ಮುಖ್ಯಾಧ್ಯಾಪಕಿ ಜಯಶ್ರೀ ಹಾರವಾಡೆಕರ ವಂದಿಸಿದರು.

`ಸುರಕ್ಷತೆ, ಶುಚಿತ್ವ ಕಾಪಾಡಿ~

ಯಲ್ಲಾಪುರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೂಡುವುದರ ಜೊತೆಗೆ ಉತ್ತಮವಾದ ಆರೋಗ್ಯ ನೀಡುವುದು ಸರಕಾರದ ಈ ಯೋಜನೆಯ ಮುಖ್ಯ ಗುರಿ ಇದನ್ನು ಸಾಧಿಸುವಲ್ಲಿ ತಮ್ಮ ಪಾತ್ರ ಇಲಾಖೆ ಜೊತೆ ಜೊತೆ ಮಹತ್ವದ್ದಾಗಿದೆ. ಸುರಕ್ಷತೆ ಹಾಗೂ ಶುಚಿತ್ವ ಕಾಪಾಡಿಕೊಂಡು ಬರ ಬೇಕೆಂದು ಕ್ಷೇತ್ರಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಕೆ ಎಂ ಕಾಳೆ ನುಡಿದರು

ಹೋಲಿರೋಜರಿ ಪ್ರೌಡಶಾಲೆ ಯಲ್ಲಿ ನಡೆದ ಯಲ್ಲಾಪುರ ತಾಲ್ಲೂಕು ಮಟ್ಟದ ಅಡಿಗೆಯವರ ಒಂದು ದಿನದ ಪುನಶ್ಚೇತನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಮಾ ಗ್ಯಾಸ್ ಏಜನ್ಸಿಯ ಮಾಲೀಕರಾದ ಎ ಎ ಶೇಖ ಅವರು ಗ್ಯಾಸ್ ಅನ್ನು ಹೇಗೆ ಬಳಸಬೇಕು ಎಂದು ಅವರು ವಿವರಿಸಿದರು.

ವೇದಿಕೆ ಮೇಲೆ ಶಿಕ್ಷಣ ಸಂಯೋಜಕರಾದ ದಶರಥ ದೊಡ್ಡಮನಿ ಜಡಿ ಆಚಾರಿ ಕ್ರೀಡಾ ಸಂಯೋಜನಾಧಿಕಾರಿ ಪ್ರಕಾಶ ನಾಯಕ ಸಿಆರ್ಪಿ ಸಂತೋಷ ನಾಯ್ಕ ಫಾದರ್ ರೆಮಂಡ್ ಫರ್ನಾಂಡಿಸ್ ಉಪಸ್ಥಿತ ರಿದ್ದರು.
ಕಾರ್ಯಕ್ರಮವನ್ನು ಎಂ ರಾಜಶೇಖರ ನಿರೂಪಿಸಿದರು.

ತಾಲ್ಲೂಕಿನಾದ್ಯಾಂತ ಮುನ್ನೂ ರಕ್ಕೂ ಹೆಚ್ಚು ಬಿಸಿ ಊಟ ಕಾರ್ಯ ಕರ್ತರು ಭಾಗವಹಿಸಿ ಇಲಾಖಾ ಮಾರ್ಗದರ್ಶನ ಸೂಚನೆ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.