ಬುಧವಾರ, ಜೂನ್ 23, 2021
30 °C

ಹಳ್ಳಿಗಳಲ್ಲಿ ಉತ್ತಮ ಆರೋಗ್ಯ ಸೇವೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಳ್ನಾವರ:  ಗ್ರಾಮೀಣ ಪ್ರದೇಶದಲ್ಲಿ ರುವ ಕಟ್ಟ ಕಡೆಯ ಜನರಿಗೆ ಗರಿಷ್ಟ ಮಟ್ಟದ ಹಾಗೂ ಗುಣಾತ್ಮಕ ಆರೋಗ್ಯ ಸೇವೆಗಳು ಸಿಗಬೇಕು. ಹಳ್ಳಿ ಬದುಕು ಸದೃಡ ಸಮಾಜದಿಂದ ಕೂಡಿರಬೇಕು. ಅಂದಾಗ ಮಾತ್ರ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯ ನಡೆಯು ತ್ತಿರುವ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಬರಲು ಸಾಧ್ಯ ಎಂದು ತಾಲ್ಲೂ ಕು ಪಂಚಾಯಿತಿ ಸದಸ್ಯೆ ಸ್ನೇಹಶ್ರೀ ಕಿತ್ತೂರ ಹೇಳಿದರು.ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿ ಯಾನ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸ್ಥಳೀಯ ಪಟ್ಟಣ ಪಂಚಾಯಿ ತಿಯ ಆಶ್ರಯದಲ್ಲಿ ಆಯೋಜಿಸಿದ್ದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಸಮುದಾಯ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಆರೋಗ್ಯವಂತ ಮಕ್ಕಳು ನಾಳಿನ ಆರೋಗ್ಯವಂತ ಪ್ರಜೆಗಳಾಗಿ ರಬೇಕು ಎಂದರು.ಡಾ. ಎಸ್.ಎಂ .ಸಾಂಬ್ರಾಣಿ ಮಾತ ನಾಡಿ, ಅಳ್ನಾವರ ಪ್ರಾಥಮಿಕ ಆರೋಗ್ಯ ಕೇಂದ್ರವು ಗುಣಮಟ್ಟದ ಆರೋಗ್ಯ ಸೇವೆ ನೀಡಲು ಶ್ರಮಿಸುತ್ತಿದ್ದು, ಹೆರಿಗೆ ಮಾಡಿಸಲು ಧಾರವಾಡ ತಾಲ್ಲೂಕಿನಲ್ಲಿ ಸತತ ಎರಡು ವರ್ಷದಿಂದ ಪ್ರಥಮ ಸ್ಥಾನ ಹೊಂದಿದೆ.ಆಸ್ಪತ್ರೆಯಲ್ಲಿ 2011ರ ಏಪ್ರಿಲ್‌ನಿಂದ 2012ರ ಫೆಬ್ರುವರಿವರೆಗೆ ಜೆಎಸ್‌ವೈ ಯೋಜನೆ ಯಡಿ 288 ಜನರಿಗೆ ರೂ. 2 ಲಕ್ಷಕ್ಕಿಂತ ಹೆಚ್ಚು ಹಣ ಹಾಗೂ ಪ್ರಸೂತಿ ಆರೈಕೆಗೆ 261 ಜನರಿಗೆ ಸುಮಾರು ರೂ.2 ಲಕ್ಷ 61 ಸಾವಿರ ರೂಪಾಯಿ ಮತ್ತು 112 ಮಡಿಲು ಕಿಟ್ ವಿತರಿಸಲಾಗಿದೆ ಎಂದರು.

 

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ರೈ ಅಧ್ಯಕ್ಷತೆ ವಹಿಸಿದ್ದರು, ಪ.ಪಂ. ಸದಸ್ಯರಾದ ಸುವರ್ಣಾ ಕಡಕೋಳ, ನಬೀಸಾಬ್ ಮುಜಾವರ, ಕಿರಣ ಗಡಕರ, ಲಿಂಗರಾಜ ಮೂಲಿ ಮನಿ, ಪ್ರವೀಣ ಪವಾರ, ಗಣ್ಯರಾದ ಮುರ ಗೇಶ ಹಟ್ಟಿಹೋಳಿ ಎಂ.ವೈ. ಶಿಬಾರಗಟ್ಟಿ, ರುಕ್ಮಣಿ ದಬಾಲಿ ಮುಂತಾದವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.