ವರ್ಷಾಂತ್ಯಕ್ಕೆ ದಿನಗಣನೆ ಆರಂಭವಾಗಿದೆ. ಯುವ ಸಮುದಾಯ 2026ನ್ನು ಸ್ವಾಗತಿಸಲು ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಆದರೆ, ಕೆಲವು ದೇಶಗಳಲ್ಲಿ ಮಾತ್ರ ಹೊಸ ವರ್ಷದ ಆಚರಣೆ ಬಹಳ ವಿಚಿತ್ರ ಹಾಗೂ ವಿಭಿನ್ನವಾಗಿರುತ್ತದೆ.

ಸ್ಪೇನ್ ದೇಶದಲ್ಲಿ ಇದರ ಆಚರಣೆ ಬಹಳ ವಿಶೇಷವಾಗಿರುತ್ತದೆ. ಇಲ್ಲಿ, 12 ದ್ರಾಕ್ಷಿಗಳನ್ನು ತಿನ್ನುವ ಮೂಲ ಹೊಸ ವರ್ಷವನ್ನು ಭರಮಾಡಿಕೊಳ್ಳುತ್ತಾರೆ.

ಹೊಸ ವರ್ಷದ ಆಚರಣೆ ಸಂಸ್ಕೃತಿ ಆರಂಭವಾಗಿದ್ದು ಪಾಶ್ಚಿಮಾತ್ಯ ದೇಶಗಳಲ್ಲಿ. ಸ್ಪೇನ್ ದೇಶದಲ್ಲಿ ಹೊಸ ವರ್ಷದಂದು (ಡಿಸೆಂಬರ್ 31) ರಾತ್ರಿ 12 ಗಂಟೆಗೆ ಸರಿಯಾಗಿ 12 ದ್ರಾಕ್ಷಿಗಳನ್ನು ತಿನ್ನುವ ಮೂಲಕ ಹೊಸ ವರ್ಷವನ್ನು ಭರಮಾಡಿಕೊಳ್ಳುತ್ತಾರೆ.
.ಹೊಸವರ್ಷ.ರೆಸಿಪಿ | ಮನೆಯಲ್ಲಿಯೇ ಹೋಟೆಲ್ ಶೈಲಿಯ ಸಿಗಡಿ ಫ್ರೈ ಮಾಡಿ ಸವಿಯಿರಿ.
ಅದೃಷ್ಟದ 12 ದ್ರಾಕ್ಷಿಗಳು:

12 ದ್ರಾಕ್ಷಿಗಳು 12 ತಿಂಗಳುಗಳನ್ನು ಸೂಚಿಸುತ್ತವೆ. ಇವು ಅದೃಷ್ಟದ ಸಂಕೇತವೆಂದು ಇಲ್ಲಿನ ಜನರು ನಂಬುತ್ತಾರೆ. ಇಲ್ಲಿನ ಜನರ ನಂಬಿಕೆಯ ಪ್ರಕಾರ 12 ದ್ರಾಕ್ಷಿಗಳ ಸೇವನೆಯಿಂದ ಆ ವರ್ಷ ಅದೃಷ್ಟ ಹಾಗೂ ಸಮೃದ್ಧಿ ತರುತ್ತದೆ. ಆಗಾಗಿ ಇಲ್ಲಿನ ಜನರು ಈ ಆಚರಣೆಯನ್ನು ಪಾಲಿಸುತ್ತಿದ್ದಾರೆ. 12 ಸೆಂಕೆಡುಗಳಲ್ಲಿ 12 ದ್ರಾಕ್ಷಿಗಳನ್ನು ತಿಂದು ಮುಗಿಸಬೇಕು ಎಂಬ ನಿಯಮವೂ ಇದೆ.

ಆಚರಣೆಯ ಕಥೆ:

ಈ ಆಚರಣೆಯನ್ನು 1909ರಲ್ಲಿ ಸ್ಪ್ಯಾನಿಷ್ ದ್ರಾಕ್ಷಿ ಬೆಳೆಗಾರರು ಆರಂಭ ಮಾಡಿದರು. ಈ ಆಚರಣೆ ಆರಂಭವಾದ ವರ್ಷ ದ್ರಾಕ್ಷಿ ಬೆಳೆಯು ಸಮೃದ್ಧವಾಗಿ ಬೆಳೆದಿತ್ತು. ಬೆಳೆಗಾರರು ತಮ್ಮ ಹೆಚ್ಚುವರಿಯಾದ ದ್ರಾಕ್ಷಿಯನ್ನು ಮಾರಾಟ ಮಾಡಲು ಈ ಟ್ರೆಂಡ್ ಆರಂಭಿಸಿದರು. ಇಂದಿನಿಂದ ಇದು ಅಲ್ಲಿನ ಆಚರಣೆಗಳಲ್ಲಿ ಒಂದಾಗಿ ಬೆಳೆಯಿತು ಎಂದು ಇತಿಹಾಸ ಹೇಳುತ್ತದೆ.

ಭಾರತದಲ್ಲಿಯೂ ಜನಪ್ರಿಯವಾದ ಸಂಪ್ರದಾಯ:

ಈ 12 ದ್ರಾಕ್ಷಿಗಳ ಸೇವನೆಯ ಆಚರಣೆ ಭಾರತ ಸೇರಿದಂತೆ ಇತರೆ ದೇಶಗಳಲ್ಲೂ ಇದೆ. ಡಿಸೆಂಬರ್ 31ರ ರಾತ್ರಿ ಪಾರ್ಟಿ ಮಾಡುವಾಗ ಹಸಿರು ಹಾಗೂ ಕಪ್ಪು ದ್ರಾಕ್ಷಿಗಳನ್ನು ತಿನ್ನುವುದನ್ನು ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.