ದೇವರಿಗೆ ಪೂಜೆ ಸಲ್ಲಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಕಷ್ಟ ಬಂದಾಗ ದೇವರನ್ನು ಪೂಜಿಸುವುದರಿಂದ ಕಷ್ಟಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.

ದೇವರನ್ನು ಪೂಜಿಸುವಾಗ ಹೂಗಳನ್ನು ಬಳಸುತ್ತೇವೆ. ಆದರೆ ಕೆಲವೊಂದು ಸ್ಥಳದಿಂದ ತರುವ ಹೂವುಗಳಿಂದ ದೇವರಿಗೆ ಪೂಜೆ ಸಲ್ಲಿಸಬಾರದು ಎಂದು ಜ್ಯೋತಿಷ ಹೇಳುತ್ತದೆ. ಹಾಗಾದರೇ ಯಾವ ರೀತಿಯ ಹೂವುಗಳನ್ನು ಬಳಸಬಾರದು ಎಂದು ತಿಳಿಯೋಣ.
.ಪೂರ್ವಿಕರ ಫೋಟೊಗಳನ್ನು ಮನೆಯಲ್ಲಿ ಇಡಬೇಕಾ, ಬೇಡ್ವಾ: ಇದರ ಹಿಂದಿನ ಉದ್ದೇಶವೇನು?.

ಅಪವಿತ್ರ ಸ್ಥಳದಲ್ಲಿ ಬೆಳೆದಿರುವ ಹೂಗಳನ್ನು ಬಳಸಬಾರದು.

ಅರಳದೆ ಇರುವ ಹೂಗಳು, ಅಂದರೆ ಮೊಗ್ಗುಗಳನ್ನು ಬಳಸಬಾರದು.

ದಳಗಳು ಉದುರಿರುವ ಹೂಗಳನ್ನು ದೇವರಿಗೆ ಅರ್ಪಿಸಬಾರದು.

ಸುವಾಸನೆ ರಹಿತ ಅಥವಾ ತೀವ್ರ ಸುವಾಸನೆ ಇರುವ ಹೂಗಳನ್ನು ಬಳಸಬಾರದು.

ಗಿಡದಿಂದ ನೆಲಕ್ಕೆ ಬಿದ್ದಿರುವ ಹೂಗಳನ್ನು ಬಳಸಬಾರದು.

ಎಡಗೈಯಲ್ಲಿ ತರಲಾಗಿರುವ ಹೂಗಳು.

ನೀರಿನಲ್ಲಿ ಅದ್ದಿ ತೊಳೆಯಲಾದ ಹೂಗಳನ್ನು ಬಳಸಬಾರದು.

ಒಳ ಉಡುಪುಗಳನ್ನು ಮಾತ್ರವೇ ಧರಿಸಿ ತಂದಿರುವ ಹೂವುಗಳನ್ನು ಪೂಜೆಗೆ ಬಳಸಬಾರದು ಎನ್ನುತ್ತೆ ಜ್ಯೋತಿಷ.

ಈ ರೀತಿಯ ಹೂಗಳನ್ನು ದೇವರಿಗೆ ಅರ್ಪಿಸುವುದರಿಂದ ಯಾವುದೇ ರೀತಿಯ ಆಧ್ಯಾತ್ಮಿಕ ಲಾಭವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದ್ದರಿಂದ ದೇವರ ಪೂಜೆಗೆ ಶುದ್ಧವಾದ ಹೂಗಳನ್ನು ಬಳಸಿ ದೇವರನ್ನು ಪ್ರಾರ್ಥಿಸಿದರೆ. ನಮ್ಮ ಕಷ್ಟಕಾರ್ಪಣ್ಯಗಳು ನಿರ್ಮೂಲನೆಯಾಗುತ್ತದೆ ಎಂದು ನಂಬಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.