ಜುಲೈ ತಿಂಗಳಲ್ಲಿ ಪ್ರಕಟವಾದ ಅಂಕಣದಲ್ಲಿ ಮೋದಿಯವರು ಪ್ರಾಣ ರಕ್ಷಣೆಯ ವಿಚಾರದಲ್ಲಿ ಗರಿಷ್ಠ ಎಚ್ಚರಿಕೆ ವಹಿಸಬೇಕು ಎಂಬ ಅಂಶವನ್ನು ಪ್ರಸ್ತಾಪಿಸಲಾಗಿತ್ತು. ಭಾರತೀಯ ಜ್ಯೋತಿಷ ವಿಜ್ಞಾನದ ಪ್ರಕಾರ, ಒಬ್ಬ ವ್ಯಕ್ತಿಯ ಪ್ರಾಣ ಅಥವಾ ರೋಗಗಳ ಕುರಿತು ಆತ್ಮ ಚೈತನ್ಯದ ಮೂಲವಾದ ಜನ್ಮ ಕುಂಡಲಿಯ ಮೊದಲ ಮನೆ ಅರಿಷ್ಟಗಳ ವಿಚಾರವಾಗಿ ಹಲವನ್ನು ತೆರೆದು ತೋರುವ ರಿಪು ಭಾವ ಸಂಬಂಧಿ ಆರನೇ ಮನೆಯನ್ನು, ಮರಣದ ವಿಚಾರವಾಗಿ ರಾಶಿ ರಾಶಿ ಮಾಹಿತಿಯನ್ನು ಕೊಡುವ ಎಂಟನೇ ಮನೆಯನ್ನು ವಿಶ್ಲೇಷಿಸಲು ಸಲಹೆ ನೀಡುತ್ತದೆ. ಜತೆಗೆ ಆಯುಷ್ಕಾರಕ ಎಂದು ಕರೆಸಿಕೊಳ್ಳುವ ಶನಿ ಗ್ರಹದ ಶಕ್ತಿ ಅಥವಾ ಮಿತಿಗಳು ಸದ್ಯದ ವರ್ತಮಾನದ (ಇದನ್ನು ಗೋಚಾರ ಸ್ಥಿತಿ ಎಂದು ಕರೆಯುತ್ತಾರೆ) ಸಂದರ್ಭದಲ್ಲಿ ಎತ್ತ ಹಾಗೂ ಹೇಗೆ ಎಂದು ನಿಷ್ಕರ್ಷಿಸಲು ತಿಳಿಸುತ್ತದೆ. ಸದ್ಯ ಈ ಎಲ್ಲಾ ವಿಚಾರಗಳನ್ನು ಗಮನಿಸಿ ಹೇಳುವುದಾದರೆ ಮೋದಿಯವರ ಪಾಲಿಗೆ ಮುಂದಿನ ಎರಡೂವರೆ ವರ್ಷಗಳು ಅತ್ಯಂತ ಪ್ರಮುಖವಾಗಿದೆ.

ನರೇಂದ್ರ ಮೋದಿಯವರಿಗೆ ಸದ್ಯ ಪಂಚಮ ಶನಿ ಕಾಟದ ಸಮಯವಾಗಿರುವುದಿಂದ ಹೊರ ದೇಶದಲ್ಲೇ ಇರಲಿ ದೇಶದ ಒಳಗೇ ಇರಲಿ ಪ್ರಾಣದ ಕುರಿತು ಬಹಳಷ್ಟು ಎಚ್ಚರ ವಹಿಸಬೇಕು. ಸಂದಿಗ್ಧ ದಗ್ಧ ತಪ್ತ ಸ್ಥಿತಿಯಲ್ಲಿ ಸೂರ್ಯನ ಜತೆಗೆ ಬುಧ ಗ್ರಹವಿದೆ. ಹೀಗಿದ್ದರು ಒಂದಿಷ್ಟು ಅಪಾಯಕಾರಿಯಾಗುವಷ್ಟು ಘಾತಕತನವನ್ನು ಬುಧ ಗ್ರಹದ ಒಳ ವಲಯ ನಡೆಸದಿದ್ದರೂ ಪಂಚಮ ಶನಿ ಕಾಟದ ದಿನಗಳು ಅಪಾಯಕಾರಿಯೇ.

ಹೀಗಾಗಿ ಅಮೃತವನ್ನೇ ಹೊತ್ತ ಕೇತು ರವಿ ಬುಧ ಗ್ರಹಗಳು ಪರಸ್ಪರ ಜತೆಗಿದ್ದರೂ ವಿಷದ ದಾವಾನಲ ಹೊತ್ತ ಉರಿ ಉಗುಳುವ ಧೂಮಕೇತುವೇ ಆಗಿ ನಿಲ್ಲಬಲ್ಲ ದುಷ್ಟ ಮಾರಕ ಶಕ್ತಿಯನ್ನು ಬುಧ ಗ್ರಹವು ಸರ್ರನೆ ಪಡೆದು ಬಿಡಬಹುದಾಗಿದೆ. ಹೀಗಾಗಿ ಮೋದಿಯವರು ಪ್ರಾಣದ ಕುರಿತು ಹೆಚ್ಚಿನ ಎಚ್ಚರ ವಹಿಸುವುದು ಅತ್ಯಂತ ಅಗತ್ಯ. ಬುಧನು ಮರಣದ ಮನೆಯ ಯಜಮಾನನಾಗಿದ್ದು ತನಗೆ ಹೊಂದಿಕೆಯಾಗದ ಕುಜ ಮಹಾದಶ ಕಾಲದಲ್ಲಿ ತನ್ನ ಭುಕ್ತಿಯ ಸರದಿಯನ್ನೂ ಈ ಅವಧಿಯಲ್ಲಿ ಹೊಂದಿದ್ದಾನೆ ಎಂಬುದು ಗಮನಾರ್ಹ.ತೀರಾ ಇತ್ತೀಚಿನ ಚೀನಾ ಪ್ರವಾಸದ ವೇಳೆಯಲ್ಲಿ ಅಮೇರಿಕಾದ ಸಿಐಎ ಗುಪ್ತಚರ ಸಂಸ್ಥೆ ಮೋದಿಯವರ ಪ್ರಾಣಕ್ಕೆ ಧಕ್ಕೆ ತರುವ ಮಸಲತ್ತು ನಡೆಸಿತ್ತು ಎಂಬುದು ಈ ಕೆಲ ದಿನಗಳಿಂದ ದೊಡ್ಡ ಸುದ್ದಿಯಾಗಿ ಬಹಳಷ್ಟು ಮಾಧ್ಯಮಗಳಲ್ಲಿ ಸುತ್ತು ಹೊಡೆಯುತ್ತಿರುವುದನ್ನು ಗಮನಿಸಬಹುದು.

ಬಿಹಾರ ವಿಧಾನಸಭಾ ಚುನಾವಣೆ

ಎನ್ಡಿಎ ಮಿತ್ರ ಪಕ್ಷಗಳ ಹೊಂದಾಣಿಕೆ ಬಿಹಾರದಲ್ಲಿ ದೊಡ್ಡ ಜಯ ತಂದುಕೊಡುವುದು ಅಸಾಧ್ಯ ಎಂಬುದನ್ನು ಯಾವ ಚುನಾವಣಾ ವಿಶ್ಲೇಷಕನೂ ಸದ್ಯದ ಸ್ಥಿತಿಯಲ್ಲಿ ಹೇಳಲಾರ. ಆದರೆ ಈ ಹೊಂದಾಣಿಕೆಯು ಎನ್ಡಿಎಗೆ ಶಕ್ತಿಯೂ ಹೌದು. ಹಾಗೆಯೇ ದೌರ್ಬಲ್ಯವೂ ಹೌದು ಎಂಬುದು ಮೋದಿಯವರ ಜನ್ಮ ಕುಂಡಲಿಯಲ್ಲಿನ ಶನಿ ಹಾಗೂ ಚಂದ್ರ ಗ್ರಹಗಳ ತಿಕ್ಕಾಟದ ಕಾರಣದ ಪಂಚಮ ಶನಿ ಕಾಟದಿಂದಾಗಿ ತೋರಿಬರುತ್ತಿದೆ. ತನ್ನದೇ ದಾರಿಯನ್ನು ಕಂಡು ನಡೆಯುತ್ತಿರುವ ಮೋದಿಯವರಿಗೆ ನಿತೀಶ್ ಕುಮಾರ್ ಅಡ್ಡ ಗೋಡೆಯಾಗಬಹುದು. ವಕ್ರಿಯಾಗಿ ಸಂಚರಿಸುವ ಗುರು ಗ್ರಹವೇ ಇದಕ್ಕೆ ಕಾರಣ ಇರುತ್ತದೆ.

ಎನ್ಡಿಎಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅದ್ಭುತ ಜಯ ದೊರಕಿದರೂ ಅಲ್ಲಿನ ರಾಜಕೀಯ ಸಂಗತಿಗಳು ಮೋದಿಯವರಿಗೆ, ಬುಧ ಗ್ರಹ (ಪ್ರತಿ ಕ್ಷಣವೂ ತಂತಿಯ ಮೇಲಿ ನಡಿಗೆಯನ್ನಾಗಿ ಪರಿವರ್ತಿಸಲು) ಅವರ ಕುಂಡಲಿಯ ದೃಷ್ಟಿಯಿಂದ ಕ್ಲಿಷ್ಟವಾಗಿಸಲು ಅವಕಾಶವಿದೆ. ಮೋದಿಯವರ ಎದುರು ಸಮಸ್ಯೆಯೊಂದನ್ನು ಇಟ್ಟೇ ತೀರಲು ಸದ್ಯ ಬುಧ ಗ್ರಹ ಕ್ರಿಯಾಶೀಲವಾಗಿದೆ. ಇದು ಉಸಿರು ಕಟ್ಟಿಸುವ ಅನುಭವ. ಜತೆಗೆ ಸ್ಟಾರ್ ಪ್ರಚಾರಕರಾಗಿ ಜನರ ನಡುವೆ ಮೋದಿ ಇರಲೇ ಬೇಕಾಗುತ್ತದೆ. ಜನರು ಸೇರಿದ ಸಂದಣಿಯ ವಿಚಾರ ಒಂದು ಸೆಕೆಂಡ್ ನಷ್ಟೂ ಮೈ ಮರೆಯುವ ಅಂಶವಾಗಿ ಹರಳುಗಟ್ಟಲೇ ಕೂಡದು. ಹಾಗೆ ಹರಳುಗಟ್ಟಿದರೆ ಪರಿಣಾಮ ಆಘಾತಕರವೇ ಆಗಲೂಬಹುದು. ಚುನಾವಣಾ ನಂತರದ ರಿಸಲ್ಟ್ ಕೂಡಾ ಮೋದಿಯವರ ಪಾಲಿಗೆ ಸಕಾರಾತ್ಮಕವಾಗಿ ಎದ್ದು ನಿಂತರೂ ಯಾವುದೋ ಅನಿರೀಕ್ಷಿತ ಬಿರುಗಾಳಿಯಾಗಿ ಅದು ಪರಿವರ್ತನೆಯಾಗುವ ಸಾಧ್ಯತೆಯೂ ಇದೆ.

ಹೀಗಾಗಿ ಎನ್ಡಿಎ ಗೆಲುವು ಬಿಹಾರದ ಸದ್ಯದ ಚುನಾವಣೆಯಲ್ಲಿ ಸಕಾರಾತ್ಮಕ ನಿಟ್ಟಿನಲ್ಲಿ ಸಾಧ್ಯವಾದರೂ ವಿಚಿತ್ರವಾದ ಬೆಳವಣಿಗೆಯೊಂದು ಆ ಹೊತ್ತಿಗೆ ನಡೆದರೆ ಅದು ಅತೀ ದೊಡ್ಡ ಬಿರುಗಾಳಿಯೇ ಆಗಿ ಊಹೆಗೂ ನಿಲುಕದ ವಿಸ್ಮಯಕಾರಿ ಏರುಪೇರುಗಳನ್ನು ನಿರ್ಮಾಣಗೊಳಿಸಬಹುದು. ಮೋದಿಯವರ ಕೇಂದ್ರದ ನಾಯಕತ್ವಕ್ಕೇ ಧಕ್ಕೆ ತರುವ ವಿಚಿತ್ರಕಾರಕ ಸ್ಥಿತಿಯನ್ನೂ ನಿರ್ಮಿಸಬಹುದು. ಮೋದಿಯವರನ್ನು ಭೈರವ ಹಾಗೂ ದುರ್ಗಾ ಶಕ್ತಿಗಳು ಹಲವು ದುರ್ಭರ ಸ್ಥಿತಿ ಎದುರಾದಾಗಲೂ ಕಾದಿವೆ. ಈಗಲೂ ಅದೇ ಶಕ್ತಿ ಅವರನ್ನು ಕಾಯಬೇಕು. ಅಂದರೆ ಸದ್ಯದ ಕುಜ ಮಹಾ ದಶಾ ಕಾಲದ ಬುಧ ಭುಕ್ತಿಯ ಕಾಲ ಘಟ್ಟ ಮೋದಿಯವರ ಪಾಲಿಗೆ ಅನಿರೀಕ್ಷಿತವಾದ ಸವಾಲುಗಳನ್ನು ಎದುರಿಸುವ ಸಂಭಾವ್ಯತೆ ಎದುರಾದರೂ ಅವರ ಪಾಲಿನ ಸ್ನಿಗ್ಧ ಶಶಿ ಮಂಗಳಯೋಗ ಹಾಗೆಯೇ ಚಂದ್ರನ ನೀಚ ಭಂಗ ರಾಜಯೋಗ ಅವರ ರಕ್ಷೆಗೆ ಗುರಾಣಿ ಆಗಬಲ್ಲದು.

ಈ ಹಿಂದೆ ಸಾಡೇಸಾತಿ ಕಾಟದ ದಿನಗಳಿದ್ದಾಗಲೂ ಎರಡು ಬಾರಿ ಅಂದರೆ 2014 ಹಾಗೂ 2019 ರ ಲೋಕಸಭಾ ಚುನಾವಣೆಗಳಲ್ಲಿ ಸ್ಪಷ್ಟವಾಗಿ ಬಿಜೆಪಿ ಪಕ್ಷದ ಸಂಸದರ ಬಲದಿಂದಲೇ ಸರ್ಕಾರ ರಚಿಸುವಷ್ಟು ಸೀಟುಗಳನ್ನು ಮೋದಿ ಹೊಂದಿದ್ದರು. ಆದರೆ ಆಗ ಕಾಡಿಯೇ ತೀರುವ ಬುಧನ ಭುಕ್ತಿ ಕಾಲ ಇದ್ದಿರಲಿಲ್ಲ. ಆದರೆ ಈಗ ಈ ಸಂದರ್ಭದಲ್ಲಿ ದುಷ್ಟನಾದ ಅಷ್ಟಮ ಭಾವದ ಯಜಮಾನ ಬುಧನ ಭುಕ್ತಿ ಕಾಲ ನಡೆಯುತ್ತಿದೆ. ಹಲವಾರು ರೀತಿಯ ಜಿಣುಕುಗಳನ್ನು ಸುತ್ತಿಸಿ ಬಿಡುವ ವಿಷಮ ವರ್ತಮಾನವನ್ನು ಬುಧ ಗ್ರಹ ಸೃಷ್ಟಿಸಬಹುದಾಗಿದೆ. ಹೀಗಾಗಿ ಮೈ ಎಲ್ಲಾ ಕಣ್ಣಾಗಿ ಇರಬೇಕಾದ ಕಾಲ ಘಟ್ಟದ ಕುರಿತು ಮೋದಿಯವರು ಎಚ್ಚರದಿಂದ ಇರಲೇಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.