ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು (ಡಿಸೆಂಬರ್ 15) ಸರ್ವೇ ಶಾಮೆಕಾದಶಿ ಆಚರಿಸಲಾಗುತ್ತದೆ. ಈ ದಿನ ರಾತ್ರಿ 9.51ರವರೆಗೆ ಇದರ ಆಚರಣೆ ಮಾಡಬಹುದು. ಏಕಾದಶಿ ತಿಥಿಯ ಆಚರಣೆಯ ಮಹತ್ವವೇನು? ಇಂದು ಪಾಲಿಸಬೇಕಾದ ನಿಯಮಗಳು ಯಾವುವು ಎಂಬುದನ್ನು ತಿಳಿಯೋಣ.

ಏಕಾದಶಿ ಹಿಂದೂಗಳ ಪವಿತ್ರ ಹಬ್ಬ ಹಾಗೂ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಏಕಾದಶಿ ವಿಷ್ಣುವಿಗೆ ಪ್ರಿಯವಾದ ದಿನ. ಈ ದಿನ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಲಕ್ಷ್ಮೀ ನಾರಾಯಣನನ್ನು ಭಕ್ತಿಯಿಂದ ಪೂಜಿಸಿ. ಇಡೀ ದಿನ ಉಪವಾಸ ಮಾಡುವುದರಿಂದ ಶುಭ ಫಲ ದೊರೆಯಲಿದೆ.
.ಮೋಕ್ಷದ ಏಕಾದಶಿ: ಹಿನ್ನೆಲೆ, ಆಚರಣೆಯ ಮಹತ್ವವೇನು? ಇಲ್ಲಿದೆ ಮಾಹಿತಿ.ಪ್ರಧಾನಿ ಮೋದಿ ಮೇಲೆ ಬುಧ ಗ್ರಹದ ಕೆಂಗಣ್ಣು: ಬಿಹಾರ ಚುನಾವಣೆ ಮೇಲೆ ಪರಿಣಾಮವೇನು?.
ದೇವರ ಮನೆಯ ಪೂಜಾ ಮಂಟಪ ಸ್ವಚ್ಛಗೊಳಿಸಿ, ಲಕ್ಷ್ಮೀ ನಾರಾಯಣ ವಿಗ್ರಹಕ್ಕೆ ಶ್ರೀಗಂಧ ಹಾಗೂ ಕುಂಕುಮದಿಂದ ಅಲಂಕರ ಮಾಡಬೇಕು. ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಹಸುವಿನ ಸಗಣಿಯಿಂದ ದೀಪ ತಯಾರಿಸಿ ಆ ದೀಪವನ್ನು ದೇವರ ಮನೆಯಲ್ಲಿ ಹಚ್ಚಬೇಕು.

ಈ ದಿನ ಉಪವಾಸ ಮಾಡಲು ಕಷ್ಟವಾದರೆ ಅಥವಾ ಆರೋಗ್ಯದಲ್ಲಿ ವ್ಯತ್ಯಾಸವಿದ್ದರೆ, ಹಾಲು ಮತ್ತು ಹಣ್ಣುಗಳನ್ನು ಸ್ಪೀಕರಿಸಬಹುದು. ಇತರರು ಶ್ರದ್ದೆಯಿಂದ ಉಪವಾಸದ ವ್ರತವನ್ನು ಆಚರಿಸಿ ಪೂಜೆಯಾದ ನಂತರ ಆಹಾರವನ್ನು ಸೇವಿಸುವುದು ಸೂಕ್ತ.

ಉಪವಾಸದ ನಂತರ ಅನ್ನ, ಉಪ್ಪು ಮತ್ತು ಧಾನ್ಯದಂತಹ ಉತ್ಪನ್ನಗಳ ಸೇವನೆ ತಪ್ಪಿಸಿ. ಇದರ ಬದಲಾಗಿ ಪಂಚಾಮೃತ, ಹಣ್ಣುಗಳನ್ನು ಸೇವನೆ ಉತ್ತಮ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಏಕಾಶಿಯ ದಿನದಂದು ಮನೆಯಲ್ಲಿ ಪೂಜೆ ಮಾಡಿದ ನಂತರ ಹತ್ತಿರದ ದೇವಾಲಯಗಳಿಗೆ ಭೇಟಿ ಕೊಡಿ. ಸಾಧ್ಯವಾದರೆ ಸಂಜೆಯ ಸಮಯದಲ್ಲಿ ವಿಷ್ಣುವಿನ ಸಹಸ್ರ ನಾಮ ಪಠಿಸಿ. ಸಾಧ್ಯವಾದಷ್ಟು ದಾನ ಧರ್ಮ ಮಾಡುವುದರಿಂದ ಶ್ರೇಯಸ್ಸು ತಂದು ಕೊಡುತ್ತದೆ.

ಈ ದಿನ ಉಗುರುಗಳನ್ನು ಕತ್ತರಿಸುವುದು ಹಾಗೂ ಚೌರ ಮಾಡಿಸುವುದು ಅಶುಭ ಫಲಿತಾಂಶಕ್ಕೆ ಕಾರಣವಾಗಬಹುದು ಎಂದು ಜ್ಯೋತಿಷದಲ್ಲಿ ತಿಳಿಸಿದೆ.
.ಬುಧ ಗ್ರಹ ಕಾರಕತ್ವ: ಮಿಥುನ, ಕನ್ಯಾ ರಾಶಿಯ ಅಧಿಪತಿ ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.