ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಗಾಸ್‌ನ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಬಿಡುಗಡೆ

Published 26 ಜೂನ್ 2024, 15:45 IST
Last Updated 26 ಜೂನ್ 2024, 15:45 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಆರ್. ಗ್ಲೋಬಲ್‌ನ ಪ್ರವರ್ತಕ ಕಂಪನಿಯಾದ ಬಿಗಾಸ್‌, ಹೊಸ ಮಾದರಿಯ ವಿದ್ಯುತ್‌ಚಾಲಿತ ‘ಆರ್‌ಯುವಿ350’ ದ್ವಿಚಕ್ರ ವಾಹನವನ್ನು ಮಾರುಕಟ್ಟೆ ಬಿಡುಗಡೆ ಮಾಡಿದೆ.

ಜುಲೈನಿಂದ ಎಲ್ಲಾ 120 ಬಿಗಾಸ್ ಡೀಲರ್‌ಶಿಪ್‌ಗಳಲ್ಲಿ ಈ ದ್ವಿಚಕ್ರ ವಾಹನವು ಖರೀದಿಗೆ ಲಭ್ಯವಿದೆ. ಇದರ ಆರಂಭಿಕ ಬೆಲೆ ₹1,09,999 ಆಗಿದೆ.

‘ನಗರ ಪ್ರದೇಶದ ಪ್ರಯಾಣಿಕರ ಅಗತ್ಯತೆ ಪೂರೈಸಲು ಈ ದ್ವಿಚಕ್ರ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ಆಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. ಗಟ್ಟಿಯಾದ ಲೋಹದ ದೇಹ ಹೊಂದಿದ್ದು, ಸವಾರರ ಸುರಕ್ಷತೆಗೆ ಒತ್ತು ನೀಡಲಾಗಿದೆ. ಜೊತೆಗೆ, ಆರಾಮದಾಯಕ ಸವಾರಿಯ ಅನುಭವ ನೀಡಲಿದೆ’ ಎಂದು ಬಿಗಾಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ಕಾಬ್ರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT