ಮಂಗಳವಾರ, ಮಾರ್ಚ್ 28, 2023
23 °C

ಯಲಹಂಕದಲ್ಲಿ ಕಿಯಾ ಮೋಟರ್ಸ್‌ ಷೋರೂಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಿಯಾ ಮೋಟರ್ಸ್‌ ಕಂಪನಿಯ ಅಧಿಕೃತ ವಿತರಕ ಎಪಿಟೊಮ್ ಆಟೊಮೊಬೈಲ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಯಲಹಂಕದಲ್ಲಿ ಬುಧವಾರ ಹೊಸ ಷೋರೂಂ ಉದ್ಘಾಟನೆ ಮಾಡಿದೆ.

ಕಿಯಾ ಮೋಟರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕೋಖಿಯುನ್‌ ಶಿಮ್ ಅವರು ಷೋರೂಂ ಉದ್ಘಾಟಿಸಿದರು. ರಾಜ್ಯದಲ್ಲಿ ಕಂಪನಿಯ ಮೂರನೇ ಷೋರೂಂ ಇದಾಗಿದೆ. ಈ ಷೋರೂಂ 30 ಸಾವಿರ ಚದರ ಅಡಿ ವಿಸ್ತೀರ್ಣವಾಗಿದೆ.

ಕಾರ್ಯಾಚರಣೆ ಆರಂಭಿಸಿದ ಮೊದಲ ವರ್ಷವೇ 1000 ಕಾರುಗಳನ್ನು ವಿತರಿಸಲಾಗಿದೆ. ನಮ್ಮ ಷೋರೂಂಗೆ ಭೇಟಿ ನೀಡುವ ಗ್ರಾಹಕರಿಗೆ ಉತ್ಕೃಷ್ಟ ಗುಣಮಟ್ಟದ ಸೇವೆಗಳನ್ನು ನೀಡುವುದು ಆದ್ಯತೆಯಾಗಿದೆ ಎಂದು ಎಪಿಟೊಮ್ ಆಟೊಮೊಬೈಲ್ಸ್‌ನ ಡೀಲರ್‌ ಪ್ರಿನ್ಸಿಪಲ್‌ ಕಿಶೋರ್‌ ಜಿ. ರೆಡ್ಡಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು