ಬೆಂಗಳೂರು: ವಾಹನ ತಯಾರಿಯಾ ಕಂಪನಿ ನಿಸಾನ್ ತನ್ನ ಹೊಸ ಎಸ್ಯುವಿ ಟೆಕ್ಟಾನ್ನ ಕಿರುನೋಟವೊಂದನ್ನು ಪ್ರದರ್ಶಿಸಿದೆ. ಮುಂದಿನ ವರ್ಷದಲ್ಲಿ ಇದು ದೇಶದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ತಿಳಿಸಿದೆ.

‘ಟೆಕ್ಟಾನ್ ಹೆಸರು ಗ್ರೀಕ್ ಮೂಲದ್ದಾಗಿದೆ. ಇದರ ಅರ್ಥ ಕುಶಲಕರ್ಮಿ ಅಥವಾ ವಾಸ್ತುಶಿಲ್ಪಿ. ವೃತ್ತಿ, ಹವ್ಯಾಸ ಮತ್ತು ಜೀವನಶೈಲಿಯಿಂದ ತಮ್ಮ ಜಗತ್ತನ್ನು ತಾವೇ ರೂಪಿಸಿಕೊಳ್ಳುತ್ತಿರುವವರಿಗೆ ಟೆಕ್ಟಾನ್ ಎಸ್ಯುವಿಯು ಹೇಳಿ ಮಾಡಿಸಿದಂತೆ ಇದೆ’ ಎಂದು ಕಂಪನಿ ಹೇಳಿದೆ.

‘ಕಾಂಪ್ಯಾಕ್ಟ್-ಎಸ್ಯುವಿ ವರ್ಗದ ವಾಹನಗಳ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಪಲ್ಲಟ ತರುವ ಉದ್ದೇಶದಿಂದ ಈ ವಾಹನವನ್ನು ರೂಪಿಸಲಾಗಿದೆ. ಇದನ್ನು ರೆನೊ ಕಂಪನಿಯ ಜೊತೆ ಪಾಲುದಾರಿಕೆಯಲ್ಲಿ ಚೆನ್ನೈನಲ್ಲಿನ ಘಟಕದಲ್ಲಿ ತಯಾರಿಸಲಾಗುತ್ತದೆ. ಇಲ್ಲಿ ತಯಾರಾಗುವ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಉದ್ದೇಶ ಹಾಗೂ ಮುಂದೆ ಆಯ್ದ ದೇಶಗಳಿಗೆ ರಫ್ತು ಮಾಡುವ ಉದ್ದೇಶವು ಇದೆ’ ಎಂದು ಕೂಡ ನಿಸಾನ್ ತಿಳಿಸಿದೆ.

‘ಈ ಎಸ್ಯುವಿ ವಿನ್ಯಾಸವು ಕಂಪನಿಯು ದೀರ್ಘ ಕಾಲದಿಂದ ತಯಾರಿಸುತ್ತಿರುವ ಹಾಗೂ ಐಕಾನಿಕ್ ಬ್ರ್ಯಾಂಡ್ ಆಗಿರುವ ಪ್ಯಾಟ್ರೋಲ್ ಎಸ್ಯುವಿಯಿಂದ ಸ್ಫೂರ್ತಿ ಪಡೆದಿದೆ. ಟೆಕ್ಟಾನ್ ಕಾರು ಮುಂದಿನ ವರ್ಷ ಮಾರುಕಟ್ಟೆಗೆ ಬಂದಾಗ, ಅದರಲ್ಲಿ ಬಹಳ ಆಕರ್ಷಕವಾದ ವಿನ್ಯಾಸವನ್ನು ಕಾಣಬಹುದು. ಬಹಳ ಪ್ರೀಮಿಯಂ ಗುಣಮಟ್ಟ ಇದರಲ್ಲಿ ಅಡಕವಾಗಿರಲಿದೆ, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಇದು ಒಳಗೊಂಡಿರಲಿದೆ’ ಎಂದು ಕೂಡ ಕಂಪನಿಯು ಹೇಳಿಕೊಂಡಿದೆ.

‘ಟೆಕ್ಟಾನ್ ವಾಹನದ ವಿನ್ಯಾಸವು ನಮ್ಮ ಪ್ಯಾಟ್ರೋಲ್ ವಾಹನದಿಂದ ಸ್ಫೂರ್ತಿ ಪಡೆದಿದೆ. ಆಧುನಿಕ ಭಾರತದ ಗ್ರಾಹಕರು ಬಯಸುವ ಎಲ್ಲವನ್ನೂ ನೀಡಲು, ಮಾರುಕಟ್ಟೆಯಲ್ಲಿ ಬದಲಾವಣೆ ತರಲು, ಪ್ರಾಬಲ್ಯ ಸಾಧಿಸಲು ಇದನ್ನು ರೂಪಿಸಲಾಗಿದೆ. ವಿನ್ಯಾಸ ಹಾಗೂ ಇದರ ಗುಣಮಟ್ಟವು ನಿಸಾನ್ ಕಂಪನಿಯ ವೈಶಿಷ್ಟ್ಯಕ್ಕೆ ಸರಿಹೊಂದುವಂತಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.