ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

125ನೇ ವರ್ಷಾಚರಣೆ ಸಂಭ್ರಮದಲ್ಲಿ ಸ್ಕೋಡಾ ಆಟೊ

Last Updated 17 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ವಾಹನ ತಯಾರಿಕೆ ಕ್ಷೇತ್ರದ ವಿಶ್ವದ ಐದು ಹಳೆಯ ಕಂಪನಿಗಳಲ್ಲಿ ಒಂದಾಗಿರುವ ಸ್ಕೋಡಾ ಆಟೊ ತನ್ನ 125ನೇ ವರ್ಷಾಚರಣೆಯನ್ನು ಈ ವರ್ಷ ವಿಶಿಷ್ಟವಾಗಿ ಆಚರಿಸುತ್ತಿದೆ. ಕಂಪನಿಯ ಭಾರತದ ಅಂಗಸಂಸ್ಥೆ ಸ್ಕೋಡಾ ಆಟೊ ಇಂಡಿಯಾ, ದೇಶದಲ್ಲಿ 2001ರಿಂದ ವಹಿವಾಟು ನಡೆಸುತ್ತಿದ್ದು, ರಾಜ್ಯದಲ್ಲಿ ತನ್ನ ಡೀಲರ್‌ಶಿಪ್‌ ಹೆಚ್ಚಿಸುವ ಮೂಲಕ ಮಾರುಕಟ್ಟೆ ಪಾಲು ಹೆಚ್ಚಿಸಲು ಕಾರ್ಯೋನ್ಮುಖವಾಗಿದೆ.

ಪಿಪಿಎಸ್‌ ಮೋಟರ್ಸ್‌ನ ಸಹಭಾಗಿತ್ವದಡಿ ಬೆಂಗಳೂರಿನ ಸದಾಶಿವನಗರದ ರಮಣ ಮಹರ್ಷಿ ರಸ್ತೆಯಲ್ಲಿ ಅತ್ಯಾಧುನಿಕ, ಕಾರ್ಪೊರೇಟ್‌ ಶೈಲಿಯ ಡೀಲರ್‌ಶಿಪ್‌ ಘಟಕ ಆರಂಭಿಸಲಾಗಿದೆ. ಇದು 4,500 ಚದರ ಅಡಿಗಳಷ್ಟು ವಿಶಾಲವಾಗಿದೆ. ಇಲ್ಲಿ ಕನಿಷ್ಠ ನಾಲ್ಕು ಕಾರುಗಳನ್ನು ಪ್ರದರ್ಶಿಸಬಹುದು. ಓಕಳಿಪುರಂನಲ್ಲಿರುವ 18,000 ಚದರ ಅಡಿ ವಿಸ್ತೀರ್ಣದ ಸರ್ವೀಸ್‌ ವರ್ಕ್‌ಶಾಪ್‌ 10 ಮೆಕ್ಯಾನಿಕಲ್ ಸ್ಟೇಷನ್‌ ಮತ್ತು ‘ಬಾಡಿ ಶಾಪ್‌ ಬೇ’ಗಳನ್ನು ಹೊಂದಿದೆ.

ಮಧ್ಯಮ ಗಾತ್ರದ ಸೆಡಾನ್‌ ಕ್ಷೇತ್ರದಲ್ಲಿ ಕಂಪನಿಯು ರಾಜ್ಯದಲ್ಲಿ ಉತ್ತಮ ಮಾರುಕಟ್ಟೆ ಪಾಲು (ಶೇಕಡ 14) ಹೊಂದಿದೆ. ಹೊಸ ಡೀಲರ್‌ಶಿಪ್‌ಗಳನ್ನು ಆರಂಭಿಸುವ ಮೂಲಕ ತನ್ನ ಮಾರುಕಟ್ಟೆ ವಿಸ್ತರಿಸಲು ಉದ್ದೇಶಿಸಿದೆ. ಮುಂಬರುವ ವರ್ಷಗಳಲ್ಲಿ 8 ಹೊಸ ಡೀಲರ್‌ಶಿಪ್‌ ತೆರೆಯಲಿದ್ದು, ಮೂರು ವರ್ಷಗಳಲ್ಲಿ ದೇಶದಲ್ಲಿನ
50 ಹೊಸ ನಗರಗಳಿಗೆ ಡೀಲರ್‌ಶಿಪ್‌ ವಿಸ್ತರಿಸಲಿದೆ.

‘ಇಂಡಿಯಾ 2.0 ಯೋಜನೆಯ ಅಂಗವಾಗಿ ಕಂಪನಿಯ ಮಾರಾಟ ಜಾಲ ವಿಸ್ತರಿಸಲಾಗುತ್ತಿದೆ. ಇದರಿಂದ ಗ್ರಾಹಕ ಕೇಂದ್ರಿತ ಮಾರಾಟ ನಂತರದ ಸೇವಾ ಸೌಲಭ್ಯಗಳು ಸುಲಭವಾಗಿ ದೊರೆಯಲಿವೆ. ಪಿಪಿಎಸ್ ಮೋಟರ್ಸ್‌ ಜತೆಗಿನ ಪಾಲುದಾರಿಕೆಯು ಸ್ಕೋಡಾ ಬ್ರ್ಯಾಂಡ್‌ನ ವ್ಯಾಪಕ ಪ್ರಚಾರಕ್ಕೆ ನೆರವಾಗಲಿದೆ. ಕೋವಿಡ್ ಪಿಡುಗಿನ ಹೊಡೆತದಿಂದ ದೇಶೀಯ ವಾಹನ ಉದ್ಯಮ ವಲಯದ ಸವಾಲುಗಳನ್ನು ಕಂಪನಿಯು ಸಮರ್ಥವಾಗಿ ನಿಭಾಯಿಸುತ್ತಿದೆ. ಮಾರಾಟದಲ್ಲಿ ನಿಧಾನವಾಗಿ ಚೇತರಿಕೆ ಕಂಡುಬರುತ್ತಿದ್ದು, ಬರಲಿರುವ ಸಾಲು, ಸಾಲು ಹಬ್ಬಗಳ ಸಂದರ್ಭದಲ್ಲಿ ವಾಹನಗಳ ಬೇಡಿಕೆ ಕುದುರಲಿದೆ’ ಎನ್ನುವುದು ಕಂಪನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕ ಜಾಕ್‌ ಹಾಲಿಸ್‌ ಅವರ ವಿಶ್ವಾಸ.

ರಾಜ್ಯದ ಗ್ರಾಹಕರಿಗೆ ಸ್ಕೋಡಾದ ಗರಿಷ್ಠ ಗುಣಮಟ್ಟದ ಕಾರ್‌ ಮತ್ತು ಹೊಸ ಟಿಎಸ್‌ಐ ಎಂಜಿನ್‌ ಮೆಚ್ಚುಗೆಗೆ ಪಾತ್ರವಾಗಿವೆ. ರ‍್ಯಾಪಿಡ್‌ ರೈಡರ್‌ ಮತ್ತು ರ‍್ಯಾಪಿಡ್‌ ರೈಡರ್‌ ಪ್ಲಸ್‌ ಕಾರ್‌ಗಳಿಗೆ ಹಬ್ಬದ ಸಂದರ್ಭದಲ್ಲಿ ಉತ್ತಮ ಬೇಡಿಕೆ ಕುದುರಲಿದೆ ಎನ್ನುವುದು ಅವರ ನಿರೀಕ್ಷೆಯಾಗಿದೆ. ಸೆಪ್ಟೆಂಬರ್‌ ವೇಳೆಗೆ ಕಂಪನಿಯು ರ್‍ಯಾಪಿಡ್‌ ಆಟೊಮೆಟಿಕ್‌ ಪರಿಚಯಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT