ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಷೇರುಪೇಟೆಗೆ ತಗುಲಿದೆ ಕೊರೊನಾ ವೈರಸ್‌ ಭೀತಿ; ಕರಗಿದ ₹ 30 ಲಕ್ಷ ಕೋಟಿ

Last Updated 3 ಫೆಬ್ರುವರಿ 2020, 6:50 IST
ಅಕ್ಷರ ಗಾತ್ರ

ಶಾಂಘೈ/ಹಾಂಗ್‌ ಕಾಂಗ್‌: ಚೀನಾ ಷೇರುಪೇಟೆಯಲ್ಲಿ ಕೊರೊನಾ ವೈರಸ್‌ ಪ್ರಭಾವ ಇಡೀ ವಹಿವಾಟು ತಳಮಟ್ಟಕ್ಕೆ ಕುಸಿಯುವಂತೆ ಮಾಡಿದೆ. ಆತಂಕದಲ್ಲಿರುವ ಹೂಡಿಕೆದಾರರು ಸೋಮವಾರ 420 ಬಿಲಿಯನ್ ಡಾಲರ್‌ (ಸುಮಾರು ₹ 30 ಲಕ್ಷ ಕೋಟಿ) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದುಏಷ್ಯಾದ ಇತರೆ ಷೇರುಪೇಟೆಗಳಲ್ಲೂ ತಲ್ಲಣ ಸೃಷ್ಟಿಸಿದೆ.

ಜನವರಿ 23ರ ಬಳಿಕ ಸೋಮವಾರ ಮತ್ತೆ ಆರಂಭವಾದ ಚೀನಾ ಷೇರುಪೇಟೆ ವಹಿವಾಟು ಇಳಿಕೆಯ ಹಾದಿ ಹಿಡಿದಿದೆ. ಒಂದು ವರ್ಷದಲ್ಲೇ ಅತಿ ಹೆಚ್ಚು, ಶೇ 8ರಷ್ಟು ಇಳಿಕೆ ಶಾಂಘೈ ಕಾಂಪೊಸಿಟ್‌ ಸೂಚ್ಯಂಕದಲ್ಲಿ ಕಂಡು ಬಂದಿದೆ. ಚೀನಾ ಷೇರುಪೇಟೆ ಪಾಲಿಗೆ ಇಂದು ನಾಲ್ಕು ವರ್ಷಗಳಲ್ಲೇ ಕರಾಳ ದಿನವಾಗಿದೆ. ಕೊರೊನಾ ವೈರಸ್‌ನಿಂದ ಸಾವಿಗೀಡಾದವರ ಸಂಖ್ಯೆ 361ಕ್ಕೆ ಏರಿದೆ (ಭಾನುವಾರದ ವರೆಗೂ). ಇದರಿಂದ ಆರ್ಥಿಕತೆಗೆ ಪೆಟ್ಟು ಬೀಳುವ ಆತಂಕದಲ್ಲಿ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದಾರೆ.

ಆರ್ಥಿಕತೆ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚೀನಾದ ಸೆಂಟ್ರಲ್‌ ಬ್ಯಾಂಕ್‌ ಹೆಚ್ಚುವರಿ ಹಣದ ಹರಿವು ನಡೆಸಿದ್ದರೂ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಲ್ಲ. ಚೀನಾದ ಕರೆನ್ಸಿ 'ಯುಆನ್‌' ಮೌಲ್ಯ ಡಾಲರ್‌ ಎದುರು ಶೇ 1.2ರಷ್ಟು ಕುಸಿದಿದು, 7.02ರಲ್ಲಿ ವಹಿವಾಟು ನಡೆದಿದೆ.

ಕೊರೊನಾ ವೈರಸ್‌ ಅತಿ ವೇಗವಾಗಿ ಹರಡುತ್ತಿರುವುದು ತೈಲ, ಅದಿರು, ತಾಮ್ರ ಹಾಗೂ ಹಲವು ಕಮಾಡಿಟಿಗಳ ಮೇಲೆ ಪರಿಣಾಮ ಬೀರಿದೆ. ರೆಸ್ಟೊರೆಂಟ್‌ಗಳಲ್ಲಿ ಮತ್ತು ಅಂಗಡಿಗಳಲ್ಲಿ ವ್ಯಾಪಾರ ಕಡಿಮೆಯಾಗಿದೆ. ಕಾರ್ಖಾನೆಗಳಲ್ಲಿ ದುಡಿಯುವವರು ಕೆಲಸಕ್ಕೆ ಹಿಂದಿರುಗುವ ಪ್ರಮಾಣದಲ್ಲಿಯೂ ವ್ಯತ್ಯಾಸವಾಗಿದೆ.

ಚೀನಾದ2,500ಕ್ಕೂ ಹೆಚ್ಚು ಷೇರುಗಳು ಶೇ 10ರಷ್ಟುಇಳಿಕೆ ಕಂಡಿವೆ.

ಭಾರತದ 'ಕೇಂದ್ರ ಬಜೆಟ್‌ 2020ರ' ಪ್ರಯುಕ್ತ ದೇಶದ ಷೇರುಪೇಟೆಗಳಲ್ಲಿ ನಡೆದ ವಿಶೇಷ ವಹಿವಾಟಿನಲ್ಲಿ ಇಳಿಕೆಯ ಹಾದಿ ಹಿಡಿದಿದ್ದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೋಮವಾರ ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿದೆ. 37 ಅಂಶ ಏರಿಕೆಯೊಂದಿಗೆ ಸೆನ್ಸೆಕ್ಸ್‌39,772 ಹಾಗೂ ನಿಫ್ಟಿ11,667 ಅಂಶ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT