ಮಂಗಳವಾರ, ಮಾರ್ಚ್ 21, 2023
28 °C

Union Budget 2023-24| ಮಕ್ಕಳ ಓದಿಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಮಕ್ಕಳು ಮತ್ತು ಹದಿಹರೆಯದವರ ಬೌದ್ಧಿಕ ವಿಕಾಸ, ಓದು ಸಂಸ್ಕೃತಿ ಬೆಳಸುವ ದೃಷ್ಟಿಯಿಂದ ‘ರಾಷ್ಟ್ರೀಯ ಡಿಜಿಟಲ್‌ ಗ್ರಂಥಾಲಯ’ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬುಧವಾರ 2023–24ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಡಿಸಿದರು.

ಭೌಗೋಳಿಕತೆ, ಭಾಷೆಗಳು, ಪ್ರಕಾರಗಳು, ಗುಣಮಟ್ಟದ ಪುಸ್ತಕಗಳು ಮತ್ತು ಸಾಧನಗಳು ಮಕ್ಕಳಿಗೆ ಸಿಗುವಂತೆ ಮಾಡಲಾಗುವುದು. ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಭೌತಿಕ ರೂಪದ ಗ್ರಂಥಾಲಯಗಳನ್ನು ಸ್ಥಾಪಿಸಲು ಮತ್ತು ಸಂಪನ್ಮೂಲ, ಮೂಲಸೌಕರ್ಯಗಳನ್ನು ಒದಗಿಸಲು ರಾಜ್ಯಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.

ಇದರ ಜತೆಗೇ, ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ರೂಢಿಸಲು ಮತ್ತು ಕೋವಿಡ್‌ ಕಾಲದಲ್ಲಿ ಅವರಿಗಾದ ಕಲಿಕೆಯ ನಷ್ಟವನ್ನು ಸರಿದೂಗಿಸಿಕೊಡಲು ‘ನ್ಯಾಷನಲ್ ಬುಕ್ ಟ್ರಸ್ಟ್’, ‘ಚಿಲ್ಡ್ರನ್ಸ್ ಬುಕ್ ಟ್ರಸ್ಟ್’ ಮತ್ತು ಇತರ ಮೂಲಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದರು.

ಕಲಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವ ಎನ್‌ಜಿಒಗಳ ಸಹಯೋಗವೂ ಈ ಉಪಕ್ರಮದ ಒಂದು ಭಾಗವಾಗಿರುತ್ತದೆ. ಹಣಕಾಸಿನ ಸಾಕ್ಷರತೆಯನ್ನು ಬೆಳೆಸಲು ಹಣಕಾಸು ವಲಯದ ನಿಯಂತ್ರಕರು ಮತ್ತು ಸಂಸ್ಥೆಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ನಿರ್ಮಲಾ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಇವನ್ನೂ ಓದಿ..

Union Budget 2023: ಧೂಮಪಾನಿಗಳ ಜೇಬಿಗೆ ಬಿಸಿ ಮುಟ್ಟಿಸಿದ ‘ಅಮೃತಕಾಲದ ಬಜೆಟ್’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು