ಶುಕ್ರವಾರ, ಫೆಬ್ರವರಿ 26, 2021
31 °C
ವಿವಿಧ ಉಪಕರಣಗಳ ತಯಾರಿಕೆಗೆ ₹8,900 ಮೌಲ್ಯದ ಬೇಡಿಕೆ

ನಷ್ಟದ ಪ್ರಮಾಣ ಕ್ಷೀಣ: ಬೆಮೆಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವರ್ಷದಿಂದ ವರ್ಷಕ್ಕೆ ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ (ಬೆಮೆಲ್‌) ಪ್ರಗತಿ ಸಾಧಿಸುತ್ತಿದ್ದು, ನಷ್ಟದ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ನಷ್ಟದ ಪ್ರಮಾಣ ₹ 160 ಕೋಟಿ ಇತ್ತು. ಈ ತ್ರೈಮಾಸಿಕದಲ್ಲಿ ಅದು ₹ 96 ಕೋಟಿಗೆ ಇಳಿದಿದೆ’ ಎಂದು ಬೆಮೆಲ್‌ ಅಧ್ಯಕ್ಷ  ದೀಪಕ್‌ ಕುಮಾರ್‌ ಹೋಟಾ ತಿಳಿಸಿದರು. 

‘ವಿವಿಧ ಉಪಕರಣಗಳ ತಯಾರಿಕೆಗೆ ಸದ್ಯ ₹8,900 ಕೋಟಿ ಮೌಲ್ಯದಷ್ಟು ಬೇಡಿಕೆ ಇದೆ. ಅದರಲ್ಲಿ ರಕ್ಷಣಾ ವಲಯದಿಂದ ₹2,673 ಕೋಟಿ, ರೈಲು ಮತ್ತು  ಮೆಟ್ರೊ ವಲಯದಿಂದ ₹5,010 ಕೋಟಿ ಹಾಗೂ ಗಣಿ ಮತ್ತು ನಿರ್ಮಾಣ ವಲಯದಿಂದ ₹1,250 ಕೋಟಿಯಷ್ಟಿದೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಈ ವರ್ಷವೂ ಈ ವಲಯಗಳಿಂದ ಕಾರ್ಯಾದೇಶ (ವರ್ಕ್‌ ಆರ್ಡರ್‌) ನಿರೀಕ್ಷೆ ಮಾಡುತ್ತಿದ್ದೇವೆ. ರಕ್ಷಣಾ ವಲಯದಿಂದ ₹1,500 ಕೋಟಿ, ರೈಲು ಮತ್ತು ಮೆಟ್ರೊದಿಂದ ₹1,600 ಕೋಟಿ, ಗಣಿ ಮತ್ತು ನಿರ್ಮಾಣ ವಲಯದಿಂದ ₹1,250 ಕೋಟಿಯಷ್ಟು ಮೌಲ್ಯದ ಉಪಕರಣಗಳ ಬೇಡಿಕೆ ನಿರೀಕ್ಷಿಸುತ್ತಿದ್ದೇವೆ.

‘ವರ್ಷದಿಂದ ವರ್ಷಕ್ಕೆ ನಮ್ಮ ವರಮಾನದಲ್ಲಿ ಪ್ರಗತಿಯಾಗುತ್ತಿದೆ. 2016–17ರಲ್ಲಿ ₹2, 499 ಕೋಟಿ ಇದ್ದದ್ದು, 2017–18ಕ್ಕೆ ₹3,246 ಕೋಟಿಯಷ್ಟಾಗಿದೆ. 2018–19ರಲ್ಲಿ ₹3,481 ಕೋಟಿಗಿಂತ ಹೆಚ್ಚಾಗುವ ನಿರೀಕ್ಷೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು