ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಬೆಲೆಗೆ ಎಲ್‌ಪಿಜಿ ಮಾರಾಟ: ಕಂಪನಿಗಳಿಗೆ ₹22 ಸಾವಿರ ಕೋಟಿ ಪರಿಹಾರ- ಠಾಕೂರ್

Last Updated 12 ಅಕ್ಟೋಬರ್ 2022, 13:01 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಗೃಹಬಳಕೆಯ ಅಡುಗೆ ಅನಿಲವನ್ನು ಕಡಿಮೆ ಬೆಲೆಗೆಮಾರಾಟ ಮಾಡಿದ್ದರಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಸರ್ಕಾರಿ ಸ್ವಾಮ್ಯದ ಮೂರು ಇಂಧನ ಚಿಲ್ಲರೆ ಮಾರಾಟ ಕಂಪನಿಗಳಿಗೆ ಒಂದು ಬಾರಿ ₹22,000 ಕೋಟಿ ಪರಿಹಾರಧನ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಬುಧವಾರ ಹೇಳಿದ್ದಾರೆ.

ಇಂಡಿಯನ್ ಆಯಿಲ್ ಕಾರ್ಪೊರೇಶನ್(ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್(ಬಿಪಿಸಿಎಲ್) ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್(ಎಚ್‌ಪಿಸಿಎಲ್) ಕಂಪನಿಗಳಿಗೆ ಒಂದು ಬಾರಿ ಪರಿಹಾರ ಧನ ಬಿಡುಗಡೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಠಾಕೂರ್ ಹೇಳಿದ್ದಾರೆ.

ಜೂನ್ 2020 ಮತ್ತು ಜೂನ್ 2022ರ ನಡುವೆ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಎಲ್‌ಪಿಜಿ ಮಾರಾಟ ಮಾಡಿದ್ದರಿಂದ ಆದ ನಷ್ಟವನ್ನು ತೈಲ ಕಂಪನಿಗಳು ಈ ಸಹಾಯಧನದಿಂದ ಸರಿದೂಗಿಸಲಿವೆ.

ಜೂನ್ 2020 ಮತ್ತು ಜೂನ್ 2022ರ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ದರ ಶೇಕಡ 300ರಷ್ಟು ಹೆಚ್ಚಾಗಿದೆ. ಆದರೆ, ಅಂತರರಾಷ್ಟ್ರೀಯ ಬೆಲೆ ವ್ಯತ್ಯಾಸದ ಭಾರವನ್ನು ಗ್ರಾಹಕರ ಮೇಲೆ ಸಂಪೂರ್ಣ ಹೇರದೆ ಶೇಕಡ 72ರಷ್ಟು ಬೆಲೆ ಏರಿಕೆ ಮಾತ್ರ ಮಾಡಲಾಗಿತ್ತು. ಹೀಗಾಗಿ, ಮೂರು ತೈಲ ಕಂಪನಿಗಳು ಗಮನಾರ್ಹ ನಷ್ಟ ಅನುಭವಿಸಿದ್ದವು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ನಷ್ಟದ ನಡುವೆಯೂ ಈ ಮೂರು ತೈಲ ಕಂಪನಿಗಳು ದೇಶದ ಜನರಿಗೆ ಅಗತ್ಯವಾದ ಅಡುಗೆ ಅನಿಲ ಸರಬರಾಜನ್ನು ಮುಂದುವರಿಸಿದ್ದವು. ಬಳಿಕ, ಈ ಕಂಪನಿಗಳಿಗೆ ಒಂದು ಬಾರಿ ಸಹಾಯಧನ ಬಿಡುಗಡೆಗೆ ಸರ್ಕಾರ ನಿರ್ಧರಿಸಿತು’ಎಂದು ಪ್ರಕಟಣೆ ತಿಳಿಸಿದೆ.

‘ಈ ನಿರ್ಧಾರವು ಸರ್ಕಾರಿ ಒಡೆತನದ ತೈಲ ಕಂಪನಿಗಳು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ತಮ್ಮ ಬದ್ಧತೆಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ, ಅಡೆತಡೆ ಇಲ್ಲದ ದೇಶೀಯ ಎಲ್‌ಪಿಜಿ ಪೂರೈಕೆಗಳನ್ನು ಖಾತ್ರಿಪಡಿಸುತ್ತದೆ ಮತ್ತು ಮೇಕ್ ಇನ್ ಇಂಡಿಯಾ ಉತ್ಪನ್ನಗಳ ಸಂಗ್ರಹಣೆಯನ್ನು ಬೆಂಬಲಿಸುತ್ತದೆ’ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT