‘ಕೋಥಾಸ್ ಕಾಫಿಯು ಗ್ರಾಹಕರಿಗೆ ವಿಶಿಷ್ಟ ಕಾಫಿಯ ಅನುಭವ ನೀಡಲಿದೆ. ಹಲವು ವರ್ಷದಿಂದ ನಾವು ನಮ್ಮ ಮೂಲ ರುಚಿಯನ್ನು ಕಾಪಾಡಿಕೊಂಡು ಬಂದಿದ್ದೇವೆ. ಈಗಾಗಲೇ ₹300 ಕೋಟಿಯ ಆದಾಯ ಹೊಂದಿರುವ ಕಂಪನಿಯು ಮುಂದಿನ ಮೂರು ವರ್ಷದಲ್ಲಿ ₹1,000 ಕೋಟಿ ಆದಾಯ ಗಳಿಸುವ ಗುರಿ ಹೊಂದಿದೆ’ ಎಂದು ಕೋಥಾಸ್ ಕಾಫಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಕೆ. ಶ್ರೀನಾಥನ್ ತಿಳಿಸಿದ್ದಾರೆ.