ನವದೆಹಲಿ: ಶೇಕಡ 20ರಷ್ಟು ಎಥೆನಾಲ್ ಮಿಶ್ರಣದ ಪೆಟ್ರೋಲ್ ಬಳಕೆಯು ವಾಹನದ ಇಂಧನ ದಕ್ಷತೆಯನ್ನು ಶೇ 2ರಿಂದ ಶೇ 5ರವರೆಗೆ ಕಡಿಮೆ ಮಾಡಬಹುದು ಎಂದು ಆಟೊಮೊಬೈಲ್ ಉದ್ಯಮದ ಪರಿಣತರು ಹೇಳಿದ್ದಾರೆ.

ಇಂಧನ ದಕ್ಷತೆಯಲ್ಲಿ ಆಗುವ ಇಳಿಕೆಯ ಪ್ರಮಾಣವು ವಾಹನದ ಮಾದರಿಯನ್ನು ಅವಲಂಬಿಸಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶೇ 20ರಷ್ಟು ಎಥೆನಾಲ್ ಬೆರೆಸಿರುವ (ಇ20) ಪೆಟ್ರೋಲ್ ಬಳಕೆಯಿಂದ ವಾಹನಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಇ20 ಪೆಟ್ರೋಲ್ಗೆ ಸರಿಹೊಂದುವ ಎಂಜಿನ್ ಇಲ್ಲದ ಹಳೆಯ ವಾಹನಗಳ ಗ್ಯಾಸ್ಕೆಟ್, ಇಂಧನದ ರಬ್ಬರ್ ಹೋಸ್ ಮತ್ತು ಪೈಪ್ಗಳು ದೀರ್ಘಾವಧಿಯಲ್ಲಿ ಸವೆಯಬಹುದು ಎಂದು ದೇಶದ ಪ್ರಮುಖ ಆಟೊಮೊಬೈಲ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಆಟೊಮೊಟಿವ್ ಎಂಜಿನಿಯರ್ಗಳು ಹೇಳಿದ್ದಾರೆ.

ಈ ಪರಿಣಾಮಗಳು ದೀರ್ಘಾವಧಿಯಲ್ಲಿ ಕಾಣಿಸಿಕೊಳ್ಳುತ್ತವೆಯೇ ವಿನಾ ತಕ್ಷಣಕ್ಕೆ ಅಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ‘ವಾಹನ ಯಾವುದು ಎಂಬುದನ್ನು ಆಧರಿಸಿ ಇಂಧನ ದಕ್ಷತೆಯು (ಮೈಲೇಜ್) ಶೇ 2–5ರವರೆಗೆ ತಗ್ಗಬಹುದು. ಪೆಟ್ರೋಲ್ಗೆ ಹೋಲಿಸಿದರೆ ಎಥೆನಾಲ್ನ ಶಾಖಾಂಶ ಮೌಲ್ಯವು (ಇಂಧನವನ್ನು ದಹಿಸಿದಾಗ ಸಿಗುವ ಶಾಖದ ಶಕ್ತಿ) ಕಡಿಮೆ ಇರುವುದು ಹೀಗಾಗುವುದಕ್ಕೆ ಕಾರಣ’ ಎಂದು ತಜ್ಞರೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ತಿಳಿಸಿದರು.

‘ಇ20 ಪೆಟ್ರೋಲ್ ಬಳಕೆಯಿಂದಾಗಿ ಇಂಧನ ದಕ್ಷತೆಯು ಬಹಳ ಕಡಿಮೆ ಆಗುತ್ತದೆ ಎಂಬುದು ಸರಿಯಲ್ಲ’ ಎಂದು ಕೇಂದ್ರ ಇಂಧನ ಸಚಿವಾಲಯವು ಈಚೆಗೆ ಹೇಳಿತ್ತು. ಆದರೆ ಇಂಧನ ದಕ್ಷತೆಯು ಎಷ್ಟರಮಟ್ಟಿಗೆ ಕಡಿಮೆ ಆಗುತ್ತದೆ ಎಂಬುದನ್ನು ಅದು ಹೇಳಿರಲಿಲ್ಲ.

‘ಇಂಧನ ದಕ್ಷತೆ ಕಡಿಮೆ ಆಗುವುದಾಗಿದ್ದರೆ, ಅದು ಇ10 (ಶೇ 10ರಷ್ಟು ಎಥೆನಾಲ್ ಮಿಶ್ರಣದ ಪೆಟ್ರೋಲ್ ಬಳಸಲು ರೂಪಿಸಿರುವ ಎಂಜಿನ್) ವಾಹನಗಳಲ್ಲಿ ಬಹಳ ಕಡಿಮೆ. ಕೆಲವು ವಾಹನ ತಯಾರಿಕಾ ಕಂಪನಿಗಳು 2009ರಿಂದ ಇ20 ವಾಹನಗಳನ್ನು ತಯಾರಿಸುತ್ತಿವೆ. ಇಂತಹ ವಾಹನಗಳಲ್ಲಿ ಇಂಧನ ದಕ್ಷತೆಯು ಕಡಿಮೆ ಆಗುವ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದು ಸಚಿವಾಲಯವು ಹೇಳಿತ್ತು.

‘ಇ20 ಎಂಜಿನ್ ಹೊಂದಿರುವ ವಾಹನಗಳು ಹೆಚ್ಚು ಉತ್ತಮವಾದ ವೇಗೋತ್ಕರ್ಷವನ್ನು ನೀಡುತ್ತವೆ. ಇದು ನಗರಗಳಲ್ಲಿ ಚಾಲನೆ ಮಾಡುವಾಗ ಬಹಳ ಮುಖ್ಯವಾಗುತ್ತದೆ’ ಎಂದು ಕೂಡ ಸಚಿವಾಲಯವು ವಿವರಿಸಿತ್ತು.

ಆಗಸ್ಟ್ 4ರಂದು ಎಕ್ಸ್ ಮೂಲಕ ಇನ್ನೊಂದು ಹೇಳಿಕೆ ನೀಡಿದ್ದ ಸಚಿವಾಲಯವು, ‘ಪೆಟ್ರೋಲ್ಗೆ ಹೋಲಿಸಿದರೆ ಎಥೆನಾಲ್ನ ಇಂಧನ ಸಾಂದ್ರತೆಯು ಕಡಿಮೆ ಇರುವ ಕಾರಣಕ್ಕೆ, ಇಂಧನ ದಕ್ಷತೆಯು ತುಸು ಕಡಿಮೆ ಆಗುತ್ತದೆ. ಇ10 ಪೆಟ್ರೋಲ್ಗೆ ವಿನ್ಯಾಸಗೊಳಿಸಿ ಇ20 ಪೆಟ್ರೋಲ್ಗೆ ಮರುಹೊಂದಿಸಿರುವ ಎಂಜಿನ್ಗಳಲ್ಲಿ ಇಂಧನ ದಕ್ಷತೆಯು ಶೇ 1ರಿಂದ ಶೇ 2ರಷ್ಟು ಕಡಿಮೆ ಆಗಬಹುದು. ಇನ್ನುಳಿದ ಎಂಜಿನ್ಗಳಲ್ಲಿ ಶೇ 3–6ರಷ್ಟು ಕಡಿಮೆ ಆಗಬಹುದು’ ಎಂದಿತ್ತು.

ಈ ಕುರಿತಾಗಿ ಪ್ರತಿಕ್ರಿಯೆ ನೀಡಲು ಮಾರುತಿ ಸುಜುಕಿ ಮತ್ತು ಹುಂಡೈ ಮೋಟರ್ ಇಂಡಿಯಾ ನಿರಾಕರಿಸಿವೆ. ‘ನಮ್ಮ ವಾಹನಗಳು ಇ20 ಪೆಟ್ರೋಲ್ಗೆ ವಿನ್ಯಾಸಗೊಂಡಿವೆ’ ಎಂದು ಟಾಟಾ ಮೋಟರ್ಸ್ನ ವಕ್ತಾರರೊಬ್ಬರು ತಿಳಿಸಿದ್ದಾರೆ.

‘ಇ20 ಇಂಧನಕ್ಕೆ ಸೂಕ್ತವಾಗಿ ರೂಪುಗೊಂಡಿರುವ ಎಂಜಿನ್ಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಅದಕ್ಕೆ ಸರಿಹೊಂದದ ಎಂಜಿನ್ಗಳಲ್ಲಿನ ಗ್ಯಾಸ್ಕೆಟ್, ಇಂಧನದ ರಬ್ಬರ್ ಹೋಸ್, ಪೈಪ್ ದೀರ್ಘಾವಧಿಯಲ್ಲಿ ಸವೆಯಬಹುದು’ ಎಂದು ಇನ್ನೊಬ್ಬ ತಜ್ಞ ಕೂಡ ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.