ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2024–25ನೇ ಹಣಕಾಸು ವರ್ಷ: ದೇಶದ ರಫ್ತು ವಹಿವಾಟು ಶೇ 15ರಷ್ಟು ಹೆಚ್ಚಳ ನಿರೀಕ್ಷೆ

Published 16 ಮೇ 2024, 15:41 IST
Last Updated 16 ಮೇ 2024, 15:41 IST
ಅಕ್ಷರ ಗಾತ್ರ

ನವದೆಹಲಿ: 2024–25ನೇ ಹಣಕಾಸು ವರ್ಷದಲ್ಲಿ ದೇಶದ ರಫ್ತು ವಹಿವಾಟು ಮೌಲ್ಯವು ₹41.74 ಲಕ್ಷ ಕೋಟಿ ದಾಟಲಿದೆ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ (ಎಫ್‌ಐಇಒ) ಅಂದಾಜಿಸಿದೆ.

2023–24ನೇ ಆರ್ಥಿಕ ವರ್ಷದಲ್ಲಿ ₹36.48 ಲಕ್ಷ ಕೋಟಿ ರಫ್ತು ವಹಿವಾಟು ನಡೆದಿತ್ತು. ಆದರೆ, ಇದರ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 3ರಷ್ಟು ಕುಸಿತವಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ₹5.84 ಲಕ್ಷ ಕೋಟಿಯಷ್ಟು ಏರಿಕೆಯಾಗುವ (ಶೇ 12ರಿಂದ ಶೇ 15ರಷ್ಟು) ನಿರೀಕ್ಷೆಯಿದೆ ಎಂದು ಹೇಳಿದೆ.

‘ದೇಶದ ಸೇವಾ ರಫ್ತು ವಹಿವಾಟು ಮೌಲ್ಯವು ₹33.39 ಲಕ್ಷ ಕೋಟಿ ದಾಟುವ ನಿರೀಕ್ಷೆಯಿದೆ. ಅಮೆರಿಕ, ಯುರೋಪ್‌ ಮಾರುಕಟ್ಟೆಗಳು ದೇಶದ ರಫ್ತು ಹೆಚ್ಚಳಕ್ಕೆ ನೆರವಾಗಲಿವೆ’ ಎಂದು ಒಕ್ಕೂಟದ ಅಧ್ಯಕ್ಷ ಅಶ್ವಿನಿ ಕುಮಾರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT