ಜೈಸಲ್ಮೇರ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ ಸಭೆ ನಡೆಯಲಿದೆ.

ಆರೋಗ್ಯ ಮತ್ತು ಜೀವ ವಿಮೆ ಕಂತಿನ ಮೇಲೆ ವಿಧಿಸುತ್ತಿರುವ ಶೇ 18ರಷ್ಟು ಜಿಎಸ್ಟಿ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಚಿವರ ಸಮಿತಿಯು, ಅವಧಿ ವಿಮೆ (ಟರ್ಮ್ ಲೈಫ್ ಇನ್ಶೂರೆನ್ಸ್) ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆ ಕಂತಿನ ಮೇಲಿನ ತೆರಿಗೆ ಹಿಂಪಡೆಯುವ ಬಗ್ಗೆ ಶಿಫಾರಸು ಮಾಡಿದೆ.

ಹಿರಿಯ ನಾಗರಿಕರನ್ನು ಹೊರತುಪಡಿಸಿ ವೈಯಕ್ತಿಕ ವಿಮೆದಾರರ ₹5 ಲಕ್ಷದೊಳಗಿನ ಆರೋಗ್ಯ ವಿಮಾ ಕಂತಿನ ಮೇಲೆ ತೆರಿಗೆ ವಿನಾಯಿತಿ ನೀಡಲು ವರದಿ ಸಲ್ಲಿಸಿದೆ. ಈ ಶಿಫಾರಸುಗಳಿಗೆ ಸಭೆಯು ಅಂಕಿತ ಹಾಕುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿದೆ.

ಅಲ್ಲದೆ ದುಬಾರಿ ಕೈಗಡಿಯಾರ, ಶೂ ಮತ್ತು ಉಡುಪುಗಳ ಮೇಲಿನ ಜಿಎಸ್ಟಿ ಹೆಚ್ಚಿಸುವಂತೆ ಸಮಿತಿಯು ಶಿಫಾರಸು ಮಾಡಿದೆ. ಇದಕ್ಕೂ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ ಎಂದು ಹೇಳಿವೆ.

ಪ್ರಸ್ತುತ ಆನ್ಲೈನ್ ಮೂಲಕ ಆಹಾರ ಪೂರೈಸುವ ಸ್ವಿಗ್ಗಿ ಮತ್ತು ಜೊಮಾಟೊದ ಆಹಾರ ವಿತರಣೆ ಮೇಲೆ ಸದ್ಯ ಶೇ 18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಇದನ್ನು ಶೇ 5ಕ್ಕೆ ಕಡಿತಗೊಳಿಸುವ ಸಭೆಯು ಅಂತಿಮ ತೀರ್ಮಾನ ಪ್ರಕಟಿಸುವ ನಿರೀಕ್ಷೆಯಿದೆ. ಇದರಿಂದ ಗ್ರಾಹಕರ ಮೇಲಿನ ಹೊರೆ ಇಳಿಕೆಯಾಗಲಿದೆ.

ಬಳಕೆ ಮಾಡಿದ ವಿದ್ಯುತ್ಚಾಲಿತ ಕಾರುಗಳ ಮಾರಾಟದ ಮೇಲೆ ಶೇ 18ರಷ್ಟು ತೆರಿಗೆ ವಿಧಿಸುವ ಬಗ್ಗೆ ರಾಜ್ಯ ಮತ್ತು ಕೇಂದ್ರದ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಸಭೆಯಲ್ಲಿ ಪ್ರಸ್ತಾವ ಮಂಡಿಸುವ ಸಾಧ್ಯತೆಯಿದೆ. ಅಲ್ಲದೆ, ಸಣ್ಣ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟದ ಮೇಲೆ ಸದ್ಯ ವಿಧಿಸುತ್ತಿರುವ ಶೇ 12ರಷ್ಟು ಜಿಎಸ್ಟಿಯನ್ನು ಶೇ 18ಕ್ಕೆ ಹೆಚ್ಚಿಸುವ ಬಗ್ಗೆಯೂ ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಜಿಎಸ್ಟಿ ದರ ಸರಳೀಕರಣಕ್ಕೆ ಸಂಬಂಧಿಸಿದಂತೆ ರಚಿಸಿರುವ ಸಚಿವರ ಸಮಿತಿಯು 148 ಸರಕುಗಳ ಮೇಲಿನ ಜಿಎಸ್ಟಿ ಪರಿಷ್ಕರಣೆ ಬಗ್ಗೆ ವರದಿ ಸಲ್ಲಿಸಿದೆ. ಈ ಬಗ್ಗೆ ಸಭೆಯು ಚರ್ಚಿಸುವ ನಿರೀಕ್ಷೆಯಿದೆ.

ಬಾಟಲಿಯಲ್ಲಿರುವ ಪಾನೀಯಗಳು, ಸಿಗರೇಟ್, ತಂಬಾಕು ಹಾಗೂ ಅದಕ್ಕೆ ಸಂಬಂಧಿಸಿದ ಪದಾರ್ಥಗಳ ಮೇಲೆ ಸದ್ಯ ಶೇ 28ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಇದನ್ನು ಶೇ 35ಕ್ಕೆ ಹೆಚ್ಚಿಸಲು ಸಮಿತಿಯ ಶಿಫಾರಸು ಮಾಡಿದೆ. ಈ ಕುರಿತು ಸಭೆಯು ಅಂತಿಮ ನಿರ್ಧಾರ ಪ್ರಕಟಿಸಲಿದೆ.

ಅವಧಿ ವಿಸ್ತರಣೆ ಸಾಧ್ಯತೆ

ಜಿಎಸ್ಟಿ ಪರಿಹಾರ ಸೆಸ್ಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಮಂಡಳಿಯು ಸಚಿವರ ಸಮಿತಿ ರಚಿಸಿದೆ. ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರ ನೇತೃತ್ವದಲ್ಲಿ 10 ಸಚಿವರು ಈ ಸಮಿತಿಯಲ್ಲಿ ಇದ್ದಾರೆ. ಆರೋಗ್ಯಕ್ಕೆ ಹಾನಿಕರವಾದ ವಸ್ತುಗಳು ಹಾಗೂ ಐಷಾರಾಮಿ ಸರಕುಗಳ ಮೇಲೆ ಜಿಎಸ್ಟಿ ಅಡಿ ವಿಧಿಸುವ ಪರಿಹಾರ ಸೆಸ್ ಅವಧಿಯು 2026ರ ಮಾರ್ಚ್ಗೆ ಮುಕ್ತಾಯವಾಗುತ್ತದೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಈ ತಿಂಗಳ ಅಂತ್ಯದೊಳಗೆ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿತ್ತು. ಅಂತಿಮ ವರದಿ ಸಲ್ಲಿಕೆ ಅವಧಿಯನ್ನು ಮತ್ತೆ ಆರು ತಿಂಗಳವರೆಗೆ ವಿಸ್ತರಿಸುವ ಬಗ್ಗೆ ಸಮಿತಿಯು ಸಭೆಯಲ್ಲಿ ಮನವಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಜಿಎಸ್ಟಿಗೆ ವಿಮಾನ ಇಂಧನ ಸೇರ್ಪಡೆ ನಿರೀಕ್ಷೆ

ಕಚ್ಚಾ ತೈಲ ನೈಸರ್ಗಿಕ ಅನಿಲ ಪೆಟ್ರೋಲ್ ಡೀಸೆಲ್ ಮತ್ತು ವಿಮಾನ ಇಂಧನವನ್ನು (ಎಟಿಎಫ್) ಜಿಎಸ್ಟಿ ಕಾಯ್ದೆಯಡಿ ಸೇರ್ಪಡೆಗೊಳಿಸಲಾಗಿದೆ. ಆದರೆ ಇವುಗಳ ಮೇಲೆ ಜಿಎಸ್ಟಿ ವಿಧಿಸಲಾಗುತ್ತಿಲ್ಲ. ಇವುಗಳ ಮೇಲೆ ಕೇಂದ್ರ ಸರ್ಕಾರವು ಅಬಕಾರಿ ಸುಂಕ ವಿಧಿಸಿದರೆ ರಾಜ್ಯ ಸರ್ಕಾರಗಳು ಮೌಲ್ಯವರ್ಧಿತ ತೆರಿಗೆ ಹಾಗೂ ಅಬಕಾರಿ ತೆರಿಗೆ ವಿಧಿಸುತ್ತಿವೆ. ವಿಮಾನ ಇಂಧನವನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಬಗ್ಗೆ ಸಭೆಯು ಚರ್ಚಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.