ನವದೆಹಲಿ: 2031ರ ವೇಳೆಗೆ ದೇಶದಲ್ಲಿ 5ಜಿ ಚಂದಾದಾರರ ಸಂಖ್ಯೆ 100 ಕೋಟಿ ದಾಟುವ ನಿರೀಕ್ಷೆ ಇದೆ ಎಂದು ಎರಿಕ್ಸನ್ ಮೊಬಿಲಿಟಿ ವರದಿ ಗುರುವಾರ ತಿಳಿಸಿದೆ.

‘ಈಗ ದೇಶದಲ್ಲಿ ತಿಂಗಳಿಗೆ ಪ್ರತಿ ಒಂದು ಸ್ಮಾರ್ಟ್ಫೋನ್ ಮೂಲಕ ಸರಾಸರಿ 36 ಜಿ.ಬಿ ಡೇಟಾ ಬಳಕೆ ಆಗುತ್ತಿದೆ. ಇದು 2031ರ ವೇಳೆಗೆ 65 ಜಿ.ಬಿಗೆ ಹೆಚ್ಚಳವಾಗಲಿದೆ. ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ಡೇಟಾ ಬಳಸುವ ರಾಷ್ಟ್ರವಾಗಿದೆ’ ಎಂದು ಎರಿಕ್ಸನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಬನ್ಸಾಲ್ ಹೇಳಿದ್ದಾರೆ.

ದೇಶದಲ್ಲಿ ಕ್ಷಿಪ್ರವಾಗಿ 5ಜಿ ಅಳವಡಿಕೆ ಆಗುತ್ತಿದೆ. 2025ರ ಅಂತ್ಯದ ವೇಳೆಗೆ ದೇಶದಲ್ಲಿ 5ಜಿ ಚಂದಾದಾರರ ಸಂಖ್ಯೆ 3.94 ಕೋಟಿಗೆ ತಲುಪಲಿದೆ ಎಂದು ತಿಳಿಸಿದೆ.

ಜಾಗತಿಕವಾಗಿ 2031ರ ವೇಳೆಗೆ 5ಜಿ ಚಂದಾದಾರರ ಸಂಖ್ಯೆ 640 ಕೋಟಿಗೆ ತಲುಪಬಹುದು ಎಂದು ಅಂದಾಜಿಸಿದೆ. ಫಿಕ್ಸೆಡ್ ವೈರ್ಲೆಸ್ ಅಕ್ಸೆಸ್ (ಎಫ್ಡಬ್ಲ್ಯುಎ) ಅನ್ನು ಸಹ ಜಾಗತಿಕವಾಗಿ 140 ಕೋಟಿ ಜನರು ಅಳವಡಿಸಿಕೊಳ್ಳಬಹುದು ಎಂದು ಹೇಳಿದೆ.

2031ರ ವೇಳೆಗೆ 6ಜಿ ಚಂದಾದಾರರ ಸಂಖ್ಯೆ ಜಾಗತಿಕವಾಗಿ 18 ಕೋಟಿಯಾಗಬಹುದು ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.