ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ನಿಂದ ಬಹು ಉಪಯೋಗಿ ಬ್ಯಾಟರಿ

Published 4 ಅಕ್ಟೋಬರ್ 2023, 16:46 IST
Last Updated 4 ಅಕ್ಟೋಬರ್ 2023, 16:46 IST
ಅಕ್ಷರ ಗಾತ್ರ

ಗ್ರೇಟರ್‌ ನೊಯಿಡಾ: ರಿಲಯನ್ಸ್‌ ಕಂಪನಿಯು ವಿದ್ಯುತ್‌ ಚಾಲಿತ ವಾಹನಗಳಿಗೆ ರಿಮೂವಬಲ್ ಮತ್ತು ಸ್ವ್ಯಾಪ್‌ ಮಾಡುವ ಬ್ಯಾಟರಿಯನ್ನು ಅನಾವರಣ ಮಾಡಿದೆ. ಇನ್‌ವರ್ಟರ್‌ ಜೊತೆಗೆ ಗೃಹೋಪಯೋಗಿ ಸಾಧನಗಳಲ್ಲಿಯೂ ಈ ಬ್ಯಾಟರಿ ಬಳಸಬಹುದು ಎಂದು ಕಂಪನಿ ತಿಳಿಸಿದೆ.

ನವೀಕರಿಸಬಲ್ಲ ಇಂಧನಗಳಿಗೆ ಸಂಬಂಧಿಸಿದ ವಸ್ತುಪ್ರದರ್ಶನದಲ್ಲಿ ಕಂಪನಿಯು ಈ ಬಹುಉಪಯೋಗಿ ಬ್ಯಾಟರಿಯನ್ನು ಪ್ರದರ್ಶಿಸಿದೆ.

ಬ್ಯಾಟರಿಯನ್ನು ವಾಹನಗಳಿಗೆ ಬಳಸುವುದಷ್ಟೇ ಅಲ್ಲದೆ ಟಿ.ವಿ, ಮಿಕ್ಸಿ... ಹೀಗೆ ಗೃಹೋಪಯೋಗಿ ಉಪಕರಣಗಳಿಗೂ ಬಳಕೆ ಮಾಡುವ ಉದ್ದೇಶದಿಂದ  ರೂಪಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಬಾರದು ಎನ್ನುವ ಷರತ್ತಿನೊಂದಿಗೆ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಿಲಯನ್ಸ್‌ನ ಬ್ಯಾಟರಿ ಸ್ವ್ಯಾಪ್‌ ಕೇಂದ್ರಗಳಲ್ಲಿ ಬ್ಯಾಟರಿ ಬದಲಿಸಿಕೊಳ್ಳಬಹುದು ಅಥವಾ ಮನೆಗಳಲ್ಲಿ ಸೌರ ವಿದ್ಯುತ್ ಫಲಕಗಳ ಮೂಲಕವೂ ಚಾರ್ಜ್‌ ಮಾಡಬಹುದು ಎಂದು ಅವರು ಹೇಳಿದ್ದಾರೆ. ಕಂಪನಿಯು  ಈ ಬ್ಯಾಟರಿಗಳ ಮಾರಾಟವನ್ನು ಯಾವಾಗಿನಿಂದ ಆರಂಭಿಸಲಿದೆ ಎನ್ನುವ ಕುರಿತು ಅವರು ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT