ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಚಿನ್ನಾಭರಣ ಹಾಲ್‌ಮಾರ್ಕ್‌ ಗಡುವು ವಿಸ್ತರಣೆಗೆ ಮನವಿ

Last Updated 11 ಜೂನ್ 2020, 4:14 IST
ಅಕ್ಷರ ಗಾತ್ರ

ಕೋಲ್ಕತ್ತ: ಲಾಕ್‌ಡೌನ್‌ ಜಾರಿಯಲ್ಲಿ ಇರುವುದರಿಂದ ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್‌ ಕಡ್ಡಾಯಗೊಳಿಸುವ ಅವಧಿಯನ್ನು ವಿಸ್ತರಿಸುವಂತೆ ವರ್ತಕರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಈ ಹಿಂದೆ ಹೊರಡಿಸಿರುವ ಅಧಿಸೂಚನೆಯಂತೆ,2021ರ ಜನವರಿ 15ರಿಂದ ಕಡ್ಡಾಯವಾಗಿ14,18,22 ಕ್ಯಾರಟ್‌ಗಳ ಹಾಲ್‌ಮಾರ್ಕ್‌ ಇರುವ ಚಿನ್ನಾಭರಣಗಳನ್ನು ಮಾತ್ರವೇ ಮಾರಾಟ ಮಾಡಬೇಕು.

‘ಲಾಕ್‌ಡೌನ್‌ನಿಂದಾಗಿ ಮೂರು ತಿಂಗಳ ಮಾರಾಟ ಮತ್ತು ಕೆಲಸವನ್ನು ಕಳೆದುಕೊಂಡಿದ್ದೇವೆ. ಮಾರಾಟವು ಸಹಜ ಸ್ಥಿತಿಗೆ ಮರಳಲು ಇನ್ನೂ ಮೂರರಿಂದ ನಾಲ್ಕು ತಿಂಗಳುಗಳೇ ಬೇಕಾಗಲಿವೆ. ಹೀಗಾಗಿ ಈ ಚಿನ್ನಾಭರಣಗಳು ಹಾಲ್‌ಮಾರ್ಕ್‌ ಇಲ್ಲದೇ ಉಳಿಯಲಿವೆ. ಹೀಗಾಗಿ 2021ರ ಜುಲೈವರೆಗೆ ಗಡುವನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ’ ಎಂದು ಅಖಿಲ ಭಾರತ ಹರಳು ಮತ್ತು ಚಿನ್ನಾಭರಣ ಸಮಿತಿಯ ಉಪಾಧ್ಯಕ್ಷ ಶಂಕರ್ ಸೇನ್‌ ತಿಳಿಸಿದ್ದಾರೆ.

‘ಚಿನ್ನಾಭರಣಗಳ ರಿಟೇಲ್‌ ಮಾರಾಟವೂ ಎರಡೂವರೆ ತಿಂಗಳಿನಿಂದ ಭಾರಿ ಕುಸಿತ ಕಂಡಿದೆ. ಶುಭ ಸಮಾರಂಭಗಳ ಅವಧಿಯೂ ಬಹುತೇಕ ಮುಗಿದಿವೆ. ಅರು ತಿಂಗಳಿನಲ್ಲಿ ಏನಾಗಲಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಹೀಗಾಗಿ ಅವಧಿ ವಿಸ್ತರಿಸುವಂತೆ ಶಿಫಾರಸು ಮಾಡುತ್ತಿದ್ದೇವೆ’ ಎಂದು ಇಂಡಿಯನ್‌ ಅಸೋಸಿಯೇಷನ್‌ ಆಫ್‌ ಹಾಲ್‌ಮಾರ್ಕಿಂಗ್‌ ಸೆಂಟರ್ಸ್‌ನ ಅಧ್ಯಕ್ಷ ಉದಯ್ ಶಿಂದೆ ಹೇಳಿದ್ದಾರೆ.

ತಪ್ಪಿದರೆ ಶಿಕ್ಷೆ: ಒಂದು ವರ್ಷಕ್ಕೂ ಅಧಿಕ ಕಾಲಾವಕಾಶ ನೀಡಿದ್ದು,ಎಲ್ಲಾ ಚಿನ್ನಾಭರಣ ವರ್ತಕರು ಭಾರತೀಯ ಮಾನದಂಡ ಮಂಡಳಿಯಲ್ಲಿ (ಬಿಐಎಸ್‌) ನೋಂದಾಯಿಸಿಕೊಳ್ಳಬೇಕು. ಹಾಲ್‌ಮಾರ್ಕ್‌ ಇರುವ ಚಿನ್ನಾಭರಣಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದುಕೇಂದ್ರ ಸರ್ಕಾರ ಹೇಳಿದೆ.ನಿಬಂಧನೆ ಉಲ್ಲಂಘಿಸುವವರು ದಂಡ ಪಾವತಿಸುವುದರ ಜತೆಗೆ ಒಂದು ವರ್ಷ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದೂ ಎಚ್ಚರಿಸಿದೆ.

2000ದಿಂದಲೂಹಾಲ್‌ಮಾರ್ಕ್‌ ಬಳಕೆ ಆರಂಭವಾಗಿದೆ. ಸದ್ಯ ಬಳಕೆಯಲ್ಲಿರುವ ಚಿನ್ನಾಭರಣಗಳಲ್ಲಿ ಶೇ 40ರಷ್ಟುಹಾಲ್‌ಮಾರ್ಕ್‌ ಒಳಗೊಂಡಿವೆ.ಹಾಲ್‌ಮಾರ್ಕ್‌ ಹಾಕಿದ ಆಭರಣಗಳ ತೂಕ ಎಷ್ಟೇ ಇರಲಿ ಅವುಗಳಿಗೆ ಹೆಚ್ಚುವರಿಯಾಗಿ ₹ 30 ಬೆಲೆ ವಿಧಿಸಬೇಕಾಗುತ್ತದೆ. ಬ್ರ್ಯಾಂಡೆಡ್‌ ಆಭರಣ ಮಾರಾಟಗಾರರು ಈ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವಂತಿಲ್ಲ. ಆದರೆ, ಬ್ರ್ಯಾಂಡೆಡ್‌ರಹಿತ ಸ್ಥಳೀಯ ವರ್ತಕರು ಈ ವೆಚ್ಚವನ್ನು ಗ್ರಾಹಕರಿಂದ ವಸೂಲಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT