ಗುರುವಾರ , ಮೇ 19, 2022
20 °C

ಬೆಂಗಳೂರಿನಲ್ಲಿ ಶನಿವಾರ ಪೆಟ್ರೋಲ್‌ 31 ಪೈಸೆ, ಡೀಸೆಲ್‌ 38 ಪೈಸೆ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಶನಿವಾರವೂ ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆ ಮಾಡಿವೆ.

ಬೆಂಗಳೂರಿನಲ್ಲಿ ಶನಿವಾರ ಪೆಟ್ರೋಲ್‌ ದರ ಪ್ರತಿ ಲೀಟರಿಗೆ 31 ಪೈಸೆ ಹೆಚ್ಚಿಸಲಾಗಿದ್ದು, ₹ 91.40ಕ್ಕೆ ತಲುಪಿದೆ. ಡೀಸೆಲ್‌ ದರ ಪ್ರತಿ ಲೀಟರಿಗೆ 38 ಪೈಸೆ ಏರಿಕೆ ಮಾಡಿದ್ದು ₹ 83.47ರಂತೆ ಮಾರಾಟವಾಗಿದೆ. ಆರು ದಿನಗಳಲ್ಲಿ ಪೆಟ್ರೋಲ್‌ ದರ ಒಂದು ಲೀಟರಿಗೆ ₹ 1.24 ಹಾಗೂ ಡೀಸೆಲ್‌ ದರ ಒಂದು ಲೀಟರಿಗೆ ₹ 1.71 ರಷ್ಟು ಏರಿಕೆಯಾಗಿದೆ.

ಮುಂಬೈನಲ್ಲಿ ಪೆಟ್ರೋಲ್‌ ದರ 30 ಪೈಸೆ ಹೆಚ್ಚಾಗಿ ದಾಖಲೆಯ ಮಟ್ಟವಾದ ₹ 94.93ಕ್ಕೆ ಏರಿಕೆಯಾಗಿದೆ. ಡೀಸೆಲ್‌ ದರ 36 ಪೈಸೆ ಹೆಚ್ಚಾಗಿ ₹ 85.70ಕ್ಕೆ ತಲುಪಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 88.41 ಮತ್ತು ಡೀಸೆಲ್‌ ದರ ₹ 78.74ಕ್ಕೆ ತಲುಪಿದೆ. ದೆಹಲಿ ಮತ್ತು ಮುಂಬೈನಲ್ಲಿ ಐದು ದಿನಗಳಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರಿಗೆ ₹ 1.51 ಮತ್ತು ಡೀಸೆಲ್‌ ದರ ಪ್ರತಿ ಲೀಟರಿಗೆ ₹ 1.56ರಷ್ಟು ಏರಿಕೆಯಾಗಿದೆ.

ಇಂಧನ ದರಗಳನ್ನು ನಿರಂತರವಾಗಿ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತೀವ್ರ ಟೀಕೆ ನಡೆಸುತ್ತಿವೆ. ಜನಸಾಮಾನ್ಯರ ಮೇಲಿನ ಹೊರೆ ತಗ್ಗಿಸಲು ತಕ್ಷಣವೇ ಎಕ್ಸೈಸ್‌ ಸುಂಕದಲ್ಲಿ ಕಡಿತ ಮಾಡುವಂತೆ ಬೇಡಿಕೆ ಇಟ್ಟಿವೆ. ಆದರೆ, ಇಂಧನ ದರ ತಗ್ಗಿಸಲು ಎಕ್ಸೈಸ್‌ ಸುಂಕದಲ್ಲಿ ಇಳಿಕೆ ಮಾಡುವ ಬಗ್ಗೆ ಸರ್ಕಾರ ಪರಿಗಣಿಸುವುದಿಲ್ಲ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಬುಧವಾರವೇ ಸಂಸತ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೋವಿಡ್‌–19ಗೆ ಲಸಿಕೆ ಲಭ್ಯವಾಗುತ್ತಿರುವುದರಿಂದ ತೈಲ ಬೇಡಿಕೆಯಲ್ಲಿ ಸುಧಾರಣೆ ಕಂಡುಬರುತ್ತಿದೆ. ಈ ಕಾರಣಕ್ಕಾಗಿ ಒಂದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಕಚ್ಚಾ ತೈಲ ದರವು ಒಂದು ಬ್ಯಾರಲ್‌ಗೆ 61 ಡಾಲರ್‌ಗಳಿಗೆ ತಲುಪಿದೆ ಎಂದೂ ಅವರು ಹೇಳಿದ್ದರು.

2020ರ ಮಾರ್ಚ್ ತಿಂಗಳ ಮಧ್ಯಭಾಗದಿಂದ ಪೆಟ್ರೋಲ್‌ನ ರಿಟೇಲ್‌ ದರ ಪ್ರತಿ ಲೀಟರಿಗೆ ₹ 18.87ರಷ್ಟು ಹೆಚ್ಚಿಸಲಾಗಿದೆ. ಡೀಸೆಲ್‌ ದರವು ಪ್ರತಿ ಲೀಟರಿಗೆ ₹ 16.45ರಷ್ಟು ಹೆಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು